ವಾಷಿಂಗ್ಟನ್: ಅಧಿಕೃತವಾಗಿ ಅಮೆರಿಕದ ಅಧ್ಯಕ್ಷ ಪಟ್ಟವನ್ನು ಅಲಂಕರಿಸುವ ಮೊದಲೇ ಡೊನಾಲ್ಡ್ ಟ್ರಂಪ್ (Donald Trump) ಉದ್ಯಮಿಗಳು, ಕಂಪನಿಗಳ ಮುಖ್ಯಸ್ಥರ ಜೊತೆ ಸಭೆ ನಡೆಸಲು ಆರಂಭಿಸಿದ್ದಾರೆ.
ಆಪಲ್ ಸಿಇಒ ಟಿಮ್ ಕುಕ್ (Apple CEO Tim Cook) ಫ್ಲೋರಿಡಾದ ಮಾರ್-ಎ-ಲಾಗೊ ರೆಸಾರ್ಟ್‌ನಲ್ಲಿ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಭೋಜನ ಕೂಟದಲ್ಲಿ ಭಾಗಿಯಾಗಿದ್ದಾರೆ.
ಚುನಾವಣೆಯಲ್ಲಿ ಜಯಗಳಿಸಿದ ನಂತರ ಟ್ರಂಪ್ ಅವರ ಜೊತೆಗಿನ ಮೊದಲ ಭೇಟಿ ಇದಾಗಿದೆ. ಮೊದಲ ಅವಧಿಯಲ್ಲಿ ಟ್ರಂಪ್ ಉದ್ಯಮಿಗಳ ಜೊತೆ ನೇರ ಸಂಬಂಧ ಹೊಂದಿದ್ದರು. ತನ್ನ ಎರಡನೇ ಅವಧಿಯಲ್ಲೂ ಟ್ರಂಪ್ ಉದ್ಯಮಿಗಳ ಜೊತೆ ಉತ್ತಮ ಸಂಬಂಧ ಹೊಂದುವ ಭಾಗವಾಗಿ ಈ ಭೇಟಿ ನಡೆದಿದೆ ಎಂದು ವರದಿಯಾಗಿದೆ.
ನವೆಂಬರ್‌ನಲ್ಲಿ ಟ್ರಂಪ್ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರನ್ನು ಭೇಟಿಯಾಗಿದ್ದರೆ ಮುಂದಿನ ವಾರ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ.
ಮೆಟಾ, ಅಮೆಜಾನ್, OpenAI ಸೇರಿದಂತೆ ಹಲವು ಟೆಕ್ ಕಂಪನಿಗಳು ಮತ್ತು ನಾಯಕರು ಟ್ರಂಪ್ ಅವರ ಪ್ರಮಾಣವಚನ ಕಾರ್ಯಕ್ರಮಕ್ಕೆ 1 ಮಿಲಿಯನ್ ಡಾಲರ್ ನೀಡುವುದಾಗಿ ಘೋಷಿಸಿವೆ.