ಮಡಿಕೇರಿ: ಹಿಜಬ್-ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಸೂಚನೆ ಮತ್ತು ಮೇಲ್ವಿಚಾರಣೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಹೋಗಿರುವವರಿಗೆ ತಲೆ ಕೆಟ್ಟಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ವಾಗ್ದಾಳಿ ನಡೆಸಿದರು.
Advertisement
ಹಿಜಬ್, ಕೇಸರಿ ಶಾಲು ಕುರಿತು ಹೈಕೋರ್ಟ್ ಸೂಚನೆ ನೀಡಿರುವುದು ಸ್ವಾಗತಾರ್ಹ. ಆದರೆ ಹೈಕೋರ್ಟ್‌ನಲ್ಲಿ ನೀಡಿರುವ ಸೂಚನೆ ಮತ್ತು ಮೇಲ್ವಿಚಾರಣೆ ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಹೋಗಿರುವವರಿಗೆ ತಲೆಕೆಟ್ಟಿರಬಹುದು. ಸುಪ್ರೀಂ ಕೋರ್ಟಿಗೆ ಹೋಗಿರುವವರಿಗೆ ತಮ್ಮ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ಬೇಕಾಗಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿಗೆ ಐ ಫೋನ್, ಸ್ಮಾರ್ಟ್‍ವಾಚ್ ಗಿಫ್ಟ್ ಕೊಟ್ಟ ಕಾಂಗ್ರೆಸ್ ಶಾಸಕ
Advertisement
ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ರಿಟ್ ಸಲ್ಲಿಸಿರಬಹುದು. ಹಿಜಬ್ ಅಥವಾ ಕೇಸರಿ ಶಾಲು ಎರಡನ್ನೂ ಧರಿಸಿ ಶಾಲಾ-ಕಾಲೇಜಿಗೆ ಬರೋದು ತಪ್ಪು. ನಾವು ಶಾಲಾ-ಕಾಲೇಜಿಗೆ ಹೋಗುವಾಗ ಯಾವ ಧರ್ಮ, ಜಾತಿಯವರೆಂದೇ ಗೊತ್ತಾಗುತ್ತಿರಲಿಲ್ಲ. ಅವರ ಹೆಸರನ್ನು ಕೇಳುವಾಗ ಅವರು ಮುಸ್ಲಿಂ ಎಂದು ಗೊತ್ತಾಗುತಿತ್ತು ಎಂದು ತಿಳಿಸಿದರು.
Advertisement
Advertisement
ಶಾಲಾ-ಕಾಲೇಜಿಗೆ ಬರೋದು ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕಾಗಿಯೇ ಹೊರತು ಬೇರೆ ಯಾವುದಕ್ಕೂ ಅಲ್ಲ. ಬೇಕಾದರೆ ಹಿಜಬ್ ಧರಿಸಿ ಮಸೀದಿ, ಮದರಸಾಗಳಿಗೆ ಹೋಗಲಿ. ಕೇಸರಿ ಶಾಲು ಧರಿಸಿ ದೇವಾಲಯಗಳಿಗೆ ಹೋಗಲಿ. ಅದಕ್ಕೆ ನಮ್ಮ ಯಾವ ತಕರಾರು ಇಲ್ಲ. ಭಾರತ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ. ಯಾವ ಧರ್ಮ ಆಚರಣೆ ಬೇಕಾದರೂ ಅವರ ಮನೆಗಳಲ್ಲಿ ಆಚರಿಸಿಕೊಳ್ಳಲಿ. ಆದರೆ ಶಾಲಾ-ಕಾಲೇಜಿಗೆ ಸಮವಸ್ತ್ರಗಳಲ್ಲೇ ವಿದ್ಯಾರ್ಥಿಗಳು ಬರಲಿ ಎಂದು ಹೇಳಿದರು. ಇದನ್ನೂ ಓದಿ: ತಲೆ ಮೇಲೆ ಸೆರಗು ಹಾಕಿಕೊಳ್ಳೋದನ್ನ ಬೇಡ ಅನ್ನೋದು ಎಷ್ಟು ಸರಿ: ಸಿಎಂ ಇಬ್ರಾಹಿಂ