ಮಂಡ್ಯ: ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಮನೆಗೆ ಮುಂಬೈನ ಬಾಂದ್ರಾ ಪೂರ್ವ ಕ್ಷೇತ್ರದ ಶಾಸಕ ಜಿಶಾನ್ ಸಿದ್ದಿಕ್ ಭೇಟಿ ಗಿಫ್ಟ್ ನೀಡಿದ್ದಾರೆ.
Advertisement
ಜಿಶಾನ್ ಸಿದ್ದಿಕ್ ಇಂದು ಮಂಡ್ಯದ ಗುತ್ತಲು ಬಡಾವಣೆಯಲ್ಲಿರುವ ಮುಸ್ಕಾನ್ ಮನೆಗೆ ಭೇಟಿ ನೀಡಿ ಐಫೋನ್ ಮತ್ತು ಸ್ಮಾರ್ಟ್‍ವಾಚ್ ಉಡುಗೊರೆ ನೀಡಿ ಸನ್ಮಾನಿಸಿದ್ದಾರೆ.
Advertisement
Met the Sherni of Karnataka who stood firmly against those fascists who tried to stop her from her right to wear a hijab. After driving 100 km from Bangalore to Mandya i met the brave girl Muskan Khan & her family,gave her a token of appreciation & applauded her bravery!#Muskan pic.twitter.com/3SBJ5gaVwt
— Zeeshan Siddique (@zeeshan_iyc) February 10, 2022
Advertisement
ಮುಸ್ಕಾನ್ ಘೋಷಣೆ ಕೂಗಿರುವುದು ನನಗೆ ಗರ್ವ ಅನ್ನಿಸಿದೆ. ಅಷ್ಟು ಜನರ ಎದುರು ಅಲ್ಲಾಹು ಅಕ್ಬರ್ ಎಂದು ಕೂಗಿದ್ದಾರೆ. ಅದು ನಮಗೆ ಹೆಮ್ಮೆ ಎನ್ನಿಸುತ್ತಿದೆ. ಮಂಡ್ಯದಿಂದ ಇಂಡಿಯಾವರೆಗೂ ಆಕೆ ಬಗ್ಗೆ ಗರ್ವ ಪಡುತ್ತಿದೆ. ಹಿಜಬ್ ಹಾಕಿಕೊಳ್ಳುವುದು ಅವರ ಹಕ್ಕು. ಅವರ ಹಕ್ಕಿನ ಬಗ್ಗೆ ಧೈರ್ಯದಿಂದ ಧ್ವನಿ ಎತ್ತಿದ್ದಾರೆ. ಮುಸ್ಕಾನ್ ಭೇಟಿ ವೇಳೆ ಜೀಶನ್ ಸಿದ್ಧಿಕಿ ಹೇಳಿದ್ದಾರೆ. ಇದನ್ನೂ ಓದಿ: Hijab Row – ಮಂಡ್ಯ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಜಮಾತೆ ಉಲೆಮಾ ಹಿಂದ್
Advertisement
ಪಿಇಎಸ್ ಕಾಲೇಜಿನ ದ್ವಿತೀಯ ಬಿ ಕಾಂ ವಿದ್ಯಾರ್ಥಿನಿ ಮುಸ್ಕಾನ್ ಅಲ್ಲಾಹು ಅಕ್ಬರ್ ಎಂದು ಕೂಗಿದ್ದಕ್ಕೆ ಅನೇಕ ಮುಸ್ಲಿಂ ಮುಖಂಡರು, ಕಾಂಗ್ರೆಸ್ ನಾಯಕರು ಶ್ಲಾಘಿಸಿದ್ದರು. ಆ ವಿದ್ಯಾರ್ಥಿನಿಗೆ ದೇಶದ ಪ್ರಮುಖ ಇಸ್ಲಾಮಿಕ್ ಸಂಘಟನೆಗಳಲ್ಲಿ ಒಂದಾದ ಜಮಿಯತ್ ಉಲಾಮಾ-ಇ-ಹಿಂದ್ ವತಿಯಿಂದ 5 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಬಳಿಕ ಮುಸ್ಕಾನ್‍ಗೆ ಮುಸ್ಲಿಂ ನಾಯಕರಿಂದ ಹಣ, ಉಡುಗೊರೆ ನೀಡಿ ಸನ್ಮಾನ ಮಾಡುತ್ತಿದ್ದಾರೆ. ಇದೀಗ ಮಹಾರಾಷ್ಟ್ರದ ಕಾಂಗ್ರೆಸ್‍ನ ಮುಸ್ಲಿಂ ಶಾಸಕನಿಂದ ಉಡುಗೊರೆ ನೀಡಿದ್ದಾರೆ. ಇದನ್ನೂ ಓದಿ: ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿಗೆ ತಮಿಳುನಾಡಿನಿಂದ ಪ್ರಶಸ್ತಿ ಪ್ರಕಟ
ಹಿಜಬ್ ಧರಿಸಿದ್ದ ವಿದ್ಯಾರ್ಥಿನಿ ಮುಸ್ಕಾನ್ ಕೇಸರಿ ಶಾಲು ಹಾಕಿದ್ದ ಹುಡುಗರ ವಿರುದ್ಧ ಸೆಟೆದು ನಿಂತಿದ್ದಳು. ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಹಿಜಬ್ ಧರಿಸಿದ್ದಕ್ಕಾಗಿ ಮುಸ್ಕಾನ್ ಎದುರು ನಿಂತ ಯುವಕರ ಗುಂಪೊಂದು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿತ್ತು. ಇದರಿಂದ ಕೋಪಗೊಂಡ ಮುಸ್ಕಾನ್ ಆ ಯುವಕರ ಎದುರು ಕೈ ಎತ್ತಿ ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ವೀಡಿಯೋ ವೈರಲ್ ಆಗಿತ್ತು. ಇದನ್ನೂ ಓದಿ: ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿಗೆ 1 ಲಕ್ಷ ಚೆಕ್ ನೀಡಿದ ಇಮ್ರಾನ್ ಪಾಷಾ