Exclusive- ಬಿಗ್ ಬಾಸ್ 9 ಮನೆಗೆ ಎಂಟ್ರಿ ಕೊಟ್ಟಿರುವ ವಿಚಿತ್ರ, ವಿಶೇಷ, ವಿಕ್ಷಿಪ್ತ ಸ್ಪರ್ಧಿಗಳು

Public TV
3 Min Read

ಬಿಗ್ ಬಾಸ್ ಮನೆಗೆ ಹೋಗಲು ಅರ್ಹತೆ ಏನಿರಬೇಕು? ಅವರು ಕೇವಲ ಸಿನಿಮಾ ಮತ್ತು ಕಿರುತೆರೆಯ ಸಿಲೆಬ್ರಿಟಿಗಳೇ ಆಗಿರಬೇಕಾ? ಆಯ್ಕೆಗೆ ಇಂಥದ್ದೇ ಮಾನದಂಡಗಳು ಇಲ್ಲವಾದ್ದರಿಂದ, ಎಲ್ಲಾ ಕ್ಷೇತ್ರಗಳಿಂದಲೂ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅದರಲ್ಲೂ ಜನರಿಗೆ ಗೊತ್ತಿರುವ, ಸೋಷಿಯಲ್ ಮೀಡಿಯಾದಲ್ಲೂ ಆರ್ಭಟಿಸಿದವರಿಗೂ ಅವಕಾಶ ನೀಡಲಾಗುತ್ತಿದೆ. ಅಂತಹ ವಿಚಿತ್ರ, ವಿಶೇಷ ವ್ಯಕ್ತಿಗಳು ಕೂಡ ಈ ಬಾರಿ ಬಿಗ್ ಬಾಸ್ (Bigg Boss Season 9) ಮನೆ ಪ್ರವೇಶ ಮಾಡಿದ್ದಾರೆ ಎನ್ನಲಾಗುತ್ತಿದೆ.

ಕಾಫಿನಾಡು ಚಂದು

ನಾನು ಪುನೀತಣ್ಣ, ಶಿವಣ್ಣನ ಅಭಿಮಾನಿ ಎಂದು ಹೇಳುತ್ತಲೇ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆದವರು ಕಾಫಿನಾಡು ಚಂದು (Coffenadu chandu). ಬಿಗ್ ಬಾಸ್ ಓಟಿಟಿಯಲ್ಲೇ ಚಂದು ಕಾಣಿಸಿಕೊಳ್ಳಬೇಕಿತ್ತು ಎಂದು ಹಲವರು ಅಪೇಕ್ಷೆ ಪಟ್ಟಿದ್ದರು. ಆದರೆ, ಈ ಬಾರಿ ಅವರಿಗೆ ಅವಕಾಶ ಸಿಕ್ಕಿದೆ. ಹ್ಯಾಪಿ ಬರ್ತಡೇ ಪದಗಳನ್ನು ತಮ್ಮದೇ ಆದ ಹಾಡಿನ ಮೂಲಕ ಹೇಳಿ ಫೇಮಸ್ ಆದವರು. ಮೂಲತಃ ಚಿಕ್ಕಮಗಳೂರಿನವರಾದು ಚಂದು, ಅಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಅಲ್ಲದೇ, ಸಣ್ಣಪುಟ್ಟ ಸಮಾಜ ಸೇವೆ ಮಾಡುವ ಇವರು ಈ ಬಾರಿ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಇದನ್ನೂ ಓದಿ : ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಎಕ್ಸ್‌ಕ್ಲೂಸಿವ್ ಸೆಲೆಬ್ರಿಟಿಗಳು

ಐಶ್ವರ್ಯಾ ಪಿಸ್ಸೆ

ಬೆಂಗಳೂರು ಮೂಲದ ಐಶ್ವರ್ಯ ಪಿಸ್ಸೆ (Aishwarya Pissay) ಭಾರತೀಯ ಸರ್ಕ್ಯೂಟ್ ಮತ್ತು ಆಫ್ ರೋಡ್ ಮೋಟಾರ್ ಸೈಕಲ್ ರೇಸರ್. ವಿಶ್ವ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮೋಟಾರ್ ಸೈಕಲ್ ಕ್ರೀಡೆಯ ಆಟಗಾರ್ತಿ ಕೂಡ ಇವರಾಗಿದ್ದಾರೆ. ಬೆಂಗಳೂರಿನ ಪುಟ್ಟ ಪುಟ್ಟ ರಸ್ತೆಗಳಲ್ಲಿ ಬೈಕ್ ರೇಸ್ ಮಾಡುತ್ತಿದ್ದ ಈ ಹುಡುಗಿ ಆ ನಂತರ ಇದೀಗ ರಾಷ್ಟ್ರೀಯ ಕ್ರೀಡಾಪಟುವಾಗಿ ಮಿಂಚಿದ್ದಾರೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಐಶ್ವರ್ಯಾ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಬೆಂಗಳೂರಿನಲ್ಲೇ ಮೋಟಾರ್ ಸೈಕಲ್ ತರಬೇತಿ ಪಡೆದಿರುವ ಐಶ್ವರ್ಯಾ, ಆ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ ಬೈಕರ್ ಎನ್ನುವುದು ವಿಶೇಷ.

ರಿವ್ಯೂ  ನವಾಜ್

ಇತ್ತೀಚಿನ ದಿನಗಳಲ್ಲಿ ಸಿನಿಮಾ ರಿವ್ಯೂ ವ್ಯಾಖ್ಯಾನವನ್ನೇ ಬದಲಿಸಿದವರು ನವಾಜ್ (Nawaz). ಪ್ರಾಸ ಪದಗಳನ್ನು ಪಂಚಿಂಗ್ ಡೈಲಾಗ್ ನಂತೆ ಹೇಳುತ್ತಾ, ತಮ್ಮದೇ ಆದ ನೋಡುಗರನ್ನು ಹೊಂದಿದವರು ನವಾಜ್. ಮೂಲತಃ ಬೆಂಗಳೂರಿನ ಹುಡುಗ. ಬಾಲ್ಯದಿಂದಲೇ ಬಡತನದಲ್ಲಿ ಬೆಳೆದವರು. ನವಾಜ್ ಹೇಳುವ ಪಂಚಿಂಗ್ ಡೈಲಾಗ್‍ ಗೆ ಉಪೇಂದ್ರ, ಡಾಲಿ ಧನಂಜಯ್ ಸೇರಿದಂತೆ ಹಲವರು ಫಿದಾ ಆಗಿದ್ದಾರೆ. ಇವರ ಮಾತುಗಳನ್ನು ಕೇಳಲೆಂದೇ ಹಲವರು ಸಿನಿಮಾ ರಿಲೀಸ್ ಆದಾಗ ಇವರ ಮುಂದೆ ನಿಂತು ಕೇಳಿದ್ದೂ ಇದೆ. ಒಂದು ರೀತಿಯಲ್ಲಿ ಸಿನಿಮಾ ರಂಗದ ಡಾರ್ಲಿಂಗ್ ಆಗಿಯೇ ನವಾಜ್ ಹೆಸರು ಮಾಡಿದ್ದಾರೆ. ಈ ರೀತಿಯ ರಿವಿವ್ಯುಗೆ ಕೆಲವರು ಆಕ್ಷೇಪವನ್ನೂ ವ್ಯಕ್ತ ಪಡಿಸಿದ್ದಾರೆ. ಎಲ್ಲ ಸಿನಿಮಾಗೂ ಒಂದೇ ರೀತಿಯಲ್ಲಿ ಡೈಲಾಗ್ ಹೊಡೆಯುವುದು ಸಿನಿಮಾಗೆ ಮಾಡುವ ಅವಮಾನ ಎಂದೇ ಕೆಲವರು ಟೀಕಿಸಿದ್ದಾರೆ. ಈ ಬಾರಿ ಇವರು ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ.

ಸಂದೇಶ್ ಪ್ರಸನ್ನ ಕುಮಾರ್

ಬೆಂಗಳೂರು ಮೂಲದ ಮತ್ತೋರ್ವ ಬೈಕ್ ರೇಸರ್ ಆಗಿರುವ ಸಂದೇಶ್ ಪ್ರಸನ್ನ (Sandesh Prasannakumar) ಕೂಡ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಹೋಗುತ್ತಿದ್ದಾರೆ. ಸಂದೇಶ್ ಪ್ರಸನ್ನ ಕುಮಾರ್ ಕೂಡ ಈಗಾಗಲೇ ಹಲವು ರೇಸ್ ಗಳಲ್ಲಿ ಭಾಗಿಯಾಗಿ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಂತಾರಾಷ್ಟ್ರೀಯ ರೇಸ್ ನಲ್ಲೂ ಭಾಗಿಯಾದ ಹೆಗ್ಗಳಿಕೆ ಇವರದ್ದು. ಬಿಗ್ ಬಾಸ್ ಮನೆಗೆ ಸಂದೇಶ್ ಹೋಗುತ್ತಾರೆ ಎನ್ನುವ ಕಲ್ಪನೆ ಕೂಡ ಯಾರಿಗೂ ಇರಲಿಲ್ಲ. ಅಚ್ಚರಿ ಎನ್ನುವಂತೆ ಇವರ ಪ್ರವೇಶ ಆಗಿದೆ. ಈಗಾಗಲೇ ಮೋಟಾರ್ ಸೈಕಲ್ ರೇಸರ್ ಆಗಿರುವ ಐಶ್ವರ್ಯ ಕೂಡ ಮನೆಯಲ್ಲಿ ಇದ್ದಾರೆ. ಅವರ ಜೊತೆ ಇವರೂ ಸೇರ್ಪಡೆ ಆಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *