ಅಂಗಳದಲ್ಲಿ ಆಯ್ತು, ಟ್ವಿಟ್ಟರ್‍ನಲ್ಲೂ ಪಾಂಡ್ಯ ಕಿಡಿ ಕಿಡಿ: ವೈರಲ್ ಆಯ್ತು ಟ್ವೀಟ್

Public TV
2 Min Read

ಓವಲ್: ಜಡೇಜಾ ವಿರುದ್ಧ ಅಂಗಳದಲ್ಲಿ ಸಿಟ್ಟಾಗಿದ್ದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಟ್ವಿಟ್ಟರ್‍ನಲ್ಲೂ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ನಮ್ಮವರನ್ನು ನಮ್ಮವರೇ ಲೂಟಿ ಮಾಡಿದ್ರು, ಬೇರೆ ಅವರಿಗೆ ಎಲ್ಲಿದೆ ಆ ತಾಕತ್ತು ಎಂದು ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಟೀಂ ಇಂಡಿಯಾದ ಆಟಗಾರರು ಪೆವಿಲಿಯನ್ ಪರೇಡ್ ಮಾಡುತ್ತಿದ್ದರೆ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಕೆಚ್ಚೆದೆಯ ಪ್ರದರ್ಶನ ನೀಡಿದ್ದರು. ಆದರೆ ಜಡೇಜಾ ಅವರಿಂದಾಗಿ ರನ್ ಔಟ್ ಆಗಿದ್ದಕ್ಕೆ ಸಿಟ್ಟಾಗಿದ್ದ ಪಾಂಡ್ಯ ಮ್ಯಾಚ್ ಮುಗಿದ ಬಳಿಕ ಈ ಮೇಲಿನಂತೆ ಟ್ವೀಟ್ ಮಾಡಿ ನಂತರ ಡಿಲೀಟ್ ಮಾಡಿದ್ದರು.

ರನ್‍ಔಟ್ ಆಗಿದ್ದು ಹೇಗೆ?
ಟೀಂ ಇಂಡಿಯಾದ ಮೊತ್ತ 152 ಆಗಿದ್ದಾಗ ಹಸನ್ ಅಲಿ ಎಸೆದ 26ನೇ ಓವರ್‍ನ ಮೂರನೇ ಎಸೆತವನ್ನು ಜಡೇಜಾ ಕವರ್‍ಗೆ ತಳ್ಳಿ ರನ್ ಕದಿಯಲು ಮುಂದಾದರು. ಜಡೇಜಾ ಓಡಲು ಆರಂಭಿಸುತ್ತಿದ್ದಂತೆ ನಾನ್ ಸ್ಟ್ರೈಕ್ ನಲ್ಲಿದ್ದ ಪಾಂಡ್ಯ ಸ್ಟ್ರೈಕ್‍ನತ್ತ ಓಡಲು ಆರಂಭಿಸಿದರು. ಅಷ್ಟರಲ್ಲಿ ಬಾಲ್ ಹಫೀಸ್ ಕೈ ಸೇರಿತ್ತು. ಹಫೀಸ್ ಕೈಗೆ ಬಾಲ್ ಸಿಕ್ಕಿದ್ದೆ ತಡ ನಾನ್ ಸ್ಟ್ರೈಕ್‍ರನತ್ತ ಓಡುತ್ತಿದ್ದ ಜಡೇಜಾ ತಮ್ಮ ನಿರ್ಧಾರ ಬದಲಾಯಿಸಿ ಸ್ಟ್ರೈಕ್‍ನತ್ತ ತಿರುಗಿದರು. ಇಬ್ಬರು ಸ್ಟ್ರೈಕ್‍ನತ್ತ ಓಡುವುದನ್ನು ಗಮನಿಸಿದ ಹಫೀಸ್ ಬಾಲನ್ನು ಬೌಲರ್ ಹಸನ್ ಅಲಿಗೆ ಎಸೆದರು. ಈ ವೇಳೆ ಜಡೇಜಾ ಸ್ಟ್ರೈಕ್ ತಲುಪಿ ಆಗಿತ್ತು. ಹೀಗಾಗಿ ಪಾಂಡ್ಯ ರನೌಟ್‍ಗೆ ಬಲಿಯಾದರು.

ರನ್‍ಔಟ್ ಆದ ಕೂಡಲೇ ಅಲ್ಲೇ ಜಡೇಜಾ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ ಪಾಂಡ್ಯ ಡ್ರೆಸಿಂಗ್ ರೂಂಗೆ ಹೋಗುವವರೆಗೂ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಇದ್ದರು.

ರಾತ್ರಿ ಟ್ವೀಟ್: ಪಂದ್ಯ ಮುಗಿದ ಬಳಿಕ ಪಾಂಡ್ಯ ತಮ್ಮ ಆಕ್ರೋಶವನ್ನು ಟ್ವಿಟ್ಟರ್‍ನಲ್ಲಿ ತೋರಿಸಿದ್ದಾರೆ. ರಾತ್ರಿ 10.15 ಟ್ವೀಟ್ ಮಾಡಿದ ತಕ್ಷಣ ಈ ಟ್ವೀಟನ್ನು ಡಿಲೀಟ್ ಮಾಡಿದ್ದಾರೆ. ಟ್ವೀಟ್ ಡಿಲೀಟ್ ಮಾಡಿದ್ದರೂ ಜನ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ.

ಧೋನಿ ಔಟಾಗುವ ವೇಳೆ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 54 ರನ್ ಗಳಿಸಿತ್ತು. ನಂತರ ಕ್ರೀಸಿಗೆ ಆಗಮಿಸಿದ್ದ ಪಾಂಡ್ಯ ಪಾಕ್ ಬೌಲರ್‍ಗಳ ಎಸೆತವನ್ನು ಮನಬಂದಂತೆ ಚಚ್ಚಲು ಆರಂಭಿಸಿದ್ದರು. ಪರಿಣಾಮ 32 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಅವರು 43 ಎಸೆತಗಳಲ್ಲಿ 76 ರನ್ ಸಿಡಿಸಿದ್ದರು. ಈ ಭರ್ಜರಿ ಆಟದಲ್ಲಿ 6 ಸಿಕ್ಸರ್ ಹಾಗೂ 4 ಬೌಂಡರಿ ಸಿಡಿಸಿದ್ದರು.

ಇದನ್ನೂ ಓದಿ: 76 ರನ್‍ಗಳಿಸಿ ರನೌಟ್ ಆದ್ರೂ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!

 

 

 

https://twitter.com/takentweets/status/876515488414785537

Share This Article
Leave a Comment

Leave a Reply

Your email address will not be published. Required fields are marked *