ಬೆಂಗಳೂರು: ಬಹುಮಹಡಿ ಕಟ್ಟಡದಿಂದ ತಳ್ಳಿ ಹೆತ್ತ ತಾಯಿಯನ್ನು (Mother) ಮಗನೇ (Son) ಕೊಲೆ ಮಾಡಿರುವ ಘಟನೆ ಆರ್ಆರ್ ನಗರ (RR Nagar) ಬೆಮಲ್ ಲೇಔಟ್ನಲ್ಲಿ ನಡೆದಿದೆ.
ಸಾವಿತ್ರಮ್ಮ (72) ಕೊಲೆಯಾದ ದುರ್ದೈವಿ. ಮಗ ವೆಂಕಟೇಶ್ ವೃದ್ಧ ತಾಯಿಯನ್ನ ಕಟ್ಟಡದಿಂದ ತಳ್ಳಿ ಕೊಲೆ ಮಾಡಿದ್ದಾನೆ. ಸ್ಟ್ರೋಕ್ ಹೊಡೆದ ಕಾರಣ ಸಾವಿತ್ರಮ್ಮ ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ತಾಯಿ ಅವಸ್ಥೆಯಿಂದ ನೊಂದಿದ್ದ ಮಗ ಕಟ್ಟಡದ ಮೂರನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಕಾರ್ಪೋರೇಟ್ ಜಿಹಾದ್ಗೆ ಮಲೇಷ್ಯಾ ಲಿಂಕ್ – ವಿದೇಶಿ ಉದ್ಯೋಗ ಮಾರ್ಗದರ್ಶಕನಾಗಿದ್ದ ಧಾರ್ಮಿಕ ಬೋಧಕ!
ಘಟನಾ ಸ್ಥಳಕ್ಕೆ ಆರ್ಆರ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮಗ ವೆಂಕಟೇಶ್ನನ್ನ ಆರ್ಆರ್ ನಗರ ಪೊಲೀಸರು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಇನ್ಫೋಸಿಸ್ನಲ್ಲೂ ಕಾರ್ಪೋರೇಟ್ ಜಿಹಾದ್ ಆರೋಪ – ಮಹಾ ಸಚಿವರಿಗೆ ದೂರು

