ಇನ್ಫೋಸಿಸ್‌ನಲ್ಲೂ ಕಾರ್ಪೋರೇಟ್‌ ಜಿಹಾದ್‌ ಆರೋಪ – ಮಹಾ ಸಚಿವರಿಗೆ ದೂರು

1 Min Read

ಮುಂಬೈ: ಟಿಸಿಎಸ್‌ (TCS) ಬಳಿಕ ಸಾಫ್ಟ್‌ವೇರ್‌ ದಿಗ್ಗಜ ಇನ್ಫೋಸಿಸ್‌ನಲ್ಲೂ(Infosys) ಕಾರ್ಪೋರೇಟ್‌ ಜಿಹಾದ್‌ (Corporate Jihad) ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಪುಣೆಯ ಇನ್ಫೋಸಿಸ್ ಬಿಪಿಎಂ (BPM) ಘಟಕದಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಜಿಹಾದಿ ಕಿರುಕುಳ ನೀಡಲಾಗುತ್ತಿದೆ ಎಂದು ಎಕ್ಸ್‌ನಲ್ಲಿ ಬಳಕೆದಾರರೊಬ್ಬರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್‌, ಸಚಿವ ನಿತೀಶ್‌ ರಾಣೆ (Nitesh NRane) ಅವರಿಗೆ ದೂರು ನೀಡಿದ್ದಾರೆ.

ಈ ದೂರಿಗೆ ಪ್ರತಿಕ್ರಿಯಿಸಿದ ರಾಣೆ ಈ ವಿಷಯವನ್ನು ಗಮನಿಸಲಾಗಿದೆ ಎಂದು ಉತ್ತರ ನೀಡಿದ್ದಾರೆ. ಇದನ್ನೂ ಓದಿ: Corporate Jihad | ಹಿಂದೂ ಮಹಿಳಾ ಉದ್ಯೋಗಿಗಳಿಗೆ ಬಲವಂತವಾಗಿ ಗೋಮಾಂಸ ಸೇವಿಸುವಂತೆ, ನಮಾಜ್‌ ಮಾಡುವಂತೆ ಒತ್ತಾಯ

ಈ ಆರೋಪಗಳಿಗೆ ಸಂಬಂಧಿಸಿದಂತೆ ಇನ್ಫೋಸಿಸ್ ಕಂಪನಿಯು ಸ್ಪಷ್ಟನೆ ನೀಡಿದ್ದು, ಯಾವುದೇ ರೀತಿಯ ತಾರತಮ್ಯ ಅಥವಾ ಕಿರುಕುಳದ ವಿರುದ್ಧ ಕಂಪನಿಯು ಶೂನ್ಯ ಸಹನೆ (Zero-tolerance) ನೀತಿಯನ್ನು ಹೊಂದಿದೆ. ತನ್ನ ಉದ್ಯೋಗಿಗಳಿಗೆ ಸುರಕ್ಷಿತ ಮತ್ತು ಗೌರವಯುತ ಕೆಲಸದ ವಾತಾವರಣವನ್ನು ಒದಗಿಸಲು ಬದ್ಧವಾಗಿರುವುದಾಗಿ ಕಂಪನಿ ಹೇಳಿದೆ.

ನಾಸಿಕ್‌ನ ಟಿಸಿಎಸ್ (TCS) ಬಿಪಿಒ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಮತಾಂತರ ಮತ್ತು ಲೈಂಗಿಕ ಕಿರುಕುಳದ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಕಾರ್ಪೊರೇಟ್ ಜಿಹಾದ್ ಪದವನ್ನು ಬಳಸಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

Share This Article