ಕ್ವಿಕ್‌ ಆಗಿ ಮಾಡಿ ರೆಸ್ಟೋರೆಂಟ್‌ ಸ್ಟೈಲ್‌ ಪನೀರ್ ಬಟರ್ ಮಸಾಲಾ

Public TV
2 Min Read

ದಿನಾಲೂ ಒಂದೇ ರೀತಿ ರೆಸಿಪಿ ಮಾಡಿ ನಿಮ್ಗೆ ಬೋರಾಗಿದ್ಯಾ? ಎನಾದ್ರೂ ಸ್ಪೆಷಲ್‌ & ಕ್ವಿಕ್‌ ಆಗಿ ಅಡುಗೆ ಮಾಡಿ ರುಚಿ ರುಚಿಯಾಗಿ ತಿನ್ಬೇಕು ಅನ್ನಿಸ್ತಿದ್ಯಾ? ಅದ್ರಲ್ಲೂ ಪನೀರ್‌ ಅಂದ್ರೆ ನಿಮ್ಗೆ ಇಷ್ಟ ಅಂತಿದ್ರೆ ಕೇಳೋದೇ ಬೇಡ. ಇವತ್ತು ನಾವು ಪನೀರ್‌ ಪ್ರಿಯರಿಗಂತಲೇ ಟೇಸ್ಟಿಯಾಗಿರುವ ಬಾಯಲ್ಲಿ ನೀರೂರಿಸುವ ಪನೀರ್‌ ಬಟರ್‌ ಮಸಾಲಾ (Panner Butter Masala) ಮಾಡೋದು ಹೇಗೆ ಅಂತಾ ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು:
ಪನೀರ್ – 250 ಗ್ರಾಂ
ಬೆಣ್ಣೆ – 50 ಗ್ರಾಂ
ಈರುಳ್ಳಿ – 1
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಟೊಮ್ಯಾಟೊ – 3
ಗೋಡಂಬಿ – 15 ರಿಂದ 20
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಗರಂ ಮಸಾಲ – 1 ಚಮಚ
ಉಪ್ಪು
ಕ್ರೀಮ್ – 100 ಮಿಲಿ
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ:
* ಮೊದಲಿಗೆ ಪನೀರ್‌ ಅನ್ನು ಚೌಕಾಕಾರವಾಗಿ ಸಣ್ಣಗೆ ತುಂಡು ಮಾಡಿಕೊಳ್ಳಬೇಕು.
* ಬಳಿಕ ತುಂಡು ಮಾಡಿದ ಪನ್ನೀರ್‌ ಅನ್ನು ಸ್ವಲ್ಪ ಬೆಣ್ಣೆಯಲ್ಲಿ ಗೋಲ್ಡನ್‌ ಬಣ್ಣ ಬರುವವರೆಗೆ ಫ್ರೈ ಮಾಡಿಕೊಳ್ಳಬೇಕು.
* ಒಂದು ಬಾಣಲೆಗೆ ಬೆಣ್ಣೆಯನ್ನು ಹಾಕಬೇಕು. ಬೆಣ್ಣೆ ಬಿಸಿಯಾದ ಮೇಲೆ ಈರುಳ್ಳಿಯನ್ನು ಗೋಲ್ಡನ್ ಬ್ರೌನ್‌ ಬಣ್ಣಕ್ಕೆ ತಿರುಗುವವರೆಗೆ ಹುರಿಯಬೇಕು.
* ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 2 ನಿಮಿಷ ಹುರಿಯಬೇಕು.
* ಈಗ ಟೊಮೆಟೊ, ಗೋಡಂಬಿ ಮತ್ತು ಹುರಿದ ಈರುಳ್ಳಿ ಮಿಶ್ರಣವನ್ನು ನಯವಾದ ಪೇಸ್ಟ್ ಆಗಿ ಮಿಶ್ರಣ ಮಾಡಿಕೊಳ್ಳಬೇಕು.
* ನಂತರ ಇನ್ನೊಂದು ಪ್ಯಾನ್‌ಗೆ ಸ್ವಲ್ಪ ಬೆಣ್ಣೆ ಹಾಕಿ, ಟೊಮೆಟೊ-ಈರುಳ್ಳಿ ಪ್ಯೂರಿಯನ್ನು ಹಾಕಬೇಕು.
* ಬಳಿಕ ಗ್ರೇವಿ ದಪ್ಪವಾಗುವವರೆಗೆ ಚೆನ್ನಾಗಿ ಬೇಯಿಸಿಬೇಕು.
* ಈಗ ಗ್ರೇವಿಗೆ ಕೆಂಪು ಮೆಣಸಿನ ಪುಡಿ, ಗರಂ ಮಸಾಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು.
* ಈಗ ಫ್ರೈ ಮಾಡಿದ ಪನೀರ್‌ ಪೀಸ್‌ಗಳನ್ನು ಸೇರಿಸಿ 5 ನಿಮಿಷ ಬೇಯಿಸಬೇಕು.
* ನಂತರ ಸ್ವಲ್ಪ ಕ್ರೀಮ್ ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ ಇನ್ನೊಂದು 2 ನಿಮಿಷ ಬೇಯಿಸಬೇಕು.
* ಇದಕ್ಕೆ ಕೊತ್ತಂಬರಿ ಸೊಪ್ಪು ಹಾಗೂ ಕ್ರೀಮ್‌ನಿಂದ ಅಲಂಕರಿಸಿ, ಈಗ ಬಿಸಿ ಬಿಸಿ ಪನೀರ್‌ ಬಟರ್‌ ಮಸಾಲಾ ಸವಿಯಲು ಸಿದ್ಧ.

Share This Article