ಬಾಗಲಕೋಟೆ: ಮುಸ್ಲಿಮ್ ಯುವಕನನ್ನು ಪ್ರೀತಿ (Love) ಮಾಡುತ್ತಿದ್ದ ಯುವತಿ ಆತ್ಮಹತ್ಯೆಗೆ(Suicide) ಶರಣಾದ ಘಟನೆ ಬಾಗಲಕೋಟೆಯ(Bagalkote) ಸೆಕ್ಟರ್ ನಂಬರ್ 48ರಲ್ಲಿ ನಡೆದಿದೆ.
ಭೂಮಿಕಾ ತಿಪ್ಪಣ್ಣವರ್ (19) ಆತ್ಮಹತ್ಯೆಗೆ ಶರಣಾದ ಯುವತಿ. ಭೂಮಿಕಾ (Bhumika) ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಟಯರ್ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದ ಭೂಮಿಕಾ ಮತ್ತು ಟಾಂಟಾಂ ಚಾಲಕ ಡೊಂಗ್ರಿಸಾಬ್ ನದಾಫ್ ಮಧ್ಯೆ ಕಳೆದ 2 ವರ್ಷಗಳಿಂದ ಪ್ರೀತಿಯಿತ್ತು. ಇದನ್ನೂ ಓದಿ: ಕಾರ್ಪೋರೇಟ್ ಜಿಹಾದ್ಗೆ ಮಲೇಷ್ಯಾ ಲಿಂಕ್ – ವಿದೇಶಿ ಉದ್ಯೋಗ ಮಾರ್ಗದರ್ಶಕನಾಗಿದ್ದ ಧಾರ್ಮಿಕ ಬೋಧಕ!
ಭೂಮಿಕಾ ಪೋಷಕರು ನದಾಫ್ಗೆ ಸಾಕಷ್ಟು ಬಾರಿ ಮನೆ ಬಂದು ಮಾತನಾಡಬೇಡ ಎಂದು ಎಚ್ಚರಿಕೆ ನೀಡಿದ್ದರು. ಎಚ್ಚರಿಕೆ ನೀಡಿದ್ದರೂ ಆತ ಮನೆಗೆ ಬಂದು ಮಾತನಾಡುತ್ತಿದ್ದ. ಏಕೈಕ ಮಗಳಾಗಿದ್ದ ಕಾರಣ ಪುತ್ರಿಗೆ ಆತನ ಸ್ನೇಹವನ್ನು ಬಿಡುವಂತೆ ಪೋಷಕರು ಬುದ್ಧಿವಾದ ಹೇಳಿದ್ದರು. ಇದನ್ನೂ ಓದಿ: 180 ಅಪ್ರಾಪ್ತೆಯರಿಗೆ ಲೈಂಗಿಕ ದೌರ್ಜನ್ಯ, 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ – ವಿಕೃತ ಕಾಮುಕನ ಮನೆಗೆ ಬುಲ್ಡೋಜರ್ ದಾಳಿ
ನವನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಎಸ್ಪಿ ಸಿದ್ದಾರ್ಥ ಗೋಯೆಲ್ ಭೇಟಿ ಪರಿಶೀಲನೆ ನಡೆಸಿದ್ದಾರೆ.

