ಮುಸ್ಲಿಂ ಯುವಕನಿಂದ ಹಿಂದೂ ಅತಿಥಿ ಶಿಕ್ಷಕಿಯ ಕಿಡ್ನಾಪ್ – ಲವ್ ಜಿಹಾದ್ ಆರೋಪ

Public TV
1 Min Read

ಹಾವೇರಿ: ಹಿಜಬ್ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಿಂದೂ – ಮುಸ್ಲಿಮರ ನಡುವೆ ವಿವಾದ ಏರ್ಪಟ್ಟಿದೆ. ಆಜಾನ್‌ಗೆ ಧ್ವನಿವರ್ಧಕಗಳ ಬಳಕೆ ನಿಷೇಧ, ಹಲಾಲ್, ಝಟ್ಕಾಕಟ್ ಮೊದಲಾದ ವಿವಾದಗಳು ಹಿಂದೂ-ಮುಸ್ಲಿಮರ ನಡುವಿನ ಸಾಮರಸ್ಯ ಕಾಯ್ದುಕೊಳ್ಳಲು ಅಂತರ ಸೃಷ್ಟಿಸಿವೆ. ಈ ನಡುವೆಯೇ ಮುಸ್ಲಿಂ ಯುವಕನೊಬ್ಬ ಹಿಂದೂ ಸಮುದಾಯದ ಅತಿಥಿ ಶಿಕ್ಷಕಿಯೊಬ್ಬರನ್ನು ಅಪಹರಿಸಿರುವ ಘಟನೆ ವಿವಾದಕ್ಕೆ ಸಮುದಾಯಗಳ ನಡುವೆ ಕಿಡಿ ಹೊತ್ತಿಸಿದಂತಾಗಿದೆ.

CRIME 2

ಮುಸ್ಲಿಂ ಸಮುದಾಯದ ಯುವಕನೊಬ್ಬ ಅತಿಥಿ ಶಿಕ್ಷಕಿಯಾಗಿದ್ದ 24 ವರ್ಷದ ಹಿಂದೂ ಯುವತಿಯನ್ನು ಅಪಹರಿಸಿರುವ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ ನಡೆದಿದೆ. ಇದು ಲವ್ ಜಿಹಾದ್ ಪ್ರಕರಣ ಎಂದು ಆರೋಪಿಸಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಬೀದರ್‌ನಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಅಕ್ರಮ ಪಡಿತರ ಅಕ್ಕಿ ಜಪ್ತಿ

crime

ಹಿಂದೂಪರ ಸಂಘಟನೆಗಳು ನಗರದ ಪ್ರಮುಖ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ಗೆ ಮನವಿ ಮಾಡಿದ್ದಾರೆ. ಏಪ್ರಿಲ್ 13, ರಂದು ಸವಣೂರು ತಾಲ್ಲೂಕಿನ ಕಡಕೋಳ ಗ್ರಾಮದ ಯುವತಿಯನ್ನು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಭಾಷಾ ರಥತ್‌ಖಾನ್ ಎಂಬ ಯುವಕ ಅಪಹರಿಸಿದ್ದಾನೆ ಎಂದು ದೂರು ನೀಡಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಕಲ್ಲಿದ್ದಲು ಸರಬರಾಜಿನಲ್ಲಿ ವ್ಯತ್ಯಯವಿದೆ, ಕಾಂಗ್ರೆಸ್ ಆರೋಪಿಸಿದಷ್ಟು ಅಲ್ಲ: ಜೋಶಿ

ಯುವತಿ ಚಿಕ್ಕಪ್ಪ ಸವಣೂರು ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಏ.13ರಲ್ಲೇ ಯುವತಿಯ ಚಿಕ್ಕಪ್ಪ ದೂರು ದಾಖಲಿಸಿದ್ದಾರೆ. ಆದರೂ ಪೊಲೀಸರು ಈವರೆಗೆ ಆರೋಪಿ ಪತ್ತೆ ಮಾಡುವಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಹಿಂದೂ ಯುವತಿಯನ್ನ ಅಪಹರಿಸಿ ಲವ್ ಜಿಹಾದ್ ಮಾಡಿದ್ದಾರೆ. ಹಾಗಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *