ಟೈರ್ ಸ್ಫೋಟಗೊಂಡು 2 ಕಾರಿಗೆ ಡಿಕ್ಕಿ ಹೊಡೆದ ಬಸ್‌ – 7 ಮಂದಿ ದುರ್ಮರಣ

1 Min Read

ಚೆನ್ನೈ: ಸಾರಿಗೆ ಬಸ್‌ನ (Bus) ಟೈರ್ ಸ್ಫೋಟಗೊಂಡು 2 ಕಾರಿಗೆ (Car) ಡಿಕ್ಕಿ ಹೊಡೆದ (Accident) ಪರಿಣಾಮ 7 ಮಂದಿ ಸಾವಿಗೀಡಾದ ಘಟನೆ ತಿರುಚಿರಾಪಳ್ಳಿ – ಚೆನ್ನೈ ಹೆದ್ದಾರಿಯಲ್ಲಿ ನಡೆದಿದೆ.

ಬಸ್‌ ತಿರುಚಿರಾಪಳ್ಳಿಯಿಂದ ಚೆನ್ನೈಗೆ ತೆರಳುತ್ತಿತ್ತು. ಈ ವೇಳೆ ತಿತ್ತಕುಡಿ ಸಮೀಪ ಬಸ್‌ನ ಟೈರ್ ಸಿಡಿದು ಚಲಿಸುತ್ತಿದ್ದ ದಿಕ್ಕನ್ನೇ ಬದಲಿಸಿ, ಎರಡು ಕಾರುಗಳಿಗೆ ಡಿಕ್ಕಿಯಾಗಿದೆ. ಪರಿಣಾಮ 7 ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬಸ್ಸಿನ ಡೀಸೆಲ್‌ ಟ್ಯಾಂಕ್‌ಗೆ ಟ್ರಕ್‌ ಗುದ್ದಿದ್ದರಿಂದ ದುರಂತ – ಸೀಬರ್ಡ್‌ ಮಾಲೀಕ

ಬಸ್‌ ಟೈರ್‌ ಸ್ಫೋಟದಿಂದ ಡಿವೈಡರ್‌ ದಾಟಿ ಎದುರಿನಿಂದ ಬರುತ್ತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಸ್ಸಿನಲ್ಲಿದ್ದ 8 ಪ್ರಯಾಣಿಕರು, ಲಾರಿ ಡ್ರೈವರ್‌ ಸೇರಿ 9 ಮಂದಿ ಸಾವು: ಐಜಿಪಿ ರವಿಕಾಂತೇಗೌಡ

Share This Article