ಹಿರಿಯೂರು | ಖಾಸಗಿ ಬಸ್‌ ದುರಂತ – ಏನಾಗಿದೆ ಅಂತಾನೇ ಗೊತ್ತಾಗಲಿಲ್ಲ: ಶಾಕ್‌ನಲ್ಲೇ ವಿವರಿಸಿದ ಕ್ಲೀನರ್‌

1 Min Read

ಚಿತ್ರದುರ್ಗ: ಹಿರಿಯೂರು (Hiriyur) ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ನಡೆದ ಭೀಕರ ಬಸ್‌ ದುರಂತದಲ್ಲಿ (Accident) 10ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಸ್‌ನ ಕ್ಲೀನರ್‌ ಸಾಧಿಕ್‌, ನಮಗೆ ಏನಾಯ್ತು ಅಂತಾನೇ ಗೊತ್ತಾಗಲಿಲ್ಲ ಎಂದು ಶಾಕ್‌ನಲ್ಲೇ ಮಾತಾಡಿದ್ದಾರೆ.

ರಾತ್ರಿ -1-30 ರಿಂದ 2 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ. ರಾತ್ರಿ ನಾನು ಮಲಗಿದ್ದೆ ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ನಿಂದ ಹೊರಗೆ ಬಿದ್ದೆ. ನೋಡ ನೋಡುತ್ತಿದ್ದಂತೆ ಧಗಧಗನೆ ಬಸ್ ಹೊತ್ತಿ ಉರಿದಿದೆ. ಸ್ಥಳೀಯರು ನಮ್ಮ ಸಹಾಯಕ್ಕೆ ಬಂದರು. ಅಪಘಾತವಾಗುತ್ತಿದ್ದಂತೆ ಏನಾಗಿದೆ ಎನ್ನುವುದು ಗೊತ್ತಾಗದೆ ಶಾಕ್‌ನಲ್ಲಿ ಇದ್ದೇವು ಎಂದಿದ್ದಾರೆ.

ಡ್ರೈವರ್ ಕೂಡ ಹೊರಗೆ ಬಿದ್ದಿದ್ದು, ಅವರ ಕಾಲು ಕೈಗಳಿಗೆ ಗಂಭೀರ ಗಾಯಗಳಾಗಿವೆ. ಸಾಕಷ್ಟು ಜನರು ಸಾವನ್ನಪ್ಪಿದ್ದಾರೆ. ಬಸ್‌ನಲ್ಲಿ ಮಕ್ಕಳು ಯಾರು ಇರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಗಾಯಾಳುಗಳನ್ನು ಹಿರಿಯೂರು, ಹಾಗು ಚಿತ್ರದುರ್ಗ (Chitradurg) ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

Share This Article