ನಿರ್ಬಂಧಿತ ಅರಣ್ಯಪ್ರದೇಶದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಬಿಂದಾಸ್ ಸವಾರಿ

1 Min Read

– ಖಾಸಗಿ ಜೀಪ್‌ನಲ್ಲಿ ಬಂಡೀಪುರ ಅರಣ್ಯದಲ್ಲಿ ಫ್ಯಾಮಿಲಿಯೊಂದಿಗೆ ಸಫಾರಿ

ಚಾಮರಾಜನಗರ: ನಿರ್ಬಂಧಿತ ಅರಣ್ಯಪ್ರದೇಶದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ (Police Inspector) ಒಬ್ಬರು ಬಿಂದಾಸ್ ಆಗಿ ಸಫಾರಿ ಮಾಡಿದ್ದಾರೆ.

ಖಾಸಗಿ ಜೀಪ್‌ನಲ್ಲಿ ಬಂಡೀಪುರ ಅರಣ್ಯದಲ್ಲಿ (Bandipur Forest) ಫ್ಯಾಮಿಲಿಯೊಂದಿಗೆ ಇನ್‌ಸ್ಪೆಕ್ಟರ್ ಜಯಕುಮಾರ್ ಸಫಾರಿ ಮಾಡಿದ್ದಾರೆ. ತಾವೇ ಜೀಪ್ ಚಾಲನೆ ಮಾಡಿಕೊಂಡು ಸಫಾರಿ ಮಾಡಿರುವ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಪೊಲೀಸರ ಕಣ್ತಪ್ಪಿಸಿ ಕಾಡಲ್ಲಿ ಜೂಜು – ಡ್ರೋನ್‌ ಕಣ್ಣಲ್ಲಿ ಸಿಕ್ಕಿಬಿದ್ದ ಗ್ಯಾಂಗ್‌, 19 ಮಂದಿ ವಶಕ್ಕೆ

ಗುಂಡ್ಲುಪೇಟೆ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಜಯಕುಮಾರ್ ಅರಣ್ಯ ಮಧ್ಯದಲ್ಲಿ ಜೀಪ್‌ನಿಂದ ಕೆಳಗಿಳಿದು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದ್ದು, ನಿರ್ಬಂಧಿತ ಅರಣ್ಯಪ್ರದೇಶದಲ್ಲಿ ಖಾಸಗಿ ಜೀಪ್ ಪ್ರವೇಶಕ್ಕೆ ನೆಟ್ಟಿಗರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Share This Article