ಆಪರೇಷನ್ ಸಿಂಧೂರ ಆ್ಯನಿವರ್ಸರಿ ಹೊತ್ತಲ್ಲೇ ಭಾರತಕ್ಕೆ ಬರುತ್ತಿದೆ 4ನೇ ಸುದರ್ಶನ

1 Min Read

– ರಷ್ಯಾದಿಂದ ಹೊರಟಿರುವ ಎಸ್-400 ಮೇ ಮಧ್ಯದಲ್ಲಿ ಭಾರತ ತಲುಪುವ ನಿರೀಕ್ಷೆ

ನವದೆಹಲಿ: ಆಪರೇಷನ್‌ ಸಿಂಧೂರ (Operation Sindoor) ವಾರ್ಷಿಕೋತ್ಸವದ ಹೊತ್ತಲ್ಲೇ ಭಾರತಕ್ಕೆ 4ನೇ ಸುದರ್ಶನ (S-400) ಬರುತ್ತಿದೆ. ರಷ್ಯಾದಿಂದ ಹೊರಟಿರುವ ಎಸ್‌-400 ಮೇ ತಿಂಗಳ ಮಧ್ಯದಲ್ಲಿ ಭಾರತ ತಲುಪುವ ನಿರೀಕ್ಷೆಯಿದೆ.

ಮೇ ತಿಂಗಳ ಅಂತ್ಯದಲ್ಲಿ ಎಸ್‌-400 ಭಾರತದ ಸೇನೆಗೆ ಸೇರ್ಪಡೆಯಾಗಲಿದೆ. ರಾಜಸ್ಥಾನ ಸೆಕ್ಟರ್‌ನಲ್ಲಿ ನವೆಂಬರ್‌ಗೆ 5ನೇ ಎಸ್‌-400 ಬರಲಿದೆ. ಈ ಸರಕು ರಷ್ಯಾದಿಂದ ಭಾರತದ ಬಂದರಿಗೆ ತಲುಪಲಿದೆ. ಭಾರತೀಯ ವಾಯುಪಡೆಯು ಏಪ್ರಿಲ್ 18 ರೊಳಗೆ ನಾಲ್ಕನೇ ಸುದರ್ಶನ ಪೂರ್ವ-ರವಾನೆ ತಪಾಸಣೆಯನ್ನು ಪೂರ್ಣಗೊಳಿಸಿತು. ನಂತರ ಅದನ್ನು ಕಳೆದ ವಾರ ರವಾನಿಸಲಾಯಿತು. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಭವಿಷ್ಯವಿಲ್ಲ: ನಿತಿನ್ ಗಡ್ಕರಿ

ಒಮ್ಮೆ ಈ ಸಿಸ್ಟಮ್ ಪೂರೈಕೆಯಾದ ನಂತರ, ಪಾಕಿಸ್ತಾನ ಗಡಿಯಲ್ಲಿ ಭಾರತದ ವಾಯು ರಕ್ಷಣಾ ವ್ಯವಸ್ಥೆ ಬಲಪಡಿಸಲು ರಾಜಸ್ಥಾನ ವಲಯದಲ್ಲಿ ನಿಯೋಜಿಸುವ ಸಾಧ್ಯತೆಯಿದೆ. ಸರ್ಕಾರವು ಐದು ಹೆಚ್ಚುವರಿ S-400 ಸಿಸ್ಟಮ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲು ಅನುಮೋದನೆ ನೀಡಿದೆ ಎನ್ನಲಾಗಿದೆ.

ಇದು 400 ಕಿಲೋಮೀಟರ್‌ಗಳ ವ್ಯಾಪ್ತಿಯ ವೈಮಾನಿಕ ಗುರಿಗಳನ್ನು ಎದುರಿಸುವಷ್ಟು ಸಾಮರ್ಥ್ಯವನ್ನು ಹೊಂದಿದೆ. ಇದು ಸಿಂಧೂ ನದಿಯ ಪೂರ್ವದ ಪ್ರದೇಶಗಳು ಸೇರಿದಂತೆ ಪಾಕಿಸ್ತಾನಿ ಪ್ರದೇಶ ವ್ಯಾಪ್ತಿಯನ್ನು ಗುರಿಯಾಗಿಸಬಹುದು. ಇದನ್ನೂ ಓದಿ: ಡಿಜಿಟಲ್ ಅರೆಸ್ಟ್ ತೊಡಗಿದ್ದ 9,400 ವಾಟ್ಸಪ್‌ ಖಾತೆಗಳು ಡಿಲೀಟ್‌

Share This Article