– ಅಪ್ಡೇಟ್ ಕೊಟ್ಟ ಆಮೀರ್ ಖಾನ್
10 ವರ್ಷಗಳ ಬಳಿಕವೂ ಅದೇ ಪಾತ್ರಗಳೊಂದಿಗೆ 3 ಈಡಿಯಟ್ಸ್ ಸೀಕ್ವೆಲ್ (3 Idiots sequel) ಬರಲಿದೆ ಎಂದು ನಟ ಆಮೀರ್ ಖಾನ್ (Aamir Khan) ಖಚಿತಪಡಿಸಿದ್ದಾರೆ.
ನಟ ಆಮೀರ್ ಖಾನ್ ಅವರು 3 ಈಡಿಯಟ್ಸ್ ಸೀಕ್ವೆಲ್ ಕುರಿತು ಅಪ್ಡೇಟ್ ಒಂದನ್ನು ಹಂಚಿಕೊಂಡಿದ್ದಾರೆ. 10 ವರ್ಷಗಳ ಬಳಿಕವೂ ಅದೇ ಪಾತ್ರಗಳೊಂದಿಗೆ 3 ಈಡಿಯಟ್ಸ್ ಸೀಕ್ವೆಲ್ ಬರಲಿದ್ದು, ರಾಜ್‌ಕುಮಾರ್ ಹಿರಾನಿ ಅವರು ನಿರ್ದೇಶಿಸಲಿದ್ದಾರೆ. ಸದ್ಯ ಇದೇ ಸಿನಿಮಾಗಾಗಿ ನಿರ್ದೇಶಕರು ಕೆಲಸ ಮಾಡುತ್ತಿದ್ದು, ಕಥೆ ಸುಂದರವಾಗಿದೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
ಹಲವು ವರ್ಷಗಳಿಂದ 3 ಈಡಿಯಟ್ಸ್ ಸೀಕ್ವೆಲ್ ಬಗ್ಗೆ ಊಹಾಪೋಹಗಳು ಕೇಳಿಬರುತ್ತಲೇ ಇತ್ತು. ಅಭಿಮಾನಿಗಳು ಕೂಡ ಅದೇ ಪಾತ್ರಗಳೊಂದಿಗೆ ಸೀಕ್ವೆಲ್ ಬರಲೆಂದು ಆಶಿಸಿದ್ದರು. ಅದರಂತೆ ಈ ಬಗ್ಗೆ ನಟ ಆಮೀರ್ ಖಾನ್ ಅವರು ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸದ್ಯ ರಾಜು ಈಗ 3 ಈಡಿಯಟ್ಸ್ 2ರಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ಕಥೆ ಕೇಳಿದ್ದೇನೆ, ತುಂಬಾ ಅದ್ಭುತವಾಗಿದೆ. ಸ್ಕ್ರಿಪ್ಟ್‌ಗೆ ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ. ಮೊದಲ ಚಿತ್ರದಂತೆಯೇ ಹಾಸ್ಯ ಹಾಗೂ 3 ಈಡಿಯಟ್ಸ್‌ನ ಪಾತ್ರಗಳೊಂದಿಗೆ 10 ವರ್ಷಗಳ ಬಳಿಕ ಮತ್ತೆ ಮರಳುತ್ತಿದೆ ಎಂದಿದ್ದಾರೆ.
2009ರಲ್ಲಿ ಬಿಡುಗಡೆಯಾದ 3 ಈಡಿಯಟ್ಸ್ ಅತ್ಯಂತ ಜನಪ್ರಿಯ ಹಿಂದಿ ಸಿನಿಮಾಗಳಲ್ಲಿ ಒಂದಾಗಿದೆ.ಇದನ್ನೂ ಓದಿ: ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ

