ನೀವು ರಾಜ್ಯಕ್ಕೆ ಸಿಎಂ? ಅಥವಾ ಮೈಸೂರಿಗೆ ಮಾತ್ರನಾ? – ಇದು ಮಲತಾಯಿ ಧೋರಣೆ, ಸಿದ್ದರಾಮಯ್ಯಗೆ ಶಾಸಕ ಕಂದಕೂರು ಪತ್ರ

1 Min Read

– ಯಾದಗಿರಿಯಲ್ಲಿ ಮೃತಪಟ್ಟವರಿಗೆ ಪರಿಹಾರ ಘೋಷಿಸದೇ ಮೈಸೂರಲ್ಲಿ ಮೃತಪಟ್ಟವರಿಗೆ ಮಾತ್ರ ಪರಿಹಾರ ನೀಡಿದ್ದ ಸಿಎಂ

ಯಾದಗಿರಿ: ಜಿಲ್ಲೆಯಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರ ನೀಡಿ. ಮೈಸೂರಿನಲ್ಲಿ (Mysuru) ನಿನ್ನೆ ಮೃತಪಟ್ಟವರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದೀರಿ. ನೀವು ರಾಜ್ಯಕ್ಕೆ ಸಿಎಂ? ಅಥವಾ ಮೈಸೂರಿಗೆ ಮಾತ್ರನಾ? ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು (Sharanagouda Kandakur) ಅವರು ಸಿದ್ದರಾಮಯ್ಯ (Siddaramaiah) ಅವರಿಗೆ ಪತ್ರದ ಬರೆದಿದ್ದಾರೆ.

ಪತ್ರದಲ್ಲಿ, ಯಾದಗಿರಿಯಲ್ಲಿ (Yadagiri) ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರ ನೀಡಿ. ನೀವು ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದ್ದೀರಿ, ನಿನ್ನೆ ಮೈಸೂರಿನಲ್ಲಿ ಈಜಾಡಲು ಹೋಗಿ 6 ಜನ ಮೃತಪಟ್ಟಿದ್ದರು. ನಿನ್ನೆಯೇ ಕುಟುಂಬಸ್ಥರಿಗೆ ಸಿಎಂ ತಲಾ 5 ಲಕ್ಷ ರೂ. ಪರಿಹಾರ ನೀಡಿದ್ದೀರಿ. ನೀವು ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರ ಮುಖ್ಯಮಂತ್ರಿಗಳೋ ಎಂದು ಪ್ರಶ್ನಿಸಿಸಿದ್ದಾರೆ. ಇದನ್ನೂ ಓದಿ: ಮೈಸೂರು | ದರ್ಗಾಗೆ ಬಂದಿದ್ದಾಗ ಅವಘಡ – ಕಾವೇರಿ ನದಿಗೆ ಇಳಿದಿದ್ದ 6 ಮಂದಿ ಜಲಸಮಾಧಿ

ಮಾ.29ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದ ಕೃಷಿ ಹೊಂಡದಲ್ಲಿ ಬಿದ್ದು ನಾಲ್ಕು ಜನ ಮಕ್ಕಳು ಮೃತಪಟ್ಟಿದ್ದರು. ಅದಾದ ಬಳಿಕ ಏ.17ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಹತ್ತಿರ ಸಿರವಾರ ಗ್ರಾಮದ ಒಂದೇ ಕುಟುಂಬಸ್ಥರು ಖಾಸಗಿ ಬಸ್ ಹಾಗೂ ಕಾರ್ ಡಿಕ್ಕಿಯಲ್ಲಿ ಮೃತಪಟ್ಟಿದ್ದರು. ಪರಿಹಾರ ಧನ ಘೋಷಣೆ ಮಾಡಿಲ್ಲ, ಸಾಂತ್ವನ ತಿಳಿಸಿಲ್ಲ. ಕೂಡಲೇ ಮೃತಪಟ್ಟ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡುವಂತೆ ಗರಂ ಆಗಿದ್ದಾರೆ.

Share This Article