ದಾವಣಗೆರೆಯಲ್ಲಿ SDPI ಅಭ್ಯರ್ಥಿಗೆ ಜಬ್ಬಾರ್‌ ಹಣಕಾಸು ಸಹಾಯ ಮಾಡಿದ್ದಾರೆ: ಸಿಡಿದ ಕೆಪಿಸಿಸಿ ಮುಸ್ಲಿಮ್‌ ನಾಯಕರು

2 Min Read

– ಜಬ್ಬಾರ್‌ ಎಂಎಲ್‌ಸಿ ಸ್ಥಾನಕ್ಕೆ ಇನ್ನೂ ರಾಜೀನಾಮೆ ನೀಡಿಲ್ಲ ಯಾಕೆ?
– ಸಿಎಂ ಇಬ್ರಾಹಿಂ, ರೋಷನ್ ಬೇಗ್ ಬಿಟ್ಟು ಹೋದ್ರೂ ಪಕ್ಷಕ್ಕೆ ಏನು ಆಗಿಲ್ಲ

ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ (Davanagere By Election) ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಮುಸ್ಲಿಂ ನಾಯಕರ (Muslim Leaders) ವಿರುದ್ದ ಕ್ರಮ ಕೈಗೊಂಡಿದ್ದನ್ನು ಕೆಪಿಸಿಸಿ (KPCC) ಪದಾಧಿಕಾರಿ ಮುಸ್ಲಿಂ ನಾಯಕರು ಸಮರ್ಥಿಸಿಕೊಂಡಿದ್ದಾರೆ.

ಉಪಚುನಾವಣೆ ಗೊಂದಲ ವಿಚಾರವಾಗಿ ಮುಸ್ಲಿಂ ಸಮುದಾಯದ ಕೆಪಿಸಿಸಿ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷಕ್ಕೆ ಆಗುವ ಧಕ್ಕೆ ತಡೆಯುವ ನಿಟ್ಟಿನಲ್ಲಿ ಖಾಸಗಿ ಹೋಟೆಲ್ ನಲ್ಲಿ ಸಭೆ‌ ನಡೆಸಿದರು.

ಕೆಪಿಸಿಸಿ ಉಪಾಧ್ಯಕ್ಷ ಸೈಯದ್ ಅಹಮದ್, ರಾಜ್ಯ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಮೆಹರೋಜ್ ಖಾನ್, ಉಪಾಧ್ಯಕ್ಷ ಸೌದಾಗರ್, ಪ್ರಧಾನ ಕಾರ್ಯದರ್ಶಿ ಸೈಯದ್ ಅರ್ಷದ್ ಕೆಪಿಸಿಸಿ ಉಪಾಧ್ಯಕ್ಷ ಉಬೇದುಲ್ಲಾ ಷರೀಫ್ ಸಭೆಯಲ್ಲಿ ಭಾಗವಹಿಸಿದ್ದರು.

ಮುಸ್ಲಿಮ್‌ ನಾಯಕರು ಹೇಳಿದ್ದೇನು?
ಕಾಂಗ್ರೆಸ್‌ನಲ್ಲಿ ಯಾರೂ ಕೂಡ ಮುಸ್ಲಿಂ ಚಾಂಪಿಯನ್ ಇಲ್ಲ.ಯಾರೇ ಪಕ್ಷ ಬಿಟ್ಟು ಹೋದರೂ ಏನೂ ನಷ್ಟ ಇಲ್ಲ. ಸಿಎಂ ಇಬ್ರಾಹಿಂ, ರೋಷನ್ ಬೇಗ್ ಪಕ್ಷ ಬಿಟ್ಟು ಹೋದ ಬಳಿಕ ಏನಾಯ್ತು? ಯಾರೇ ಹೋದರೂ ಏನೂ ಆಗುವುದಿಲ್ಲ. ಇದನ್ನೂ ಓದಿ: ರಾಜಣ್ಣ, ನಸೀರ್‌ ಆಯ್ತು ಮುಂದೆ ಜಮೀರ್‌? – ಸಿಎಂ ಆಪ್ತರೇ ಬಿಗ್‌ ಟಾರ್ಗೆಟ್‌

 

ದಾವಣೆಗೆರೆಗೆ ವೀಕ್ಷಕರ ತಂಡ ಬಂದಿತ್ತು. ಅಭ್ಯರ್ಥಿಗಳ ಅರ್ಜಿ ಸಂಗ್ರಹಕ್ಕೆ ಒಟ್ಟು 6 ಮಂದಿಯಿಂದ ಅರ್ಜಿ ಸಲ್ಲಿಸಲಾಗಿತ್ತು. ಅಬ್ದುಲ್ ಜಬ್ಬರ್ ಸೇರಿ ಯಾರೆಲ್ಲ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದರೋ ಆ ಸಭೆಗೆ ನಮ್ಮನ್ನು ಆಹ್ವಾನಿಸಲಾಗಿತ್ತು.

ಸುರ್ಜೇವಾಲಾ ನೇತೃತ್ವದಲ್ಲಿ ಸಿಎಂ, ಡಿಸಿಎಂ ಹಾಜರಿಯಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಅಬ್ದುಲ್ ಜಬ್ಬರ್ ಹೆಸರು ಬಿಟ್ಟು ಬೇರೆಯವರ ಬಗ್ಗೆ ಮಾತೇ ಆಡಿರಲಿಲ್ಲ. ಸಭೆಯಲ್ಲಿ ಅರ್ಜಿ ಹಾಕಿದ ಆರು ಮಂದಿ ಪರವಾಗಿ ಮಾತಾಡಿದ್ದರೆ ದಾವಣೆಗೆರೆ ಟಿಕೆಟ್‌ ಮುಸ್ಲಿಮರಿಗೆ ಸಿಗುತ್ತಿತ್ತು. ಇದನ್ನೂ ಓದಿ: ನಾನು ಏ.4ಕ್ಕೆ ಯುವ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ- ಉಚ್ಚಾಟನೆ ನಿರ್ಧಾರಕ್ಕೆ ಸಿಲ್ಲಿ ಎಂದ ಆಫ್ರೀನ್ ಖಾನ್

ಸುರ್ಜೇವಾಲಾ ಗ್ರೌಂಡ್ ಲೆವೆಲ್‌ನಲ್ಲಿ ನಿಂತು ಕೆಲಸ ಮಾಡಿದ್ದಾರೆ ಅವರಿಗಿಂತ ದೊಡ್ಡವರಾ ಇವರು? ಅಲ್ಪಸಂಖ್ಯಾತ ಘಟಕಕ್ಕೆ ರಾಜೀನಾಮೆ ನೀಡಿದಂತೆ ಪರಿಷತ್‌ ಸ್ಥಾನಕ್ಕೆ ಜಬ್ಬಾರ್‌ ರಾಜೀನಾಮೆ ನೀಡಬೇಕಿತ್ತು. ಎಸ್‌ಡಿಪಿಐ ಅಭ್ಯರ್ಥಿಗೆ ಇವರು ಹಣಕಾಸು ಸಹಾಯ ಮಾಡಿದ್ದಾರೆ. ಇಂಥವರ ಮನೆಗೆ ಸಿಎಂ ಹೋಗಬೇಕಿತ್ತಾ ಡಿಸಿಎಂ ಹೋಗಬೇಕಿತ್ತಾ ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದರು.

ಅಬ್ದುಲ್ ಜಬ್ಬರ್ ವಿರುದ್ದ ಕ್ರಮ ಕೈಗೊಂಡಿದ್ದಕ್ಕೆ ನಾವು ಸ್ವಾಗತ ಮಾಡುತ್ತೇವೆ. ನಾನು ನಾಯಕ ನಾನು ನಾಯಕ ಎಂಬುದು ಸಚಿವರಿಗೆ ಸಿಕ್ಕ ಕಾಂಗ್ರೆಸ್ ಬಳುವಳಿ. ಕಾಂಗ್ರೆಸ್ ಕಾರಣದಿಂದಲೇ ಸಂಪನ್ಮೂಲ ಕ್ರೋಢೀಕರಣ ಮಾಡಿ ಮೆರೆಯುತ್ತಿದ್ದಾರೆ. ಯಾರೇ ಆಗಲಿ ಅವರ ವಿರುದ್ದ ಪಕ್ಷ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು.

Share This Article