ಶೃಂಗೇರಿ ಅಂಚೆ ಮತಗಳಲ್ಲಿ ಅಕ್ರಮ ಆರೋಪ – ಶಾಸಕ ಜೀವರಾಜ್ ಸೇರಿ ಮೂವರ ವಿರುದ್ಧ FIR

1 Min Read

ಚಿಕ್ಕಮಗಳೂರು: ಶೃಂಗೇರಿ (Sringeri) ಕ್ಷೇತ್ರದ ಅಂಚೆ ಮತಗಳಲ್ಲಿ ಅಕ್ರಮ ಆರೋಪದ ಮೇಲೆ ಶಾಸಕ ಡಿಎನ್ ಜೀವರಾಜ್ (DN Jeevaraj) ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಚಿಕ್ಕಮಗಳೂರು (Chikkamagaluru) ನಗರ ಠಾಣೆಗೆ ಅಂಚೆ ಮತ ಎಣಿಕೆ ಟೇಬಲ್‌ನ ಎಜೆಂಟ್ ಆಗಿರುವ ಸುಧೀರ್ ಕುಮಾರ್ ಮುರೋಳ್ಳಿ ಅವರು ದೂರು ನೀಡಿದ್ದಾರೆ. ದೂರಿನನ್ವಯ ಶಾಸಕ ಡಿ.ಎನ್.ಜೀವರಾಜ್, ಅಂದಿನ ಚುನಾವಣಾಧಿಕಾರಿ ವೇದಾಮೂರ್ತಿ ಹಾಗೂ ಅಂದಿನ ಜಿಲ್ಲಾಧಿಕಾರಿ ರಮೇಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಅಂಚೆ ಮತ ಮರು ಎಣಿಕೆಯಲ್ಲಿ ಗೆದ್ದ ಜೀವರಾಜ್‌ಗೆ ECI ಪ್ರಮಾಣ ಪತ್ರ

ಸ್ಟ್ರಾಂಗ್ ರೂಂ ಸೀಲ್ ಆಗಿರಲಿಲ್ಲ, ಮತಪತ್ರಗಳಿದ್ದ ಟ್ರಂಕ್ ಓಪನ್ ಆಗಿತ್ತು, ಟ್ರಂಕಿನ ಸೀಲ್ ಓಪನ್ ಆಗಿದ್ದು, ಲಾಕ್ ಕಟ್ ಆಗಿತ್ತು. ಹೀಗಾಗಿ ಮತ ಟ್ಯಾಂಪರಿಂಗ್ ಆಗಿರುವ ಅನುಮಾನವಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರಿನ ಅನ್ವಯ ಮೂವರ ವಿರುದ್ಧ ವಂಚನೆ, ಕ್ರಿಮಿನಲ್ ಹಾಗೂ ಫೋರ್ಜರಿ ಪ್ರಕರಣ ದಾಖಲಾಗಿದೆ.

Share This Article