ನ್ಯೂಯಾರ್ಕ್‌ನಲ್ಲಿ ಲ್ಯಾಂಡಿಂಗ್‌ ವೇಳೆ ಟ್ರಕ್‌ಗೆ ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನ ಡಿಕ್ಕಿ – ಇಬ್ಬರು ಸಾವು

1 Min Read

* 100ಕ್ಕೂ ಹೆಚ್ಚು ಮಂದಿಗೆ ಗಾಯ

- Advertisement -

ನ್ಯೂಯಾರ್ಕ್‌: ಇಲ್ಲಿನ (New York) ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ (LaGuardia Airport) ಲ್ಯಾಂಡಿಂಗ್‌ ವೇಳೆ ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನ (Air Canada Express Plane) ಫೈರ್ ಟ್ರಕ್‌ಗೆ ಡಿಕ್ಕಿಯಾಗಿದೆ. ಈ ಅವಘಡದಲ್ಲಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

- Advertisement -

ಕೆನಡಾದ ಮಾಂಟ್ರಿಯಲ್‌ನಿಂದ ಬರುತ್ತಿದ್ದ ಏರ್ ಕೆನಡಾ ಎಕ್ಸ್‌ಪ್ರೆಸ್ ಸಿಆರ್‌ಜೆ -900 ವಿಮಾನವು ರನ್‌ವೇ 4 ರಲ್ಲಿ ಲ್ಯಾಂಡ್‌ ಆಗಿತ್ತು. ಈ ವೇಳೆ ರನ್‌ ವೇ ನಲ್ಲೇ ಫೈರ್‌ ಟ್ರಕ್‌ಗೆ ವಿಮಾನ ಡಿಕ್ಕಿಯಾಗಿದೆ. ಈ ಅವಘಡದ ಬಳಿಕ ಒಳ ಬರುವ ವಿಮಾನಗಳಿಗೆ ಏರ್‌ಪೋರ್ಟ್‌ ಮುಚ್ಚಲಾಗಿದೆ. ಇದನ್ನೂ ಓದಿ: ಕತಾರ್‌ನಲ್ಲಿ ಸೇನಾ ಹೆಲಿಕಾಪ್ಟರ್ ಪತನ – 6 ಮಂದಿ ಸಾವು, ಓರ್ವ ನಾಪತ್ತೆ

- Advertisement -

- Advertisement -

ವಿಮಾನ ಅಪಘಾತದ ಬಳಿಕ ರಕ್ಷಣಾ ಕಾರ್ಯಾಚರಣೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ. ವೀಡಿಯೋದಲ್ಲಿ ವಿಮಾನದ ಮುಂಭಾಗಕ್ಕೆ ಹಾನಿಯಾಗಿರುವುದು ಕಾಣಿಸುತ್ತದೆ.

ವಿಮಾನ ಅಪಘಾತದಲ್ಲಿ ಗಾಯಗೊಂಡವರು ಹಾಗೂ ಹಾನಿಯ ಬಗ್ಗೆ ಅಧಿಕಾರಿಗಳು ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಇದನ್ನೂ ಓದಿ: ಹಾರ್ಮುಜ್‌ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳಿಗೆ 18 ಕೋಟಿ ರೂ. ಶುಲ್ಕ – ಯುದ್ಧದ ಖರ್ಚು ನಿಭಾಯಿಸಲು ಇರಾನ್‌ ಹೊಸ ಪ್ಲ್ಯಾನ್‌

Share This Article