ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಸಹೋದರರು ಸಾವು – ತಂದೆ ಕಣ್ಣೆದುರೇ ನಡೆದ ದುರಂತ

1 Min Read

ದಾವಣಗೆರೆ: ತುಂಗಭದ್ರಾ ನದಿಯಲ್ಲಿ (Tungabhadra River) ಈಜಲು ತೆರಳಿದ್ದ ಇಬ್ಬರು ಸಹೋದರರು ನೀರಿನಲ್ಲಿ ಮುಳುಗಿ ದಾರುಣ ಸಾವನ್ನಪ್ಪಿದ್ದಾರೆ.

- Advertisement -

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದಲ್ಲಿ ಘಟನೆ ನಡೆದಿದೆ. ಮನು (19) ಹಾಗೂ ಪ್ರಜ್ವಲ್ (18) ಮೃತ ಸಹೋದರರು. ತಂದೆಯ ಕಣ್ಣೆದುರಲ್ಲೇ ಅಣ್ಣ-ತಮ್ಮ ಪ್ರಾಣ ಬಿಟ್ಟಿದ್ದಾರೆ. ಇದನ್ನೂ ಓದಿ: ಕೆಲಸ ಕೊಡಿಸೋದಾಗಿ 25 ಕೋಟಿ ವಂಚನೆ – ಜಡ್ಜ್ ಸಹಿಯನ್ನೇ ನಕಲು ಮಾಡಿದ ಖತರ್ನಾಕ್ ದಂಪತಿ ಅರೆಸ್ಟ್

- Advertisement -

- Advertisement -

ತಂದೆಯೊಂದಿಗೆ ತುಂಗಭದ್ರಾ ನದಿಗೆ ಮೂವರು ಸಹೋದರರು ಈಜಲು ತೆರಳಿದ್ದರು. ಇಬ್ಬರು ಸಹೋದರರು ಆಯತಪ್ಪಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ತಂದೆ ಮಂಜಪ್ಪ ಅವರ ಸಮಯ ಪ್ರಜ್ಞೆಯಿಂದ ಕೊನೆಯ ಮಗ ಚಿರಂಜೀವಿ ಸಾವಿನಿಂದ ಪಾರಾದರು.

- Advertisement -

ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ – ನಾಲ್ವರು ಸ್ಥಳದಲ್ಲೇ ಸಾವು

Share This Article