Bengaluru Rain Alert | ಬೆಂಗಳೂರಲ್ಲಿ ರಣ ಮಳೆಗೆ ಮತ್ತೆರಡು ಬಲಿ

1 Min Read

ಬೆಂಗಳೂರು: ಬಿಸಿಲ ಬೇಗೆ ಮಧ್ಯೆ ಬೆಂಗಳೂರಿನಲ್ಲಿ ಗುಡುಗು, ಬಿರುಗಾಳಿ ಸಹಿತ ರಣ ಭೀಕರ ಮಳೆಯಾಗಿದೆ. ಸಂಜೆಯಾಗುತ್ತಿದ್ದಂತೆ ಮಳೆರಾಯ ಅಬ್ಬರಿಸಿದ್ದು, ಹಲವು ಏರಿಯಾಗಳಲ್ಲಿ ಬಿರುಗಾಳಿ, ಗುಡುಗು, ಆಲಿಕಲ್ಲು ಸಹಿತ ಮಳೆಯಾಗಿದೆ. ರಣರಕ್ಕಸ ಮಳೆಗೆ ಬೌರಿಂಗ್ ಆಸ್ಪತ್ರೆಯ ಆವರಣದಲ್ಲಿ ಗೋಡೆ ಕುಸಿದು ಒಬ್ಬರಲ್ಲ ಇಬ್ಬರಲ್ಲ ಮಕ್ಕಳು ಸೇರಿ 7 ಮಂದಿ ಉಸಿರು ಚೆಲ್ಲಿದ್ದಾರೆ. ಈ ದುರಂತ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಮತ್ತೆರಡು ಜೀವ ಬಲಿಯಾಗಿವೆ.

ಜೆಪಿ ನಗರದಲ್ಲಿ ವ್ಯಕ್ತಿ ಬಲಿ
ಜೆ.ಪಿ ನಗರದ ಸಾರಕ್ಕಿ ಬಸ್‌ ನಿಲ್ದಾಣದ ಬಳಿ ಜೆಡಿ ಮಾರಾ ಸ್ಲಂ ನಿವಾಸಿ ರಘು (35) ವಿದ್ಯುತ್‌ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ. ವಿದ್ಯುತ್ ಕಂಬಕ್ಕೆ ಅಳವಡಿಸಿದ್ದ ಕಬ್ಬಿಣದ ಪೈಪ್‌ ತಾಕಿ ಶಾಕ್‌ ಹೊಡೆದ ಪರಿಣಾಮ ರಘು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಜಿಬಿಎ ಮಾಹಿತಿ ನೀಡಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಗೋಡೋನ್ ಶೀಟ್‌ಗಳು ಬಿದ್ದು ವ್ಯಕ್ತಿ ದುರಂತ ಸಾವು
ಇನ್ನೂ ಮೈಸೂರು ರಸ್ತೆ ಕಸ್ತೂರಿ ಬಾಯ್ ನಗರ ಅಶ್ವಥ್ ಕಟ್ಟೆ ರಸ್ತೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಗೋಡೋನ್‌ಗೆ ಹಾಕಲಾಗಿದ್ದ ಸಿಮೆಂಟ್‌ ಶೀಟ್ ಗಳು ಬಿದ್ದು 35 ವರ್ಷದ ವ್ಯಕ್ತಿಯೊಬ್ಬರು ದುರಂತ ಸಾವಿಗೀಡಾಗಿದ್ದಾರೆ. ಕುಟುಂಬದ ಜೊತೆ ಮನೆಯೊಳಗಿದ್ದಾಗಲೇ ಈ ಘಟನೆ ಸಂಭವಿಸಿದೆ. ಅಲ್ಲದೇ ಈ ಪ್ರದೇಶದಲ್ಲಿ ಹಲವು ಮನೆಗಳು ಹಾನಿಗೆ ಒಳಗಾಗಿವೆ.

Share This Article