ಇನ್ಮುಂದೆ ಆನ್‌ಲೈನ್ ಮೂಲಕವೇ ಇ-ಖಾತಾ ಡೌನ್‌ಲೋಡ್‌ಗೆ ಅವಕಾಶ

1 Min Read

ಬೆಂಗಳೂರು: ಇ-ಖಾತಾದಾರರಿಗೆ ಜಿಬಿಎ (GBA) ಗುಡ್‌ನ್ಯೂಸ್ ನೀಡಿದೆ. ಇನ್ಮುಂದೆ ಆನ್‌ಲೈನ್ ಮೂಲಕವೇ ಇ-ಖಾತಾ (E-Khata) ಡೌನ್‌ಲೋಡ್ ಮಾಡಿಕೊಳ್ಳಬಹುದು.

ಇನ್ಮುಂದೆ ಇ-ಖಾತಾಗಾಗಿ ಕಚೇರಿಯಿಂದ ಕಚೇರಿಗೆ ಅಲೆಯುವ ಅಗತ್ಯ ಇಲ್ಲ. ಮನೆಯಲ್ಲಿಯೇ ಕುಳಿತು ಇ-ಖಾತಾ ಡೌನ್ಲೋಡ್ ಮಾಡಿಕೊಳ್ಳಬಹುದು. ಆನ್‌ಲೈನ್‌ನಲ್ಲಿ ಈ ಖಾತಾ ಡೌನ್ಲೋಡ್ ಮಾಡಿಕೊಳ್ಳುವ ವ್ಯವಸ್ಥೆಯನ್ನ ಜಿಬಿಎ ಜಾರಿ ಮಾಡಿದೆ. ಇದನ್ನೂ ಓದಿ: ಏಷ್ಯಾ ಖಂಡದ ಅತಿದೊಡ್ಡ ‘ಸ್ಕಾಡಾ ಕೇಂದ್ರ’ ಉದ್ಘಾಟನೆಗೆ ಸಜ್ಜು

ಆಸ್ತಿ ತೆರಿಗೆ ಐಡಿ ಬಳಸಿ ಆನ್‌ಲೈನ್‌ನಲ್ಲಿ ಇ-ಖಾತಾ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಕಳೆದ ಎರಡು ದಿನಗಳ ಹಿಂದೆ ಆನ್‌ಲೈನ್‌ನಲ್ಲಿ ಇ-ಖಾತಾ ಡೌನ್ಲೋಡ್ ಮಾಡಿಕೊಳ್ಳುವ ವ್ಯವಸ್ಥೆಯನ್ನ ಜಾರಿ ಮಾಡಲಾಗಿದೆ. ಸುಮಾರು 13 ಲಕ್ಷ ಇ-ಖಾತಾಗಳನ್ನು ತಕ್ಷಣವೇ ನಾಗರಿಕರಿಗೆ ಲಭ್ಯವಾಗುವಂತೆ ಮಾಡುವುದು ಜಿಬಿಎ ಉದ್ದೇಶವಾಗಿದೆ. ಅನಗತ್ಯ ವಿಳಂಬ ಮತ್ತು ಆಡಳಿತಾತ್ಮಕ ಅಡೆತಡೆಗಳನ್ನು ನಿವಾರಿಸುವುದು ಈ ಕ್ರಮದ ಮುಖ್ಯ ಉದ್ದೇಶಾಗಿದೆ.

ಆನ್‌ಲೈನ್‌ನಲ್ಲಿ ಇ-ಖಾತಾ ಡೌನ್ಲೋಡ್ ಹೇಗೆ ಮಾಡೋದು?
1 https://bbmpeaasthi.karnataka.gov.in/ ವೆಬ್‌ಸೈಟ್‌ಗೆ ಭೇಟಿ ನೀಡುವುದು
2.ಮೊಬೈಲ್ ಸಂಖ್ಯೆ ಮತ್ತು OTP ಬಳಸಿ ಲಾಗಿನ್ ಮಾಡಿ
3.ನಿಮ್ಮ SAS ಅಪ್ಲಿಕೇಶನ್ ಪ್ರಾಪರ್ಟಿ ತೆರಿಗೆ ಐಡಿಯನ್ನು ನಮೂದಿಸಿ
4.ತಕ್ಷಣವೇ ನಿಮ್ಮ ಇ-ಖಾತಾವನ್ನು ಡೌನ್‌ಲೋಡ್ ಮಾಡಿ

ಪ್ರಮುಖ ಅಂಶಗಳು:
* ಮಾಲೀಕರ ಹೆಸರನ್ನು ಬಳಸಿಕೊಂಡು ಕಷ್ಟಕರವಾದ ಹುಡುಕಾಟದಿಂದ ನಾಗರಿಕರಿಗೆ ಮುಕ್ತಗೊಳಿಸುತ್ತದೆ
* ನಗರ ಪಾಲಿಕೆ ಕಚೇರಿಗಳಿಗೆ ಭೇಟಿ ನೀಡದೇ, ಯಾವುದೇ ಸಮಯದಲ್ಲಿ ಆನ್‌ಲೈನ್‌ನಲ್ಲಿ ಲಭ್ಯ
* ಆಸ್ತಿ ತೆರಿಗೆ ವ್ಯವಸ್ಥೆಯಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಗೆ SMS / WhatsApp ಮೂಲಕ ಡೌನ್‌ಲೋಡ್ ಲಿಂಕ್ ಲಭ್ಯ
* ಬೆಂಗಳೂರು ನಗರ ಪಾಲಿಕೆ ಸಿಬ್ಬಂದಿ ಅಥವಾ ಅಧಿಕಾರಿಗಳನ್ನು ಭೇಟಿ ಮಾಡುವುದಾಗಲಿ, ಸಂಪರ್ಕಿಸುವ ಅಗತ್ಯವಿಲ್ಲ
* ಮಧ್ಯವರ್ತಿಗಳನ್ನು ಬಳಸಿಕೊಳ್ಳಬೇಡಿ
* ಕೇವಲ ಆನ್‌ಲೈನ್ ವ್ಯವಸ್ಥೆಯನ್ನು ಬಳಸಿ. ಇದನ್ನೂ ಓದಿ: ಫುಡ್‌ ಪಾಯಿಸನ್‌ನಿಂದ ಒಂದೇ ಕುಟುಂಬದ ನಾಲ್ವರು ಸಾವು

Share This Article