ಮೆಟ್ರೋದಲ್ಲಿ ಮಹಿಳೆಯರ ವಿಡಿಯೋ ಚಿತ್ರೀಕರಣ ಕೇಸ್‌ – ಆರೋಪಿಗೆ ಜಾಮೀನು‌ ನಿರಾಕರಿಸಿದ ಹೈಕೋರ್ಟ್

1 Min Read

ಬೆಂಗಳೂರು: ಮೆಟ್ರೋದಲ್ಲಿ (Namma Metro) ಮಹಿಳೆಯರ ಹಿಂಬದಿಯ ವಿಡಿಯೋ ಚಿತ್ರೀಕರಣ ಮಾಡಿದ್ದ ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್‌ ನಿರಾಕರಿಸಿದೆ.

ಮೆಟ್ರೋದಲ್ಲಿ ರಹಸ್ಯವಾಗಿ ಮಹಿಳೆಯರ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಆರೋಪಿ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಮೆಟ್ರೋದಲ್ಲಿ ಮಹಿಳೆಯರ ಹಿಂಬದಿ ಫೋಟೊ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹಾಕ್ತೀರಾ? ಏನಿದು ಅಸಹ್ಯ. ಇದನ್ನು ಹೇಗೆ ಮಾಡುತ್ತೀರಿ? ಮೆಟ್ರೊದಲ್ಲಿ ಕೂಡ ಮಹಿಳೆಯರನ್ನು ಸುರಕ್ಷಿತವಾಗಿ ಬಿಡುವುದಿಲ್ಲ. ಯಾವ ರೀತಿಯ ಮನುಷ್ಯರು ನೀವು? ಎಂದು ಕೋರ್ಟ್‌ ಬೇಸರ ವ್ಯಕ್ತಪಡಿಸಿದೆ. ಇದನ್ನೂ ಓದಿ: ಹಾಸನದ ಪಶು ವೈದ್ಯಕೀಯ ಕಾಲೇಜಿನ ಹಾಸ್ಟೆಲ್‍ನಲ್ಲಿ ರ‍್ಯಾಗಿಂಗ್‌ ಮಾರಾಮಾರಿ – ಹಲವರಿಗೆ ಗಾಯ

ದಿಗಂತ್ ಎಂಬಾತ ವಿಡಿಯೋ ಚಿತ್ರೀಕರಣ ಮಾಡಿ ಮೆಟ್ರೋ ಚಿಕ್ಸ್ ಎಂಬ ವೆಬ್‌ಸೈಟ್‌ಅಲ್ಲಿ ಹಾಕುತ್ತಿದ್ದ. ಈ ಕುರಿತು ಸ್ವಯಂಪ್ರೇರಿತ ಕೇಸ್ ದಾಖಲಿಸಿದ್ದ ಬನಶಂಕರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. 14 ವಿಡಿಯೋಗಳನ್ನು ಪೋಸ್ಟ್ ಮಾಡಿದ್ದ ದಿಗಂತ್ 5 ಸಾವಿರ ಫಾಲೋವರ್ಸ್ ಹೊಂದಿದ್ದ.

ವಿಡಿಯೋ ಪೋಸ್ಟ್ ಮಾಡಿದ ಬಳಿಕ ಇದೊಂದು ತಮಾಷೆಗಾಗಿ ಪೋಸ್ಟ್ ಮಾಡಿದ್ದು ಅಂತ ವಾದ ಮಾಡಿದ್ದ. ಇದನ್ನ ಗಂಭೀರವಾಗಿ‌ ಪರಿಗಣಿಸಿದ ಹೈಕೋರ್ಟ್, ತಾಂತ್ರಿಕ ಕಾರಣಗಳಿಂದ ಜಾಮೀನು ನೀಡೋದಕ್ಕೆ ಆಗೋದಿಲ್ಲ ಎಂದು ಜಾಮೀನು ನಿರಾಕರಿಸಿದೆ. ಇದನ್ನೂ ಓದಿ: ʻನಿನ್ನ ಹೂತು ಹಾಕ್ಬಿಡ್ತೀನಿʼ – ಸಚಿವರ ಸಹೋದರನಿಂದ ಮಹಿಳಾ ಅಧಿಕಾರಿಗೆ ಬೆದರಿಕೆ

Share This Article