ಬಳ್ಳಾರಿ: ಕರ್ತವ್ಯನಿರತ ಗ್ರಾ.ಪಂ ಸಿಬ್ಬಂದಿ (Gram Panchayat Staff) ಹಠಾತ್ತನೆ ಕುಸಿದು ಬಿದ್ದು, ಮೃತಪಟ್ಟಿರುವ ಘಟನೆ ವಿಜಯನಗರ (Vijayanagara) ಜಿಲ್ಲೆಯ ಹೊಸಪೇಟೆ (Hospet) ತಾಲೂಕಿನ ಸೀತಾರಾಮ ತಾಂಡಾದಲ್ಲಿ ನಡೆದಿದೆ.
ಸೀತಾರಾಮ ತಾಂಡಾದ ಗ್ರಾಮ ಪಂಚಾಯತಿ ನೀರಗಂಟಿ ಗಂಗಪ್ಪ ಎಲ್ (58) ಮೃತ ದುರ್ದೈವಿ. ನೀರಗಂಟಿ ಗಂಗಪ್ಪ ಕಳೆದ 29 ವರ್ಷಗಳಿಂದ ನೀರಗಂಟಿಯಾಗಿ ಸೀತಾರಾಮ ತಾಂಡದ ಗ್ರಾಮ ಪಂಚಾಯ್ತಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗಂಗಪ್ಪ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮತ್ತೆ ಕೆಲಸಕ್ಕೆ ಹೋಗಿದ್ದರು. ಇಂದು ಕರ್ತವ್ಯದಲ್ಲಿದ್ದಾಗಲೇ ಗಂಗಪ್ಪ ಹಠಾತ್ ಕುಸಿದು ಬಿದ್ದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ʻಗ್ಯಾಸ್ ಟ್ರಬಲ್ʼ – ಮಾಂಸಹಾರಿ ಹೋಟೆಲ್, ರೆಸ್ಟೋರೆಂಟ್ಗಳು ಬಂದ್
ಕೂಡಲೇ ಕುಟುಂಬಸ್ಥರು ಗಂಗಪ್ಪರನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಗಂಗಪ್ಪ ಮೃತಪಟ್ಟಿದ್ದಾರೆ. ಇದನ್ನೂ ಓದಿ: 4 ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆ – ವರದಕ್ಷಿಣೆಗಾಗಿ ಪತ್ನಿಯನ್ನು ಕೊಂದ ಪತಿ

