UPSC ಪರೀಕ್ಷೆಯಲ್ಲಿ ರ‍್ಯಾಂಕ್ ಗಿಟ್ಟಿಸಿಕೊಂಡ ಯಾದಗಿರಿಯ ನಾಲ್ವರು

1 Min Read

ಯಾದಗಿರಿ: ಪ್ರತೀ ಬಾರಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹಿಂದೆ ಬೀಳುತ್ತಿದ್ದ ಅತೀ ಹಿಂದುಳಿದ ಯಾದಗಿರಿ (Yadagiri) ಜಿಲ್ಲೆಯ ನಾಲ್ವರು ಈ ಬಾರಿ ಯುಪಿಎಸ್‌ಸಿ (UPSC) ಪರೀಕ್ಷೆಯಲ್ಲಿ ರ‍್ಯಾಂಕ್ ಗಿಟ್ಟಿಸಿಕೊಂಡಿದ್ದಾರೆ.

ಈ ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ರಾಜ್ಯವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಜಿಲ್ಲೆಯ 4 ಅಭ್ಯರ್ಥಿಗಳು ರ‍್ಯಾಂಕ್ ಪಡೆದು ಜಿಲ್ಲೆಯ ಹಿರಿಮೆಯನ್ನ ಹೆಚ್ಚಿಸಿದ್ದು, ಹಿಂದುಳಿದ ಜಿಲ್ಲೆ ಎಂಬ ಶಾಪವನ್ನ ಕಳಚಿದ್ದಾರೆ. ಇದನ್ನೂ ಓದಿ: ಬೆಂಗಳೂರು| ಕಾಲು ಜಾರಿ 25 ಅಡಿ ಆಳದ ಗುಂಡಿಗೆ ಬಿದ್ದ ಮಹಿಳೆ – 8 ಗಂಟೆ ಗುಂಡಿಯಲ್ಲೇ ಪರದಾಟ

ಶಹಾಪುರ ತಾಲೂಕಿನ ಕಿರಾಣಿ ವ್ಯಾಪಾರಿ ಮಗ ಸಂದೀಪ್ ಬಾಡದ್ 82ನೇ ರ‍್ಯಾಂಕ್ ಪಡೆದಿದ್ರೆ, ಯಾದಗಿರಿಯ ಬಸವೇಶ್ವರ ನಗರದ ನಿವಾಸಿ ನಿವೇದಿತಾ ಸಿ.ಭಾವಿಮನಿ 469ನೇ ರ‍್ಯಾಂಕ್ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಶಹಾಪುರದ ಬಸವರಾಜ ಜವಳಿ ಎಂಬುವರು 664 ರ‍್ಯಾಂಕ್ ಪಡೆದ್ರೆ, ಶಹಾಪುರ ತಾಲೂಕಿನ ಚೆನ್ನೂರು ಗ್ರಾಮದ ರೈತನ ಮಗ ಚಂದ್ರಶೇಖರ 880ನೇ ರ‍್ಯಾಂಕ್ ಪಡೆದು ಯಾದಗಿರಿ ಜಿಲ್ಲೆಗೆ ಕೀರ್ತಿ ತಂದುಕೊಟ್ಟಿದ್ದಾರೆ.

ಇನ್ನು ಪಬ್ಲಿಕ್ ಟಿವಿಯ `ಪಬ್ಲಿಕ್ ಹೀರೋ’ ಪುತ್ರ ರಾಜ್ಯಕ್ಕೆ ನಂ.1 ಆಗಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಪಬ್ಲಿಕ್ ಹೀರೋ ಸಣ್ಣಪ್ಪ ಕಮತೆ ಪುತ್ರ ಕಿರಣ್ ಕಮತೆ 53ನೇ ರ‍್ಯಾಂಕ್ ಪಡೆದು ರಾಜ್ಯಕ್ಕೆ ನಂಬರ್ 1 ಆಗಿದ್ದಾರೆ. ಬೆಂಗಳೂರಿನ ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರ್ ಆಗಿರುವ ಕಿರಣ ಕಮತೆ 6ನೇ ಪ್ರಯತ್ನದಲ್ಲಿ ಯಶಸ್ಸು ಗಳಿಸಿದ್ದಾರೆ. ಇದನ್ನೂ ಓದಿ: ವಿಶ್ವಮಟ್ಟದಲ್ಲಿ ದೇಶದ ಮಾನ ಕಳೆಯುತ್ತಿರುವ ಮೋದಿ ರಾಜೀನಾಮೆ ನೀಡಲಿ – LPG ದರ ಏರಿಕೆಗೆ ಸಿಎಂ ಕಿಡಿ

Share This Article