ಬೆಂಗಳೂರು: ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರ ಕಣ್ಣು, ಎದೆ ಮತ್ತು ತಲೆಯ ಭಾಗಕ್ಕೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಪೋಲೋ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಯತೀಶ್ ಸ್ಪಷ್ಟನೆ ನೀಡಿದ್ದಾರೆ.
ಬ್ಲಂಟ್ ಇಂಜೂರಿ ಆಗಿದ್ದು ಸದ್ಯಕ್ಕೆ ಸಿಟಿ ಸ್ಕ್ಯಾನಿಂಗ್, ಎಕ್ಸ್ ರೇ ಮಾಡಲಾಗಿದೆ. ಎಲ್ಲವೂ ನಾರ್ಮಲ್ ಆಗಿದ್ದು ಅಬ್ಸರ್ವೇಷನ್ ನಲ್ಲಿ ಇರಿಸುವ ಉದ್ದೇಶದಿಂದ ಪ್ರತ್ಯೇಕ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನು ಓದಿ: ಡಿಕೆಶಿಗೆ ಭಾರೀ ಮುಖಭಂಗ – ಶಾಸಕರನ್ನು ರಕ್ಷಿಸಲು ಸುಳ್ಳು ಹೇಳಿ ಭಾರೀ ಟೀಕೆಗೆ ಗುರಿಯಾದ್ರು ಡಿಕೆ ಬ್ರದರ್ಸ್!
Advertisement
Advertisement
ಹರಿತವಾದ ಚಾಕು ಅಥವಾ ಗ್ಲಾಸ್ ದೇಹಕ್ಕೆ ಚುಚ್ಚಿದಾಗ ರಕ್ತ ಹೆಪ್ಪುಗಟ್ಟಿ ಆ ಭಾಗ ಕಪ್ಪು, ಕೆಂಪು ವರ್ಣಕ್ಕೆ ತಿರುಗುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ `ಬ್ಲಂಟ್ ಇಂಜೂರಿ’ ಎಂದು ಕರೆಯಲಾಗುತ್ತದೆ. ಇದನ್ನು ಓದಿ: ಮೊದ್ಲು ಮದುವೆ ಬಳಿಕ ಎದೆನೋವು ಈಗ ಆಕ್ಸಿಡೆಂಟ್ – ಕಡೆಗೂ ಆನಂದ್ ಸಿಂಗ್ ತಲೆಗೆ 12 ಹೊಲಿಗೆ!
Advertisement
ಶಾಸಕರ ಎದೆ, ಕಣ್ಣು ಹಾಗೂ ತಲೆಯ ಭಾಗಕ್ಕೆ ಬಲವಾಗಿ ಬಾಟಲಿಯಿಂದ ಹೊಡೆದ ಪರಿಣಾಮ ರಕ್ತ ಹೆಪ್ಪುಗಟ್ಟಿದೆ. ಹೀಗಾಗಿ ತಲೆಗೆ ಗಾಯವಾಗಿದ್ದರಿಂದ 24 ಗಂಟೆ ಕಾಲ ಅಬ್ಸರ್ವೇಷನ್ ನಲ್ಲಿ ಇರಿಸಲಾಗಿದೆ ಎನ್ನವ ವಿಚಾರ ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv