– ಅನ್ನಭಾಗ್ಯದ ಅಕ್ಕಿ 7 ಕೆಜಿ ಸಿಗುತ್ತಾ..?
ಬೆಂಗಳೂರು: ರೈತರ ಸಾಲ ಮನ್ನಾ ಘೋಷಿಸಿದ್ದ ಜುಲೈ 5ರಂದು ಮಂಡನೆ ಆಗಿದ್ದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಜೆಟ್‍ನಲ್ಲಿ ಮಹತ್ವದ ಬದಲಾವಣೆ ಆಗೋದು ನಿಶ್ಚಿತ ಅಂತಾ ಹೇಳಲಾಗುತ್ತಿದೆ.
ಸುಸ್ತಿ ಸಾಲ ಮನ್ನಾದಿಂದ ಎಲ್ಲಾ ರೈತರಿಗೆ ಲಾಭ ಸಿಕ್ಕಿಲ್ಲ. ಹೀಗಾಗಿ ಚಾಲ್ತಿ ಸಾಲವನ್ನೂ ಮನ್ನಾ ಮಾಡಬೇಕೆಂದು ವಿಪಕ್ಷ ಬಿಜೆಪಿ, ರಾಜಧಾನಿಯಲ್ಲಿ ರೈತರು ಬೀದಿಗಿಳಿದು ರೈತರು ನಡೆಸಿದ್ದ ಹೋರಾಟಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಮಣಿದಂತೆ ಕಾಣಿಸ್ತಿದ್ದು, ಬಜೆಟ್ ಭಾಷಣ ವೇಳೆ ಚಾಲ್ತಿ ಸಾಲವನ್ನೂ ಮನ್ನಾದ ಘೋಷಣೆ ಮಾಡೋ ಸಾಧ್ಯತೆ ಇದೆ. ತಮ್ಮ ಸರ್ಕಾರದ ಜನಪ್ರಿಯ ಕಾರ್ಯಕ್ರಮವಾಗಿದ್ದ ಅನ್ನಭಾಗ್ಯದ ಅಕ್ಕಿಯನ್ನು 7 ರಿಂದ 5 ಕೆಜಿಗೆ ಇಳಿಸಿದ್ದು ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೂ ಕಾರಣವಾಗಿತ್ತು.
Advertisement
ಇನ್ನು ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಕುಮಾರಸ್ವಾಮಿ ಪೆಟ್ರೋಲ್, ಡೀಸೆಲ್ ಮೇಲೆ ಸೆಸ್ ಹೆಚ್ಚಳ ಮಾಡಿದ್ದರು. ಇದರಿಂದಾಗಿ ಪೆಟ್ರೋಲ್ ಲೀಟರ್‍ಗೆ 1 ರೂಪಾಯಿ 14 ಪೈಸೆ, ಡೀಸೆಲ್ 1 ರೂಪಾಯಿ 12 ಪೈಸೆಯಷ್ಟು ದುಬಾರಿ ಆಗಿತ್ತು. ತೈಲ ಬೆಲೆ ಏರಿಕೆಯನ್ನೇ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಅಸ್ತ್ರವಾಗಿ ಮಾಡಿಕೊಂಡಿದ್ದ ಕಾಂಗ್ರೆಸ್‍ಗೆ ಸೆಸ್ ಹೆಚ್ಚಳದಿಂದ ಇರಿಸು ಮುರಿಸಾಗಿದೆ. ಅದ್ದರಿಂದ ಸೆಸ್‍ನ್ನು ಇಳಿಸಿ ಅಂತ ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಕುಮಾರಸ್ವಾಮಿಗೆ ಪತ್ರ ಬರೆದು ಒತ್ತಡ ಹೇರಿದ್ದಾರೆ.
Advertisement
ಸಾಲಮನ್ನಾ ಮಾಡುತ್ತವೆ ಆದ್ರೆ ಬಡ್ಡಿಯನ್ನು ಮನ್ನಾ ಮಾಡೋಕೆ ಸಾಧ್ಯವೇ ಇಲ್ಲ ಎಂದು ಬ್ಯಾಂಕ್ ಗಳು ಸ್ಪಷ್ಟನೆ ನೀಡಿವೆ ಎನ್ನಲಾಗಿದೆ. ಒಂದು ವೇಳೆ ಬಡ್ಡಿ ಮನ್ನಾ ಮಾಡಲು ಬ್ಯಾಂಕ್‍ಗಳು ಒಪ್ಪದೇ ಇದ್ದಲ್ಲಿ ಆಗ ಸಮ್ಮಿಶ್ರ ಸರ್ಕಾರಕ್ಕೆ ಮತ್ತಷ್ಟು ಹೊರೆಯಾಗಲಿದೆ. ಬಡ್ಡಿ ಮನ್ನಾಕ್ಕಾಗಿಯೇ 2 ಸಾವಿರ ಕೋಟಿ ರೂ. ಹೊಸದಾಗಿ ಹೊಂದಿಸಬೇಕಾದ ಅನಿವಾರ್ಯತೆ ನಿರ್ಮಾಣ ಸಮ್ಮಿಶ್ರ ಸರ್ಕಾರ ಎದುರಾಗಲಿದೆ.