ಕುಡ್ಲದ ಬೆಡಗಿ ಅನುಷ್ಕಾ ಶೆಟ್ಟಿಗೆ (Anushka Shetty) ಇಂದು (ನ.7) ಹುಟ್ಟುಹಬ್ಬದ ಸಂಭ್ರಮ. ಈ ದಿನದಿಂದು ಅವರ ಸಿನಿಮಾಗಾಗಿ ಎದುರು ನೋಡುತ್ತಿರುವ ಫ್ಯಾನ್ಸ್‌ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಅನುಷ್ಕಾ ಲುಕ್ ಅನ್ನು ಚಿತ್ರತಂಡ ಅನಾವರಣ ಮಾಡಿದೆ. ಇದನ್ನೂ ಓದಿ:‘ಜೈ ಹನುಮಾನ್’ ಸಿನಿಮಾದಲ್ಲಿ ರಾಮನಾಗಿ ರಾಣಾ ದಗ್ಗುಬಾಟಿ?
Prepare for the mighty queen’s rightful return to power and her reign over the #GHAATI ❤????#GhaatiGlimpse out now ????????
▶️ https://t.co/aanFvSxpIk
Happy Birthday to ‘The Queen’ #AnushkaShetty ✨
In Telugu, Tamil, Hindi, Kannada and Malayalam.#HappyBirthdayAnushkaShetty… pic.twitter.com/XuxZEMpz2I
— UV Creations (@UV_Creations) November 7, 2024
ಅಭಿಮಾನಿಗಳಿಗೆ ಡಬಲ್ ಧಮಾಕ ಎಂಬಂತೆ ಎರಡು ಸಿನಿಮಾಗಳ ಹೊಸ ಪೋಸ್ಟರ್ ಅನ್ನು ನಟಿಯ ಹುಟ್ಟುಹಬ್ಬದಂದು ಚಿತ್ರತಂಡ ಅನಾವರಣ ಮಾಡಿದೆ. ಅದರಲ್ಲಿ ಅನುಷ್ಕಾ ನಟನೆಯ ಬಹುನಿರೀಕ್ಷಿತ ‘ಘಾಟಿ’ (Ghaati) ಚಿತ್ರದ ಪೋಸ್ಟರ್ ರಿವೀಲ್ ಆಗಿದೆ. ರಕ್ತ ಮೆತ್ತಿದ ಕೈಗಳಲ್ಲಿ ಚುಟ್ಟಾ ಹಿಡಿದು ಸೇದುತ್ತಾ ಖಡಕ್ ಲುಕ್‌ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ನೋಡಿದ್ರೆ, ಈ ಹಿಂದಿನ ಅರುಂಧತಿ, ಭಾಗಮತಿ ಪಾತ್ರಗಳನ್ನು ನೆನಪಿಸುವಂತಿದೆ.
VICTIM. CRIMINAL. LEGEND.
The Queen will now rule the #GHAATI ❤????
Wishing ‘The Queen’ #AnushkaShetty a very Happy Birthday ✨#GhaatiGlimpse Video today at 4.05 PM ✨
In Telugu, Tamil, Hindi, Kannada and Malayalam.#HappyBirthdayAnushkaShetty@DirKrish @UV_Creations… pic.twitter.com/jgZEBPU5gx
— UV Creations (@UV_Creations) November 7, 2024
ಇನ್ನೂ ಈ ಚಿತ್ರವನ್ನು ಕ್ರಿಶ್ ನಿರ್ದೇಶನ ಮಾಡಿದ್ದಾರೆ. ‘ಘಾಟಿ’ ಸಿನಿಮಾ ನಿರ್ಮಾಣ ಮಾಡಿರೋದು ನಟ ಪ್ರಭಾಸ್ ಸಹಭಾಗಿತ್ವದ ಯುವಿ ಕ್ರಿಯೇಶನ್ಸ್. ಸದ್ಯ ನಟಿಯ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಕ್ವೀನ್ ಇಸ್ ಬ್ಯಾಕ್ ಎನ್ನುತ್ತಾ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಇದನ್ನೂ ಓದಿ:ಉದ್ಯಮಿ ಪ್ರತ್ಯಕ್ಷ್ ಜೊತೆ ಚಂದನಾ ಅನಂತಕೃಷ್ಣ ಮದುವೆ ಡೇಟ್ ಫಿಕ್ಸ್
View this post on Instagram
ಇದರ ಜೊತೆಗೆ ಅನುಷ್ಕಾ ಶೆಟ್ಟಿ ನಟನೆಯ ಮಲಯಾಳಂ ಸಿನಿಮಾ ‘ಕತನಾರ್’ (Kathanar) ಚಿತ್ರದ ಲುಕ್ ಕೂಡ ರಿವೀಲ್ ಆಗಿದೆ. ನೀಲ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭೂತದ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ. ಈ ಚಿತ್ರದ ಮೂಲಕ ಮೊದಲ ಬಾರಿಗೆ ಮಾಲಿವುಡ್‌ಗೆ (Mollywood) ನಟಿ ಪಾದಾರ್ಪಣೆ ಮಾಡುತ್ತಿದ್ದಾರೆ.