CinemaLatestMain PostNationalSouth cinema

ಮತ್ತೆ ಕನ್ನಡಿಗರ ಮನ ಗೆದ್ದ ಅನುಷ್ಕಾ ಶೆಟ್ಟಿ – ಯುಗಾದಿ ಹಬ್ಬಕ್ಕೆ ಕನ್ನಡದಲ್ಲೇ ಶುಭಾಶಯ

ಹೈದರಾಬಾದ್: ಕನ್ನಡದ ಬೆಡಗಿ ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಕನ್ನಡದಲ್ಲಿಯೇ ಯುಗಾದಿ ಹಬ್ಬಕ್ಕೆ ಶುಭ ಕೋರುವ ಮೂಲಕ ಮತ್ತೊಮ್ಮೆ ಎಲ್ಲರ ಮನ ಗೆದ್ದಿದ್ದಾರೆ.

ಅನುಷ್ಕಾ ತಮ್ಮ ಇನ್‍ಸ್ಟಾದಲ್ಲಿ, “ಯುಗಾದಿ ಶುಭಾಶಯಗಳು. ನಿಮಗೂ ಹಾಗು ನಿಮ್ಮ ಕುಟುಂಬದ ಎಲ್ಲರಿಗೂ ಈ ಯುಗಾದಿಯು ಸಂತೋಷ ಹಾಗೂ ಸಮೃದ್ಧತೆನ್ನು ತರಲಿ. ನಾವೆಲ್ಲರೂ ಈ ಸಮಯವನ್ನು ಕುಟುಂಬದೊಂದಿಗೆ ಆನಂದಿಸೋಣ. ಸರ್ಕಾರದ ಆದೇಶದಂತೆ ಎಲ್ಲರೂ ಮನೆಯಲ್ಲೇ ಇರಿ ಸುರಕ್ಷಿತವಾಗಿರಿ ಎಂದು ವಿನಂತಿಸುತ್ತೇನೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಅನುಷ್ಕಾ ಅವರ ಪೋಸ್ಟ್ ಗೆ ಅಭಿಮಾನಿಗಳು ಕನ್ನಡದಲ್ಲಿಯೇ ಕಮೆಂಟ್ ಮಾಡುವ ಮೂಲಕ ಯುಗಾದಿ ಹಬ್ಬಕ್ಕೆ ಶುಭ ಕೋರಿದ್ದಾರೆ.

 

View this post on Instagram

 

ಯುಗಾದಿ ಶುಭಾಶಯಗಳು ???? ನಿಮಗೂ ಹಾಗು ನಿಮ್ಮ ಕುಟುಂಬದ ಎಲ್ಲರಿಗೂ ಈ ಯುಗಾದಿಯು ಸಂತೋಷ ಹಾಗು ಸಮೃದ್ಧತೆನ್ನು ತರಲಿ. ನಾವೆಲ್ಲರೂ ಈ ಸಮಯವನ್ನು ಕುಟುಂಬದೊಂದಿಗೆ ಆನಂದಿಸೋಣ. ಸರಕಾರದ ಆದೇಶದಂತೆ ಎಲ್ಲರೂ ಮನೆಯಲ್ಲೇ ಇರಿ ಸುರಕ್ಷಿತವಾಗಿರಿ ಎಂದು ವಿನಂತಿಸುತ್ತೇನೆ???? #HappyUgadi #Statyindoor #Staysafe Ugadi wishes to all ???? Let this ugadi bring happiness & prosperity to you and your family. Let us all enjoy this time with family. I request everyone to obey the Government’s orders to stay at home and stay safe???? #HappyUgadi #Statyindoor #Staysafe

A post shared by AnushkaShetty (@anushkashettyofficial) on

ಈ ಹಿಂದೆ ಅನುಷ್ಕಾ ತಮ್ಮ ತಾಯಿಗೆ ಕನ್ನಡದಲ್ಲಿ ಹುಟ್ಟುಹಬ್ಬ ಶುಭಾಶಯ ತಿಳಿಸುವ ಮೂಲಕ ಕೋಟ್ಯಂತರ ಕನ್ನಡಿಗರ ಮನಸ್ಸು ಗೆದ್ದಿದ್ದರು. ತಮ್ಮ ತಾಯಿ ಪ್ರಫುಲ್ಲಾ ಅವರ ಹುಟ್ಟುಹಬ್ಬದ ದಿನದಂದು ತಾಯಿ ಹಾಗೂ ಇತರೆ ಕುಟುಂಬಸ್ಥರೊಂದಿಗೆ ಅನುಷ್ಕಾ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು. ಫೋಟೋ ಹಾಕಿ ಅದಕ್ಕೆ, “ಜನ್ಮ ದಿನದ ಹಾರ್ದಿಕ ಶುಭಾಶಯಗಳು ಅಮ್ಮಾ” ಎಂದು ಬರೆದಿದ್ದರು.

 

View this post on Instagram

 

ಜನ್ಮದಿನದ ಹಾರ್ದಿಕ ಶುಭಾಶಯಗಳು ಅಮ್ಮಾ ????????????????????❤️

A post shared by AnushkaShetty (@anushkashettyofficial) on

ಮಂಗಳೂರು ಮೂಲದವರಾದ ನಟಿ ಅನುಷ್ಕಾ ಶೆಟ್ಟಿ ಅವರು ಹೆಚ್ಚು ನಟಿಸಿದ್ದು ಮಾತ್ರ ತೆಲುಗು, ತಮಿಳು ಸಿನಿಮಾದಲ್ಲಿ. ಆದರೆ ಅನುಷ್ಕಾ ಕನ್ನಡ ಪ್ರೇಮ, ತಾಯ್ನಾಡಿಗೆ ಮಿಡಿಯುವ ಪ್ರೀತಿ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ. ಈ ಹಿಂದೆ ಅನುಷ್ಕಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಂಕ್ರಾಂತಿ ಹಬ್ಬಕ್ಕೆ ಕನ್ನಡದಲ್ಲಿ ಶುಭಾಶಯ ಬರೆದು ಅಭಿಮಾನಿಗಳ ಮನಗೆದ್ದಿದ್ದರು. ಅನುಷ್ಕಾ ಅವರ ಪೋಸ್ಟ್‍ಗೆ ಕನ್ನಡಿಗರು ಫಿದಾ ಆಗಿದ್ದರು.

ಅನುಷ್ಕಾ ಶೆಟ್ಟಿ `ನಿಶಬ್ದಂ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಸದ್ಯದಲ್ಲೇ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಹೇಮಂತ್ ಮಧುಕರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಈಗಾಗಲೆ ಟೀಸರ್ ಮತ್ತು ಪೋಸ್ಟರ್‍ಗಳ ಮೂಲಕ ಸಿನಿಮಾ ಬಹಳಷ್ಟು ನಿರೀಕ್ಷೆ ಹೆಚ್ಚಿಸಿದೆ. ಸ್ವೀಟಿ ಹೊಸ ಚಿತ್ರದಲ್ಲಿ ಹೇಗೆ ಮೋಡಿ ಮಾಡಲಿದ್ದಾರೆ ಎಂದು ನೋಡಲು ಅಭಿಮಾನಿಗಳು ಕಾತುರದಿಂದ ಕಾದ ಕುಳಿತಿದ್ದಾರೆ.

Leave a Reply

Your email address will not be published. Required fields are marked *

Back to top button