ಕ್ಯಾಮೆರಾ ಮುಂದೆ ನಿಂತ ಮೊದಲ ದಿನದ ಸವಿ ನೆನಪನ್ನು ಹಂಚಿಕೊಂಡ ಅನುಷ್ಕಾ ಶೆಟ್ಟಿ

Public TV
1 Min Read
Anushka Shetty 3

ಹೈದರಾಬಾದ್: ತನ್ನ ಮೊದಲ ಚಿತ್ರದ ಚಿತ್ರೀಕರಣದ ದಿನವನ್ನ ನೆನೆದ ನಟಿ ಅನುಷ್ಕಾ ಶೆಟ್ಟಿ ತಮ್ಮ ಫೇಸ್‍ಬುಕ್ ನಲ್ಲಿ ಚಿತ್ರ ತಂಡದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

“ಮಾರ್ಚ್ 12, 2005 ರಂದು ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡ ನನಗೆ `ಆಕ್ಷನ್’ ಎನ್ನುವ ಪದ ಕೇಳಿದಾಗ ಭಯ, ಉತ್ಸಾಹ, ಅರಿವಿಲ್ಲದ ಎಲ್ಲಾ ಭಾವನೆಗಳು ಒಂದೇ ಕ್ಷಣದಲ್ಲಿ ಅನುಭವವಾಗಿತ್ತು. ಈ ಭಾವನೆ ಮುಂದಿನ ನನ್ನ ಎಲ್ಲಾ ಹೊಸ ಚಿತ್ರಗಳಿಗೂ ಇದೇ ತರಹ ಇರುತ್ತದೆ. ಚಿತ್ರದ ನಿರ್ದೇಶಕರಾದ ಪೂರಿ ಜಗನ್ನಾಥ್, ಸುಪ್ರಿ ನಾಗಾರ್ಜುನ್, ಸಚಿನ್ (ಮೇಕಪ್ ಮತ್ತು ಹೇರ್ ಸ್ಟೈಲ್), ಸೋನು, ಅನ್ನಪೂರ್ಣ ಸ್ಟುಡಿಯೋ, ಮತ್ತು ಸೂಪರ್ ಚಿತ್ರ ತಂಡದವರಿಗೆಲ್ಲಾ ಅಭಿನಂದಿಸುತ್ತೇನೆ. ನನ್ನ ಮೇಲೆ ಇಟ್ಟ ನಂಬಿಕೆಗೆ, ನನಗಾಗಿ ನಿಂತಿದಕ್ಕೆ, ನನಗೆ ಸಹಕರಿಸಿದಕ್ಕೆ ಮತ್ತು ನನ್ನಲ್ಲಿರುವ ಪ್ರತಿಭೆಯನ್ನ ಹೊರ ತಂದಿದ್ದಕ್ಕೆ ಹೃತ್ಪೂರ್ವಕ ಅಭಿನಂದೆನೆಗಳನ್ನ ಸಲ್ಲಿಸುತ್ತೇನೆ. ನನ್ನ ಮುಂದಿನ ಹೊಸ ಚಿತ್ರಗಳ ಸಿಬ್ಬಂದಿಗಳು, ಸಹನಟರು, ಹೇಮ್‍ಚಂದ್, ಎಎಸ್‍ಎಫ್ ಮತ್ತು ಅಭಿಮಾನಿಗಳಿಗೂ ವಂದಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

https://www.facebook.com/AnushkaShetty/photos/a.452351745192.374596.210302285192/10160289166095193/?type=3&theater

ತೆಲುಗಿನ `ಸೂಪರ್’ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಮಾಡಿದ ನಟಿ ಅನುಷ್ಕಾ ಶೆಟ್ಟಿ, ತಮ್ಮ ನಿರಂತರ ಪರಿಶ್ರಮ ಮತ್ತು ಪ್ರತಿಭೆಯಿಂದ ಸಾಕಷ್ಟು ಅಭಿಮಾನಿ ಬಳಗವನ್ನ ಪಡೆದುಕೊಂಡಿದ್ದಾರೆ. `ಅರುಂಧತಿ’ ಸಿನಿಮಾದ ಮೂಲಕ ಜನಪ್ರಿಯತೆಯನ್ನ ಪಡೆದಿದ್ದ ಅನುಷ್ಕಾ ಶೆಟ್ಟಿ, ಇತ್ತೀಚಿನ ಬಾಹುಬಲಿ, ಭಾಗಮತಿ ಸಿನಿಮಾದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಟಾಲಿವುಡ್‍ನ ನಾಗ್ ಆಶ್ವಿನ್ ನಿರ್ದೇಶನದ ತ್ರಿಭಾಷಾ ಚಿತ್ರವಾದ `ಮಹಾನಟಿ’ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ನಟಿಸುತ್ತಿದ್ದು, ಇದೇ ತಿಂಗಳ 31 ರಂದು ಚಿತ್ರವನ್ನ ಬಿಡುಗಡೆ ಮಾಡಲಿದೆ ಎಂದು ಚಿತ್ರ ತಂಡವು ತಿಳಿಸಿದೆ. ಈ ಚಿತ್ರದಲ್ಲಿ ಸಮಂತಾ ಅಕ್ಕಿನೇನಿ, ಮಲಯಾಳಂನ ದುಲ್ಕಾರ್ ಸಲ್ಮಾನ್, ಕೀರ್ತಿ ಸುರೇಶ್, ವಿಜಯ್ ದೇವಕರೊಂಡ ಮತ್ತು ಪ್ರಕಾಶ್ ರಾಜ್ ನಟಿಸುತ್ತಿದ್ದಾರೆ.   ಇದನ್ನೂ ಓದಿ: ಭಾಗಮತಿ ಬಳಿಕ ‘ಭಾನುಮತಿ’ ನೆರಳಲ್ಲಿ ಅನುಷ್ಕಾ ಶೆಟ್ಟಿ

 

anushka shetty bhanumati

Share This Article
Leave a Comment

Leave a Reply

Your email address will not be published. Required fields are marked *