ಹೈದರಾಬಾದ್: ಮೊನ್ನೆಯಾಷ್ಟೇ 36ನೇ ಹುಟ್ಟುಹಬ್ಬ ಆಚರಿಸಿಕೊಂಡ ಅನುಷ್ಕಾ ಶೆಟ್ಟಿ ಈಗ ತಮ್ಮ ಮೊದಲ ಕ್ರಷ್ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಹೌದು, ಇತ್ತೀಚೆಗೆ ತೆಲುಗು ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವ ಸಮಯದಲ್ಲಿ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅನುಷ್ಕಾ ಶೆಟ್ಟಿ, ರಾಹುಲ್ ದ್ರಾವಿಡ್ ಮೇಲೆ ಮೊದಲ ಕ್ರಷ್ ಆಗಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅನುಷ್ಕಾ ಶೆಟ್ಟಿ
ಮೂಲತಃ ಕರಾವಳಿ ಮೂಲದ ಅನುಷ್ಕಾ ಶೆಟ್ಟಿ ಅವರಿಗೆ ದ್ರಾವಿಡ್ ಅವರಲ್ಲಿರುವ ತಾಳ್ಮೆ, ಬ್ಯಾಟಿಂಗ್, ನಡವಳಿಕೆ, ನಾಯಕತ್ವ ಗುಣವನ್ನು ನೋಡಿ ಹುಚ್ಚು ಹಿಡಿಯುವಷ್ಟು ಅವರನ್ನು ಇಷ್ಟಪಟ್ಟಿದ್ದರಂತೆ.
ರಾಜಮೌಳಿ ನಿರ್ದೇಶನದ ಬಾಹುಬಲಿಯಲ್ಲಿ ದೇವಸೇನಾ ಪಾತ್ರದಲ್ಲಿ ಮಿಂಚಿದ್ದ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ನಡುವೆ ಲವ್ ಇದೆ ಎನ್ನುವ ಸುದ್ದಿ ಈ ಹಿಂದೆ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಬಾಹುಬಲಿಯಲ್ಲಿ ಇವರಿಬ್ಬರ ಸ್ಕ್ರೀನ್ ಕೆಮೆಸ್ಟ್ರಿ ನೋಡಿ ಅಭಿಮಾನಿಗಳು ಸಹ ಇಬ್ಬರ ನಡುವೆ ಪ್ರೀತಿ ಇದೆ ಎಂದು ವದಂತಿ ಹಬ್ಬಿಸುತ್ತಿದ್ದರು. ಆದರೆ ಪ್ರಭಾಸ್ ಈ ಹಿಂದೆ ನಮ್ಮಿಬ್ಬರ ಮಧ್ಯೆ ಯಾವುದೇ ಲವ್ ಇಲ್ಲ ಎಂದು ಹೇಳಿಕೆ ನೀಡಿ ಗಾಸಿಪ್ ಗಳಿಗೆ ತೆರೆ ಎಳೆದಿದ್ದರು.
ಸದ್ಯ ಅರುಂಧತಿ ಖ್ಯಾತಿಯ ಅನುಷ್ಕಾ ಶೆಟ್ಟಿ ಅವರು ತಮ್ಮ ಮುಂದಿನ ಚಿತ್ರ ‘ಭಾಗಮತಿ’ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ: ಹುಟ್ಟುಹಬ್ಬದ ದಿನದಂದು ಕಾರು ಡ್ರೈವರ್ ಗೆ ಕಾರು ಗಿಫ್ಟ್ ಕೊಟ್ಟ ಅನುಷ್ಕಾ – ಕಾರಿನ ಬೆಲೆ ಎಷ್ಟು ಗೊತ್ತಾ?
ಇದನ್ನೂ ಓದಿ: ಹುಟ್ಟು ಹಬ್ಬದ ಸಂಭ್ರಮದಲ್ಲಿರೋ ಪ್ರಭಾಸ್‍ಗೆ ಅನುಷ್ಕಾ ಗಿಫ್ಟ್ ಕೊಟ್ಟಿದ್ದು ಏನು ಗೊತ್ತಾ?