ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಾವು ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದು ಏಕೆ ಎನ್ನುವ ಪ್ರಶ್ನೆಗೆ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ ಅನುಷ್ಕಾ ಶರ್ಮಾ ಫಿಲ್ಮ್ ಫೇರ್ ಮ್ಯಾಗಜೀನ್‍ಗೆ ಸಂದರ್ಶನ ನೀಡಿದ್ದರು. ಈ ವೇಳೆ ಸಂದರ್ಶಕ ನೀವು 30 ವಯಸ್ಸಿನ ಮೊದಲೇ ಏಕೆ ಮದುವೆ ಆಗಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಆಗ ಅನುಷ್ಕಾ ತಾವು ಏಕೆ ಬೇಗ ಮದುವೆ ಆಗಿದ್ದೇನೆ ಎಂಬುದನ್ನು ಹೇಳಿದ್ದಾರೆ.
ಪ್ರೇಕ್ಷಕರಿಗೆ ನಮ್ಮ ಚಿತ್ರರಂಗದ ಬಗ್ಗೆ ಹೆಚ್ಚು ತಿಳುವಳಿಕೆ ಇದೆ. ಕಲಾವಿದರನ್ನು ಪ್ರೇಕ್ಷಕರು ಕೇವಲ ತೆರೆಯ ಮೇಲೆ ನೋಡುತ್ತಾರೆ. ನಿಮಗೆ ಮದುವೆ ಆಗಿದ್ದೀಯಾ, ನೀವು ತಾಯಿ ಆಗಿದ್ದೀರಾ ಎಂಬ ವಿಷಯಗಳು ಅವರಿಗೆ ಮುಖ್ಯವಾಗುವುದಿಲ್ಲ. ಈ ಮನಸ್ಥಿತಿಯಿಂದ ನಾವು ಹೊರ ಬರಬೇಕು. 29ನೇ ವಯಸ್ಸಿನಲ್ಲಿ ನಟಿಯರು ಮದುವೆಯಗುವುದು ಕಡಿಮೆ. ಬೇಗ ಮದುವೆಯಾಗುವ ಕಾರಣವೆನೆಂದರೆ ನಾನು ಪ್ರೀತಿಯಲ್ಲಿ ಇದ್ದೆ, ನಾನು ಆತನನ್ನು ಪ್ರೀತಿಸಿದೆ. ಹಾಗಾಗಿ ನಾನು ಬೇಗ ಮದುವೆಯಾದೆ ಎಂದು ಅನುಷ್ಕಾ ಹೇಳಿದ್ದಾರೆ.
ನಾನು ಮದುವೆ ಆಗಲೇ ಬೇಕಿತ್ತು. ನಾನು ಯಾವಾಗಲೂ ಮಹಿಳೆಯರೊಂದಿಗೆ ಸಮಾನ ವರ್ತನೆಯ ಪರವಾಗಿರುತ್ತೇನೆ. ಹಾಗಾಗಿ ನಾನು ನನ್ನ ಜೀವನದ ಅತ್ಯಂತ ಸುಂದರವಾದ ಕ್ಷಣಗಳನ್ನು ಯಾವುದೇ ಭಯದಿಂದ ಬದುಕಲು ಇಷ್ಟಪಡುವುದಿಲ್ಲ. ಒಬ್ಬ ಪುರುಷ ಮದುವೆ ಮೊದಲು ಎರಡು ಬಾರಿ ಯೋಚಿಸದಿದ್ದರೆ ಮತ್ತು ತನ್ನ ಕೆಲಸವನ್ನು ಮುಂದುವರಿಸಿದರೆ ಮಹಿಳೆ ಅದರ ಬಗ್ಗೆ ಏಕೆ ಯೋಚಿಸಬೇಕು?. ನನಗೆ ಸಾಕಷ್ಟು ನಟಿಯರು ಮದುವೆಯಾದರು ಎಂಬ ಸಂತೋಷ ಇದೆ ಎಂದರು.
ವಿರಾಟ್ ಕೊಹ್ಲಿ ಹಾಗು ಅನುಷ್ಕಾ ಶರ್ಮಾ ಇಟಲಿಯ ಖಾಸಗಿ ರೆಸಾರ್ಟ್ ನಲ್ಲಿ ಪಂಜಾಬಿ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇಟಲಿಯ ಟಸ್ಕನಿ ನಗರದ `ಬೋಗೋ ಫಿನೊಕಿಯೆಟೊ’ ಎಂಬ ದುಬಾರಿ ರೆಸಾರ್ಟ್ ನಲ್ಲಿ ದ್ರಾಕ್ಷಿ ಹಣ್ಣಿನ ತೋಟದ ನಡುವೆ ಇರುವ ಸ್ವರ್ಗದಂಥಹ ತಾಣದಲ್ಲಿ ವಿರಾಟ್ ಹಾಗೂ ಅನುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಅನುಷ್ಕಾ ಶರ್ಮಾ ಕೊನೆಯದಾಗಿ ಬಾಲಿವುಡ್ ಬಾದ್‍ಶಾ ಶಾರೂಖ್ ಖಾನ್ ನಟಿಸಿದ `ಝೀರೋ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ನಂತರ ಅವರು ಬೇರೆ ಯಾವ ಚಿತ್ರ ಕೂಡ ಒಪ್ಪಿಕೊಂಡಿಲ್ಲ. ಸದ್ಯ ಅನುಷ್ಕಾ ಡಿಜಿಟಲ್ ವೇದಿಕೆಯಲ್ಲಿ ಯಾವುದಾದರೂ ಶೋ ಮಾಡಬೇಕು ಎಂದುಕೊಂಡಿದ್ದಾರೆ.