ಪ್ರೆಗ್ನೆನ್ಸಿ ಬಗ್ಗೆ ನಟಿ ಅನುಷ್ಕಾ ಶರ್ಮಾ ಸ್ಪಷ್ಟನೆ

Public TV
1 Min Read
anushka sharma 1

ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪ್ರೆಗ್ನೆನ್ಸಿ ಬಗ್ಗೆ ಹರಿದಾಡುತ್ತಿರುವ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ಅನುಷ್ಕಾ ಶರ್ಮಾ ಫಿಲ್ಮಂಫೇರ್ ಮ್ಯಾಗಜೀನ್‍ಗೆ ಸಂದರ್ಶನ ನೀಡಿದ್ದರು. ಈ ವೇಳೆ ಕಾರ್ಯಕ್ರಮದ ನಿರೂಪಕ ಬಿ-ಟೌನ್‍ನಲ್ಲಿ ಹರಿದಾಡುತ್ತಿದ್ದ ಪ್ರೆಗ್ನೆನ್ಸಿ ಗಾಸಿಪ್ ಬಗ್ಗೆ ಅನುಷ್ಕಾ ಶರ್ಮಾ ಅವರಿಗೆ ಕೇಳಿದ್ದಾರೆ. ಈ ವೇಳೆ ಅನುಷ್ಕಾ ಗರಂ ಆಗಿಯೇ ಉತ್ತರಿಸಿದ್ದಾರೆ.

ಜನರು ಕಲಾವಿದರಿಗೆ ನೆಮ್ಮದಿಯಿಂದ ಬದುಕಲು ಬಿಡಬೇಕು. ನಟಿಯೊಬ್ಬರು ಮದುವೆಯಾದ ತಕ್ಷಣ ಪ್ರಗ್ನೆನ್ಸಿಗೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳುತ್ತಾರೆ. ಅಥವಾ ಯಾರನ್ನಾದರೂ ಡೇಟ್ ಮಾಡುತ್ತಿದ್ದರೆ, ಮದುವೆ ಯಾವಾಗ ಮಾಡಿಕೊಳ್ಳುತ್ತೀರಾ ಎಂದು ಪ್ರಶ್ನಿಸುತ್ತಾರೆ. ಇದು ಕೆಲಸಕ್ಕೆ ಬಾರದ ಮಾತುಗಳು. ನೀವು ಕಲಾವಿದರಿಗೆ ಬದುಕಲು ಬಿಡಬೇಕು. ಬಲವಂತವಾಗಿ ಜನರ ಪ್ರಶ್ನೆಗೆ ಉತ್ತರಿಸಬೇಕು ಎಂಬ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತೀರಾ. ನನಗೆ ಇಂತಹ ವಿಷಯಗಳು ಇಷ್ಟವಾಗುವುದಿಲ್ಲ ಎಂದರು.

virat anushka 1

ಅಲ್ಲದೆ ನನಗೆ ಈ ವಿಷಯಗಳ ಬಗ್ಗೆ ಸ್ಪಷ್ಟನೆ ನೀಡುವ ಅಗತ್ಯವಿದೆಯೇ? ಯಾವ ಯಾವ ನಟಿಯರು ಮದುವೆಯಾಗಿದ್ದಾರೋ ಅವರ ಬಗ್ಗೆ ಕೂಡ ಜನರು ಏನಾದರೂ ಹೇಳಿರುತ್ತಾರೆ. ಯಾವುದಾದರೂ ನಟಿ ಲೂಸ್ ಡ್ರೆಸ್ ಧರಿಸಿದ್ದರೆ ಅವರು ಪ್ರಗ್ನೆಂಟ್ ಎಂದು ಹೇಳುತ್ತಾರೆ. ಆದರೆ ಲೂಸ್ ಡ್ರೆಸ್ ಟ್ರೆಂಡಿ ಆಗಿರುವ ಕಾರಣ ನಟಿಯರು ಅದನ್ನು ಧರಿಸುತ್ತಾರೆ ಹೊರತು ಪ್ರಗ್ನೆಂಟ್ ಎಂದು ಅಲ್ಲ. ನಾವು ಈ ವಿಷಯಗಳ ಬಗ್ಗೆ ಹೆಚ್ಚು ಗಮನ ಕೊಡಬಾರದು ಎಂದು ಹೇಳಿದ್ದಾರೆ.

virat anushka 2

ಈ ಹಿಂದೆ ಮಾಧ್ಯಮದವರು ನೀವು ಗರ್ಭಿಣಿಯೇ ಎಂದು ಅನುಷ್ಕಾರನ್ನು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ, ನಿಮಗೆ ಈ ರೀತಿಯ ಸುದ್ದಿಗಳು ಹೇಗೆ ಬರುತ್ತೆ ಎಂಬುದು ನನಗೆ ಗೊತ್ತಿಲ್ಲ. ಇದು ಕೆಲಸಕ್ಕೆ ಬಾರದ ಮಾತುಗಳು. ನೀವು ಮದುವೆಯನ್ನು ಅಡಗಿಸಬಹುದು. ಆದರೆ ಪ್ರೆಗ್ನೆನ್ಸಿಯನ್ನು ಹೇಗೆ ಅಡಗಿಸುತ್ತೀರಾ. ಇಲ್ಲಿ ಜನರು ಮದುವೆ ಮೊದಲೇ ನಿಮ್ಮನ್ನು ಮುತ್ತೈದೆ ಮಾಡುತ್ತಾರೆ. ಮಗು ಆಗುವ ಮೊದಲೇ ತಾಯಿ ಮಾಡುತ್ತಾರೆ. ನನಗೆ ಇದರಲ್ಲಿ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *