ಲಂಡನ್: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಲಂಡನ್‍ನ ಬೀದಿಯಲ್ಲಿ ತಮ್ಮ ಪತ್ನಿ, ನಟಿ ಅನುಷ್ಕಾ ಶರ್ಮಾ ಜೊತೆ ಸುತ್ತಾಡುತ್ತಿದ್ದಾರೆ. ಈ ಫೋಟೋವನ್ನು ಅವರ ಅಭಿಮಾನಿಗಳು ತಮ್ಮ ಫ್ಯಾನ್ ಪೇಜ್‍ನಲ್ಲಿ ಹಂಚಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಲಂಡನ್‍ನ ಬೀದಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅನುಷ್ಕಾ ಮೆರೂನ್ ಹಾಗೂ ಬಿಳಿ ಬಣ್ಣದ ಉಡುಪು ಧರಿಸಿದ್ದು, ವಿರಾಟ್ ಜ್ಯಾಕೇಟ್ ಧರಿಸಿದ್ದರು. ಈ ವೇಳೆ ಅನುಷ್ಕಾ ಹೊಸ ಹೈರ್ ಸ್ಟೈಲ್‍ನಲ್ಲಿ ಮಿಂಚಿದ್ದರು. ವಿರುಷ್ಕಾ ಅಭಿಮಾನಿಗಳು ಈ ಫೋಟೋ ಹಾಕಿ ಅದಕ್ಕೆ, ‘ಲಂಡನ್‍ನ ಓಲ್ಡ್ ಬಾಂಡ್ ಸ್ಟ್ರೀಟ್, ಅನುಷ್ಕಾ, ವಿರಾಟ್’ ಎಂದು ಬರೆದು ಪೋಸ್ಟ್ ಹಾಕಿದ್ದಾರೆ.
Advertisement
Advertisement
ಅನುಷ್ಕಾ ಶರ್ಮಾ ಕೊನೆಯದಾಗಿ ಬಾಲಿವುಡ್ ಬಾದ್‍ಶಾ ಶಾರೂಖ್ ಖಾನ್ ನಟಿಸಿದ `ಝೀರೋ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ನಂತರ ಅವರು ಬೇರೆ ಯಾವ ಚಿತ್ರ ಕೂಡ ಒಪ್ಪಿಕೊಂಡಿಲ್ಲ. ಸದ್ಯ ಅನುಷ್ಕಾ ಡಿಜಿಟಲ್ ವೇದಿಕೆಯಲ್ಲಿ ಯಾವುದಾದರೂ ಶೋ ಮಾಡಬೇಕು ಎಂದುಕೊಂಡಿದ್ದಾರೆ.
Advertisement
ಭಾರತ ತಂಡ ಭಾನುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಡಕ್ವರ್ಥ್ ಲೂಯಿಸ್ ನಿಯಮದನ್ವಯ 89 ರನ್‍ಗಳ ಭರ್ಜರಿ ಗೆಲುವು ಸಾಧಿಸಿತು. ಇದುವರೆಗೂ ನಡೆದ 4 ಪಂದ್ಯದಲ್ಲಿ ಭಾರತ ಮೂರರಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದು ಆಗಿತ್ತು.
Advertisement
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]