BollywoodCinemaLatestMain PostNational

ಫುಲ್ ಹ್ಯಾಪಿ ಮೂಡ್​ನಲ್ಲಿರುವ ವಿರುಷ್ಕಾ!

ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ ಫುಲ್ ಹ್ಯಾಪಿ ಮೂಡ್ ನಲ್ಲಿದ್ದು, ವರ್ಷದ ಕೊನೆಯ ದಿನವನ್ನು ಎಂಜಾಯ್ ಮಾಡುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ವಿರುಷ್ಕಾ, ಯಾವಾಗಲೂ ತಮ್ಮ ವಿಶೇಷ ಕ್ಷಣಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದ ನಂತರ, ವಿರುಷ್ಕಾ ದಕ್ಷಿಣ ಆಫ್ರಿಕಾದಲ್ಲಿ ಪ್ರಕೃತಿಯನ್ನು ಫುಲ್ ಎಂಜಾಯ್ ಮಾಡುತ್ತಿದ್ದಾರೆ.

 

View this post on Instagram

 

A post shared by AnushkaSharma1588 (@anushkasharma)

ಅನುಷ್ಕಾ ಇನ್‍ಸ್ಟಾದಲ್ಲಿ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ದಕ್ಷಿಣ ಆಫ್ರಿಕಾದ ಜಾಗಗಳನ್ನು ನೋಡುತ್ತಾ ಆನಂದಿಸುತ್ತಿದ್ದೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಕೊಹ್ಲಿ ಮತ್ತು ಅನುಷ್ಕಾ ಕ್ಯೂಟ್ ಆಗಿ ಕಾಣಿಸುತ್ತಿದ್ದು, ಕೊಹ್ಲಿ ರಿಯಾಕ್ಷನ್ ಸಖತ್ ಆಗಿದೆ. ಇದನ್ನೂ ಓದಿ: RRR ಸಿನಿಮಾ ದೇಹವಾದರೆ ಅಜಯ್ ಆತ್ಮ, ಆಲಿಯಾ ಶಕ್ತಿ: ರಾಜಮೌಳಿ

ಡಿ.11 ರಂದು ಈ ಜೋಡಿ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚಸಿಕೊಂಡಿದ್ದು, ಹಲವಾರು ಸೆಲೆಬ್ರೆಟಿಗಳು, ಸ್ನೇಹಿತರು ಹಾಗೂ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದರು.

 

View this post on Instagram

 

A post shared by AnushkaSharma1588 (@anushkasharma)

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೊದಲು ಶಾಂಪೂ ಜಾಹೀರಾತಿನ ಸೆಟ್ ನಲ್ಲಿ ಪರಿಚಯವಾಗಿದ್ದರು. ಹಲವಾರು ವರ್ಷಗಳ ಕಾಲ ಡೇಟಿಂಗ್ ಮಾಡಿ ನಂತರ, 2017ರಲ್ಲಿ ಇಟಲಿಯಲ್ಲಿ ವಿರುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಂತರ ಈ ಜೋಡಿಗೆ 2021 ಮುದ್ದಾದ ಹೆಣ್ಣು ಮಗು ಜನಿಸಿದ್ದು, ಆ ಮಗುವಿಗೆ ‘ವಮಿಕಾ’ ಎಂದು ಹೆಸರಿಟ್ಟಿದ್ದಾರೆ. ಇದನ್ನೂ ಓದಿ: ಪ್ರವಾಹ ಪರಿಹಾರ ತಕ್ಷಣ ಬಿಡುಗಡೆಗೆ ಸೂಚನೆ: ಕಾರಜೋಳ

Leave a Reply

Your email address will not be published.

Back to top button