ಬಾಲಿವುಡ್ (Bollywood) ನಟಿ ಅನುಷ್ಕಾ ಶರ್ಮಾ (Anushka Sharma) ತಮ್ಮ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದ್ದಾರೆ. ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ಹೆಚ್ಚೆಚ್ಚು ಸಿನಿಮಾಗಳಲ್ಲಿ ನಟಿಸಲು ಇಷ್ಟ ಪಡುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಮಗುವಾದ ನಂತರ ಅನುಷ್ಕಾ ಬಹುತೇಕ ಸಮಯವನ್ನು ಕುಟುಂಬಕ್ಕಾಗಿ ಮೀಸಲಿಟ್ಟಿದ್ದಾರೆ. ಜೊತೆಗೆ ಪತಿ ವಿರಾಟ್ ಕೊಹ್ಲಿ (Virat Kohli) ಜೊತೆ ಸಾಕಷ್ಟು ಪ್ರವಾಸವನ್ನು ಮಾಡಿದ್ದಾರೆ. ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಹಾಗಾಗಿ ಸಿನಿಮಾ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಮುಂದಿನ ದಿನಗಳಲ್ಲೂ ತಾವು ಹೀಗೆಯೇ ಇರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ:‘RRR’ ರೈಟರ್ ವಿಜೇಂದ್ರ ಪ್ರಸಾದ್ ಜೊತೆ ಕೇದರನಾಥ್‌ಗೆ ಕಂಗನಾ ಭೇಟಿ
ನನಗೆ ಒಪ್ಪುವಂತಹ ಮತ್ತು ಪಾತ್ರವನ್ನು ನಾನೇ ಮಾಡಬೇಕು ಅನ್ನುವಂತಹ ಚಿತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ. ವರ್ಷಕ್ಕೆ ಒಂದೇ ಸಿನಿಮಾ ಮಾಡಿದರೂ ಪರವಾಗಿಲ್ಲ. ಒಪ್ಪಿಕೊಂಡ ಪಾತ್ರಗಳು ಅಭಿಮಾನಿಗಳಿಗೆ ಹಿಡಿಸಬೇಕು. ನಟಿಸಲು ನನಗೇನೂ ಅವಸರವಿಲ್ಲ ಎಂದು ಅನುಷ್ಕಾ ಹೇಳಿಕೊಂಡಿದ್ದಾರೆ.
ಬಾಲಿವುಡ್ ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಅನುಷ್ಕಾ, ಅನೇಕ ಹಿಟ್ ಚಿತ್ರಗಳನ್ನು ಕೊಟ್ಟವರು. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿದವರು. ಇದೀಗ ಸಿನಿಮಾ ರಂಗದಿಂದ ಕ್ರಮೇಣ ದೂರವಾಗುವ ಕುರಿತು ಮಾತನಾಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.