ವಿಜಯಪುರ: ಕರ್ನಾಟಕ ಬಾಲವಿಕಾಸ ಅಕಾಡೆಮಿ 2023-24ನೇ ಬಾಲ ಗೌರವ ಪ್ರಶಸ್ತಿಗೆ ಜಿಲ್ಲೆಯ ವಿದ್ಯಾರ್ಥಿನಿ ಅನುಪ್ರಿಯಾ ರಾಘವೇಂದ್ರ ಕುಲಕರ್ಣಿ ಆಯ್ಕೆ ಆಗಿದ್ದಾರೆ.
ಆಯ್ಕೆ ಆಗಿರುವ ವಿದ್ಯಾರ್ಥಿನಿ ನಗರದ ಪ್ರತಿಷ್ಠಿತ ಬಿಎಲ್‌ಡಿಇ ಸಂಸ್ಥೆಯ ಶ್ರೀ ಬಿ.ಎಂ.ಪಾಟೀಲ ಪಬ್ಲಿಕ್ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಾರೆ. ಅಕಾಡೆಮಿಯ ಬಹುಮುಖ ಪ್ರತಿಭೆ ವಿಭಾಗದ ಅಡಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಡಿ.16ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲಿರುವ ಕಾರ್ಯಕರ್ಮದಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದನ್ನೂ ಓದಿ: ಮೊಟ್ಟೆ ಸೇವನೆಯಿಂದ ಕ್ಯಾನ್ಸರ್ ವದಂತಿ – ಎಚ್ಚೆತ್ತ ಆರೋಗ್ಯ ಇಲಾಖೆ, 200ಕ್ಕೂ ಹೆಚ್ಚು ಕಡೆಯಿಂದ ಸ್ಯಾಂಪಲ್ ಸಂಗ್ರಹ
ವಿದ್ಯಾರ್ಥಿನಿ ಅನುಪ್ರಿಯಾ ರಾಘವೇಂದ್ರ ಕುಲಕರ್ಣಿ ಶೈಕ್ಷಣಿಕ, ವಿಜ್ಞಾನ, ಸಂಶೋಧನೆ, ಕ್ರೀಡೆ ಮತ್ತು ರಸಪ್ರಶ್ನೆಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾಳೆ. ಅವಳು ಯಾವಾಗಲೂ ತರಗತಿಯ ಟಾಪರ್ ಆಗಿದ್ದು, ಚೆಸ್, ಕಲೆ, ಪ್ರಬಂಧ, ಸಾಹಿತ್ಯ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾಳೆ.
ವಿದ್ಯಾರ್ಥಿನಿ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಶಾಲೆಯ ಪ್ರಾಚಾರ್ಯ ಡಾ.ಶೈಜು ಕೆ.ಆರ್.ನಾಯರ, ಹಿರಿಯ ಸಂಯೋಜಕಿ ದೀಪಾ ಜಂಬುರೆ, ಬೋಧಕ ಹಾಗೂ ಬೋಧಕರ ಹೊರತಾದ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.ಇದನ್ನೂ ಓದಿ: ಭಾರತೀಯ ನೌಕಾಪಡೆಗೆ 3 ಆಕ್ರಮಣಕಾರಿ ಅಪಾಚೆ ಹೆಲಿಕಾಪ್ಟರ್; ಪಾಕ್ ಗಡಿಯಲ್ಲಿ ನಿಯೋಜಿಸಲು ಪ್ಲ್ಯಾನ್

