ಟಾಲಿವುಡ್‌ನ ಪ್ರತಿಭಾವಂತ ನಟಿ ಅನುಪಮ ಪರಮೇಶ್ವರನ್ ಸ್ಟಾರ್ ನಾಯಕಿಯರಲ್ಲಿ ಒಬ್ಬರಾಗಿ ಗುರುತಿಸಿಕೊಳ್ತಿದ್ದಾರೆ. ನಟಿ ಅನುಪಮಾ ಲವ್‌ಸ್ಟೋರಿ ಟಿಟೌನ್ ನಗರಿಯಲ್ಲಿ ಸಖತ್ ಸದ್ದು ಮಾಡುತ್ತಿದೆ. `ನಟಸಾರ್ವಭೌಮ’ ನಾಯಕಿಗೆ ಲವ್ ಆಗಿದೆಯಂತೆ.
ಬಹುಭಾಷಾ ನಾಯಕಿಯಾಗಿ ಟಾಪ್ ಸ್ಟಾರ್ ನಟಿಯರ ಸಾಲಿನಲ್ಲಿರುವ ಅನುಪಮ ಪರಮೇಶ್ವರನ್ ಕನ್ನಡದ `ನಟಸಾರ್ವಭೌಮ’ ಚಿತ್ರದಲ್ಲಿ ಪುನೀತ್‌ಗೆ ನಾಯಕಿಯಾಗಿ ಗುರುತಿಸಿಕೊಂಡಿದ್ರು. ಶೃತಿ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದಿದ್ರು. ಈಗ ನಟಿಯ ಲವ್ ಮತ್ತು ಮದುವೆ ವಿಚಾರದ ಸುತ್ತ ಸಖತ್ ಸದ್ದು ಮಾಡುತ್ತಿದೆ. ಅನುಪಮಾಗೆ ಒನ್ ಸೈಡ್ ಲವ್ ಆಗಿದೆಯಂತೆ ಹಾಗಂತ ಸ್ವತಃ ಅನುಪಮಾ ಅವರೇ ಹೇಳಿಕೊಂಡಿದ್ದಾರೆ.
View this post on Instagram
ಇದೀಗ ಅನುಪಮಾ `ಕಾರ್ತಿಕೇಯ 2′ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ತಮ್ಮ ಲವ್ ಕಹಾನಿ ಬಗ್ಗೆ ಕೂಡ ಅನುಪಮ ಮಾತನಾಡಿದ್ದಾರೆ. ಈ ಸಮಾರಂಭದಲ್ಲಿ ಅನುಪಮಾ ಪರಮೇಶ್ವರನ್, ನಾನು ಇನ್ನೂ ಹೆಚ್ಚು ದಿನಗಳ ಕಾಲ ಒಂಟಿಯಾಗಿರಲ್ಲ. ಬಹುಶಃ ಇದು ಒನ್ ಸೈಡ್ ಲವ್ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಯಾಕೆಂದರೆ ಅನುಪಮಾ ಪರಮೇಶ್ವರನ್ ಸದ್ಯ ಪ್ರೀತಿಯಲ್ಲಿ ಬಿದ್ದಿದ್ದು ಆ ಹುಡುಗ ಯಾರು ಎನ್ನುವುದನ್ನು ರಿವೀಲ್ ಮಾಡಿಲ್ಲ. ಜೊತೆಗೆ ಇದು ಒಂದು ಸೈಡ್ ಲವ್ ಎಂದು ಹೇಳುವ ಮೂಲಕ ತಾನಿನ್ನೂ ಪ್ರೀತಿಯನ್ನು ವ್ಯಕ್ತಪಡಿಸಿಲ್ಲ ಎಂದಿದ್ದಾರೆ.
ಕೆಲ ಸಮಯದ ಹಿಂದೆ ಅನುಪಮಾ ಹೆಸರು ಜಸ್ರೀತ್ ಬುಮ್ರಾ ಜತೆ ಪ್ರೀತಿಯಲ್ಲಿದ್ದಾರೆ ಎಂದು ಸುದ್ದಿಯಾಗಿತ್ತು. ನಾವು ಇಬ್ಬರು ಒಳ್ಳೆಯ ಫ್ರೇಂಡ್ಸ್ ಅಷ್ಟೇ ಎಂದು ಗಾಸಿಪ್‌ಗೆ ತೆರೆ ಎಳೆದಿದ್ದರು. ಸದ್ಯ ಅನುಪಮಾ ಇಷ್ಟದ ಹುಡುಗ ಯಾರು ಅಂತಾ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ.