ಲಿಪ್‌ಲಾಕ್‌ ಮಾಡಿದ್ಮೇಲೆ ಬದಲಾಯ್ತು ಲಕ್-‌ ಅನುಪಮಾಗೆ ಬಂಪರ್‌ ಆಫರ್ಸ್

Public TV
1 Min Read
Anupama Parameswaran

ನ್ನಡದ ‘ನಟಸಾರ್ವಭೌಮ’ ನಾಯಕಿ ಅನುಪಮಾ ಪರಮೇಶ್ವರನ್ (Anupama Parameshwaran) ಇದೀಗ ಭಾರೀ ಬೇಡಿಕೆಯಲ್ಲಿದ್ದಾರೆ. ‘ಟಿಲ್ಲು ಸ್ಕ್ವೇರ್’ (Tillu Square) ರಿಲೀಸ್ ಆದ್ಮೇಲೆ ಪಡ್ಡೆಹುಡುಗರ ಕ್ರಶ್ ಕ್ವೀನ್ ಆಗಿದ್ದಾರೆ. ಮಡಿವಂತಿಗೆ ಬಿಟ್ಟು ಕೊಂಚ ಬೋಲ್ಡ್ ಆಗಿರುವ ಅನುಪಮಾಗೆ ಟಾಲಿವುಡ್‌ನಲ್ಲಿ ಭಾರೀ ಅವಕಾಶಗಳು ಅರಸಿ ಬರುತ್ತಿವೆ.

anupama parameshwaran

ಲಿಪ್‌ಲಾಕ್ ಮಾಡಲ್ಲ, ಹಸಿಬಿಸಿ ದೃಶ್ಯಗಳಲ್ಲಿ ನಟಿಸಲ್ಲ ಎಂದು ಶಪಥ ಮಾಡಿದ್ದ ನಟಿ ಈಗ ಬದಲಾಗಿದ್ದಾರೆ. ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂಬಂತೆ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ನಟಿ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ.

ಶ್ರೀಲೀಲಾ (Sreeleela) ನಟಿಸಲ್ಲ ಎಂದು ಕೈಬಿಟ್ಟಿದ್ದ ಈ ಸಿನಿಮಾ ಅನುಪಮಾ ಪಾಲಿಗೆ ವರವಾಗಿದೆ. ‘ಟಿಲ್ಲು ಸ್ಕ್ವೇರ್’ (Tillu Square) ಸಿನಿಮಾದಲ್ಲಿ ಹೀರೋ ಸಿದ್ದು ಜೊತೆ ಮೈ ಚಳಿ ಬಿಟ್ಟು ನಟಿಸಿದ್ದೇ ನಟಿಸಿದ್ದು, ಅನುಪಮಾ ಪಡ್ಡೆಹುಡುಗರ ಇಷ್ಟದೇವತೆಯಾಗಿದ್ದಾರೆ. ಇದನ್ನೂ ಓದಿ:‘ದೇವರ’ ಸಿನಿಮಾಗಾಗಿ ಜ್ಯೂ.ಎನ್‌ಟಿಆರ್‌ಗೆ ಸಾಥ್ ಕೊಟ್ಟ ಕರಣ್ ಜೋಹರ್

Tillu Square 2

ಮಾರ್ಚ್ 29ರಂದು ರಿಲೀಸ್ ಆಗಿದ್ದ ‘ಟಿಲ್ಲು ಸ್ಕ್ವೇರ್’ ಸಿನಿಮಾ 90 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಹಿಟ್ ಸೇರಿದೆ. ಇದರಿಂದ ಮತ್ತೆ ಟಾಪ್ ನಟಿಯರ ರೇಸ್‌ನಲ್ಲಿದ್ದಾರೆ ಅನುಪಮಾ. ಈ ಚಿತ್ರದ ನಂತರ ಅನುಪಮಾಗೆ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳಿಂದ ನಾಯಕಿಯಾಗಿ ನಟಿಸಲು ಆಫರ್ ಸಿಗುತ್ತಿದೆಯಂತೆ. ಸದ್ಯದಲ್ಲೇ ಹೊಸ ಸಿನಿಮಾಗಳ ಅಪ್‌ಡೇಟ್ ನೀಡಲಿದ್ದಾರೆ ಪ್ರೇಮಂ ನಟಿ.

ಅಂದಹಾಗೆ, 2019ರಲ್ಲಿ ನಟಸಾರ್ವಭೌಮ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್‌ಗೆ ಅನುಪಮಾ ಪರಮೇಶ್ವರನ್ ನಾಯಕಿಯಾಗಿ ನಟಿಸಿದ್ದರು. ಮೊದಲ ಚಿತ್ರದಲ್ಲೇ ಕನ್ನಡಿಗರ ಮನಗೆದ್ದಿದ್ದರು. ಮತ್ತೆ ಅದ್ಯಾವಾಗ ಅನುಪಮಾ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಮಾಡುತ್ತಾರೆ ಎಂದು ಅಭಿಮಾನಿಗಳು ಎದುರು ನೋಡ್ತಿದ್ದಾರೆ.

Share This Article