ಭಾರತದ ಇತಿಹಾಸದಲ್ಲಿ ಜಯಪ್ರಕಾಶ್ ನಾರಾಯಣ್ ಅವರಿಗೆ ಅವರದ್ದೇ ಆದ ಸ್ಥಾನವಿದೆ. ಜೆಪಿ ಚಳವಳಿಯ ಮೂಲಕ ಅನೇಕ ಹೋರಾಟಗಾರರಿಗೆ ಸ್ಫೂರ್ತಿ ತುಂಬಿದ್ದ ಇವರು, ಗಾಂಧೀಜಿ ನಂತರ ಜನರಿಗೆ ಅತೀ ಹೆಚ್ಚು ಪ್ರಭಾವ ಬೀರಿದವರಾಗಿದ್ದರು. ಅದರಲ್ಲೂ ಇಂದಿರಾ ಗಾಂಧಿ ಅವರು ಹೇರಿದ್ದ ಎಮರ್ಜೆನ್ಸಿ ವೇಳೆಯಲ್ಲಿ ಜೆಪಿ ಹೋರಾಟ ಅತ್ಯಂತ ದಿಟ್ಟ ಉತ್ತರದಂತಿತ್ತು. ಹಾಗಾಗಿ ಎಮರ್ಜೆನ್ಸಿ ಸಿನಿಮಾದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಪಾತ್ರಕ್ಕೂ ಹೆಚ್ಚು ಮಹತ್ವ ನೀಡಲಾಗಿದೆಯಂತೆ. ಈ ಪಾತ್ರವನ್ನು ಬಾಲಿವುಡ್ ನಟ ಅನುಪಮ್ ಖೇರ್ ನಟಿಸುತ್ತಿದ್ದಾರೆ.
Advertisement
ನಾನೂ ಕೂಡ ಜಯಪ್ರಕಾಶ್ ನಾರಾಯಣ್ ಅವರ ಜೀವನದಿಂದ ಪ್ರಭಾವಿತನಾದವನು. ಅವರ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇನೆ. ಸಿನಿಮಾದಲ್ಲಿ ಪಾತ್ರಕ್ಕೂ ಮಹತ್ವ ನೀಡಲಾಗಿದೆ. ಇವೆಲ್ಲ ಕಾರಣದಿಂದಾಗಿ ಈ ಪಾತ್ರವನ್ನು ನಾನು ಒಪ್ಪಿಕೊಂಡೆ ಎಂದು ಹೇಳಿದ್ದಾರೆ ಅನುಪಮ್ ಖೇರ್. ಮೊನ್ನೆಯಷ್ಟೇ ಇವರ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಥೇಟ್ ಜೆಪಿ ಅವತಾರವನ್ನೇ ಎತ್ತಿದ್ದಾರೆ ಅನುಪಮ್ ಖರ್. ಇದನ್ನೂ ಓದಿ:ಚಿಕ್ಕಣ್ಣನ ಮದುವೆ ಮುಂದಿನ ವರ್ಷ ಫಿಕ್ಸ್: ಕುಟುಂಬದ ಒತ್ತಡಕ್ಕೆ ಕೊನೆಗೂ ಮಣಿದ ನಟ
Advertisement
Advertisement
ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ಕಂಗನಾ ರಣಾವತ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಅವರೇ ಇಂದಿರಾ ಗಾಂಧಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈಗಾಗಲೇ ಇವರ ಲುಕ್ ಕೂಡ ರಿವೀಲ್ ಆಗಿದೆ. ಚಿತ್ರದ ಟೀಸರ್ ಕೂಡ ಬಿಡುಗಡೆ ಆಗಿದ್ದು, ಈಗಾಗಲೇ ಇಂದಿರಾ ಗಾಂಧಿ ಅಭಿಮಾನಿಗಳು ಟೀಸರ್ ವಿರೋಧಿಸಿ ಹೋರಾಟ ಕೂಡ ಮಾಡಿದ್ದಾರೆ. ಈ ಸಿನಿಮಾದಲ್ಲಿ ಇಂದಿರಾ ಗಾಂಧಿ ಅವರನ್ನು ಅವಹೇಳನ ಮಾಡಲಾಗುತ್ತಿದ್ದು, ಕೂಡಲೇ ಸಿನಿಮಾ ನಿಲ್ಲಿಸುವಂತೆ ಒತ್ತಡ ಕೂಡ ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.