ಶ್ರೀನಗರ: ಪಾಕಿಸ್ತಾನ (Pakistan) ಬೆಂಬಲಿತ ಭಯೋತ್ಪಾದಕ ಕೃತ್ಯಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಜಮ್ಮು ಮತ್ತು ಕಾಶ್ಮೀರದ (Jammu and Kashmir) ಏಳು ಜಿಲ್ಲೆಗಳ 15 ಸ್ಥಳಗಳಲ್ಲಿ ಮಂಗಳವಾರ ದಾಳಿ ನಡೆಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ವಿವಿಧ ಭಯೋತ್ಪಾದಕ ಸಂಘಟನೆಗಳು ಭೂಗತವಾಗಿ ಕಾರ್ಯನಿರ್ವಹಿಸುತ್ತಿವೆ. ಸ್ಥಳೀಯ ಯುವಕರು ಅವುಗಳೊಂದಿಗೆ ಸಕ್ರಿಯವಾಗಿದ್ದಾರೆ. ದೇಶದ ವಿರುದ್ಧ ಸಂಚು ರೂಪಿಸುವ ಕಾರ್ಯದಲ್ಲಿ ಭಯೋತ್ಪಾದಕ ಸಂಘಟನೆಗಳು ತೊಡಗಿಕೊಂಡಿವೆ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ಎನ್‍ಐಎ ದಾಳಿ ಮಾಡಿದೆ. ಇದನ್ನೂ ಓದಿ: ಪಿಎಫ್‍ಐ ವಿರುದ್ಧದ ಪ್ರಕರಣ – ತಮಿಳುನಾಡಿನ ಹಲವೆಡೆ ಎನ್‍ಐಎ ದಾಳಿ
Advertisement
Advertisement
ಅಲ್ಲದೆ ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳು ಹಾಗೂ ಮಾದಕ ವಸ್ತುಗಳು ಡ್ರೋಣ್ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ತಲುಪುತ್ತಿವೆ. ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲ ನೀಡುತ್ತಿರುವ ಕೆಲವರು ಅವುಗಳನ್ನು ಸಂಗ್ರಹಿಸಿಡುತ್ತಿದ್ದಾರೆ ಎಂದು ಎನ್‍ಐಎ ಹೇಳಿಕೊಂಡಿದೆ.
Advertisement
Advertisement
ಭಯೋತ್ಪಾದಕರ ಸಂಚಿನ ಕುರಿತು ಎನ್‍ಐಎ ಕಳೆದ ವರ್ಷ ಜೂನ್ 21 ರಂದು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮೀಸಲು ಪಡೆ (Central Reserve Police Force) ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ಎನ್‍ಐಎ ಶೋಧಕಾರ್ಯ ನಡೆಸುತ್ತಿದೆ. ಕಳೆದ ವರ್ಷ ಜೂನ್ 24 ರಂದು ಜಮ್ಮು ಮತ್ತು ಕಾಶ್ಮೀರದ 14 ಸ್ಥಳಗಳಲ್ಲಿ ಎನ್‍ಐಎ ದಾಳಿ ನಡೆಸಿತ್ತು. ಈ ವೇಳೆ ಸ್ಪೋಟಕಗಳು ಹಾಗೂ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿತ್ತು. ಇದನ್ನೂ ಓದಿ: ಸೇತುವೆಯಿಂದ ಬಸ್ ಬಿದ್ದು 22 ಮಂದಿ ಸಾವು