ಭೋಪಾಲ್: ಸೇತುವೆಯಿಂದ (Bridge) ಬಸ್ ಬಿದ್ದು 22 ಮಂದಿ ಸಾವನ್ನಪ್ಪಿದ ಹಾಗೂ 20ಕ್ಕೂ ಹೆಚ್ಚು ಪ್ರಯಾಣಿಕರು (Passengers) ಗಾಯಗೊಂಡ ಘಟನೆ ಮಧ್ಯಪ್ರದೇಶದ (Madhya Pradesh) ಖಾರ್ಗೋನ್‍ನಲ್ಲಿ ನಡೆದಿದೆ.
ಇಂದೋರ್‍ಗೆ ತೆರಳುತ್ತಿದ್ದ ಬಸ್‍ವೊಂದು ಸೇತುವೆಯಿಂದ ಸ್ಕಿಡ್ ಆಗಿ ಕೆಳಗೆ ಬಿದ್ದಿದೆ. ಅಪಘಾತದ ಸಮಯದಲ್ಲಿ ಬಸ್‍ನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.
Advertisement
Advertisement
ಘಟನೆಗೆ ಸಂಬಂಧಿಸಿ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಜಿಲ್ಲಾಧಿಕಾರಿ ಶಿವರಾಜ್ ಸಿಂಗ್ ವರ್ಮಾ ಅಪಘಾತ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪುಟ್ಟ ಕಂದಮ್ಮನೊಂದಿಗೆ ಚುನಾವಣೆ ಕರ್ತವ್ಯಕ್ಕೆ ಹಾಜರಾದ ತಾಯಿ
Advertisement
Advertisement
ಘಟನೆ ವೇಳೆ ಮೃತಪಟ್ಟವರ ಕುಟುಂಬಸ್ಥರಿಗೆ ಮಧ್ಯಪ್ರದೇಶ ಸರ್ಕಾರವು 2 ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ. ತೀವ್ರವಾಗಿ ಗಾಯಗೊಂಡವರಿಗೆ ವೈದ್ಯಕೀಯ ನೆರವು ನೀಡಲು ರಾಜ್ಯ ಸರ್ಕಾರ 50,000ರೂ. ಹಾಗೂ ಗಾಯಗೊಂಡವರಿಗೆ 25,000 ರೂ. ನೀಡಿದೆ. ಇದನ್ನೂ ಓದಿ: ಪಿಎಫ್‍ಐ ವಿರುದ್ಧದ ಪ್ರಕರಣ – ತಮಿಳುನಾಡಿನ ಹಲವೆಡೆ ಎನ್‍ಐಎ ದಾಳಿ