ಭೋಪಾಲ್: ಮಧ್ಯಪ್ರದೇಶದ (MadhyaPradesh) ಇಂಧೋರ್‌ನ ಸರ್ಕಾರಿ ಕಾನೂನು ಕಾಲೇಜಿನ (GNLC) ಗ್ರಂಥಾಲಯದಲ್ಲಿ ಸಿಕ್ಕ ಪುಸ್ತಕವೊಂದು ಈಗ ವಿವಾದಕ್ಕೆ ಕಾರಣವಾಗಿದೆ.
ಲೇಖಕ ಫರ್ಹತ್ ಖಾನ್ ಬರೆದಿರುವ `ಕಲೆಕ್ಟಿವ್ ವೈಲೆನ್ಸ್ ಅಂಡ್ ಕ್ರಿಮಿನಲ್ ಜಸ್ಟೀಸ್ ಸಿಸ್ಟಮ್’ ಸಾಮೂಹಿಕ ಹಿಂಸೆ ಮತ್ತು ಕ್ರಿಮಿನಲ್ ನ್ಯಾಯ ವ್ಯವಸ್ಥೆ) ಪುಸ್ತಕದಲ್ಲಿ ಹಿಂದೂ ಸಮಾಜವಿರೋಧಿ ಅಂಶಗಳಿವೆ ಎಂದು ಬಿಜೆಪಿ ವಿದ್ಯಾರ್ಥಿ ಘಟಕವಾದ ಎಬಿವಿಪಿ ಆರೋಪಿಸಿದೆ.
ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಹೆಚ್ಚಿನ ಶಿಕ್ಷಕರು ದೇಶ, ಸೈನ್ಯ (Army), ಸರ್ಕಾರ, ಹಿಂದೂ ಸಮುದಾಯ (Hindu Community) ಹಾಗೂ ದೇಶದ ಇತಿಹಾಸ ವಿರುದ್ಧ ವಿದ್ಯಾರ್ಥಿಗಳಿಗೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯದ ಗೃಹ ಸಚಿವ ನರೋತ್ತಮ್ ಮಿಶ್ರಾ (Narottam Mishra), 24 ಗಂಟೆಯಲ್ಲಿ ಕೇಸ್ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಆದೇಶಿಸಿದ್ದರು. ಅದರಂತೆ ಎಬಿವಿಪಿ (AbVP) ಕಚೇರಿ ನೀಡಿದ ದೂರಿನ ಮೇರೆಗೆ ಇಂಧೋರ್ ಪೊಲೀಸರು (Indhore Police) ಕೇಸ್ ದಾಖಲಿಸಿದ್ದಾರೆ. ಇದನ್ನೂ ಓದಿ: ಕ್ಯಾಂಪಸ್‌ನಲ್ಲಿ ಲವ್‌ಜಿಹಾದ್‌ಗೆ ಉತ್ತೇಜನ, ಸೇನೆಗೆ ಅಪಮಾನ – 6 ಶಿಕ್ಷಕರಿಗೆ ಪಾಠ ಮಾಡದಂತೆ ಸೂಚನೆ
ಪುಸ್ತಕವು ಸುಳ್ಳು ಅಂಶಗಳಿಂದ ಕೂಡಿದೆ, ಆಧಾರ ರಹಿತವಾಗಿದೆ. ರಾಷ್ಟ್ರ ವಿರೋಧಿ ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತರುವಂತಹದ್ದಾಗಿದ್ದು, ಕೋಮುದ್ವೇಷವನ್ನು ಪ್ರಚೋದಿಸಲು ಅರ್ಹವಾಗಿದೆ. ಕಾಲೇಜು ಗ್ರಂಥಾಲಯದಲ್ಲಿ ಈ ಪುಸ್ತಕವನ್ನು ಹೊಂದುವ ಮೂಲಕ ರಾಷ್ಟ್ರ ವಿರೋಧಿ ಕೃತ್ಯಗಳನ್ನು ಉತ್ತೇಜಿಸಲು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಹಾಗೂ ವಿದ್ಯಾರ್ಥಿಗಳಲ್ಲಿ ಕೋಮುದ್ವೇಷ ಬೆಳೆಸುವ ಕೆಲಸ ಮಾಡಲಾಗುತ್ತಿದೆ. ಈ ಪುಸ್ತಕ ಭಾರತೀಯ ಸಂವಿಧಾನದ ಆರ್ಟಿಕಲ್ 370 ಅನ್ನು ರದ್ದುಗೊಳಿಸುವ ಬಗ್ಗೆ ಕಳವಳ ವ್ಯಕ್ತಪಡಿಸುತ್ತದೆ ಎಂದು ಎಬಿವಿಪಿ ದೂರಿನಲ್ಲಿ ಉಲ್ಲೇಖಿಸಿತ್ತು.
ದೂರನ್ನು ಆಧರಿಸಿ ತನಿಖೆ ಕೈಗೊಂಡಿದ್ದ ಪೊಲೀಸರು, ಪುಸ್ತಕದ ಪ್ರಕಾಶಕರು, ಕಾಲೇಜು ಪ್ರಾಂಶುಪಾಲರು, ಪುಸ್ತಕದ ಲೇಖಕರು, ಓರ್ವ ಶಿಕ್ಷಕ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಕೇಸ್ ದಾಖಲಿಸಿದ್ದಾರೆ ಎಂದು ಇಂಧೋರ್ ಡಿಸಿಪಿ ರಾಜೇಶ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಏಕಾಂಗಿ ಹೋರಾಟ ವ್ಯರ್ಥ, ಶಕೀಬ್ ಆಲ್‌ರೌಂಡರ್ ಆಟ – ಬಾಂಗ್ಲಾದೇಶಕ್ಕೆ 1 ವಿಕೆಟ್ ರೋಚಕ ಜಯ
ಎರಡು ದಿನಗಳ ಹಿಂದೆಯಷ್ಟೇ ಕಾನೂನು ಕಾಲೇಜಿನಲ್ಲಿ ಕೆಲವು ಶಿಕ್ಷಕರು ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಧಾರ್ಮಿಕ ಮೂಲಭೂತವಾದ, ಸರ್ಕಾರ ಹಾಗೂ ಭಾರತೀಯ ಸೇನೆಯ ಬಗ್ಗೆ ನಕಾರಾತ್ಮಕ ಚಿಂತನೆಗಳನ್ನ ಉತ್ತೇಜಿಸುತ್ತಿದ್ದಾರೆ. ಅಲ್ಲದೇ ಶುಕ್ರವಾರ ದಿನಗಳಂದು ಮುಸ್ಲಿಂ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಮಾಜ್ ಮಾಡುತ್ತಾರೆ. ಆ ಸಂರ್ಭಗಳಲ್ಲಿ ತರಗತಿಗಳು ನಡೆಯುವುದಿಲ್ಲ. ಅಲ್ಲದೇ ಕ್ಯಾಂಪಸ್‌ಗಳಲ್ಲಿ ಲವ್ ಜಿಹಾದ್ (Love Jihad) ಹಾಗೂ ಮಾಂಸಾಹಾರ ಸೇವನೆ ವಿಚಾರವನ್ನು ಪ್ರಚಾರ ಮಾಡಲಾಗುತ್ತಿದೆ ಎಂದು ಎಬಿವಿಪಿ ಆರೋಪಿಸಿತ್ತು.