ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ರಾಜ್ಯಾ ಸುಮಾರು 78 ಕಡೆ ಎಸಿಬಿ ಮಿಂಚಿನ ದಾಳಿ ನಡೆಸಿದೆ. ರಾಯಚೂರಿನಲ್ಲಿ ಅಶೋಕ್ ರೆಡ್ಡಿ ಮನೆಗೆ ರೇಡ್ ಮಾಡಲು ಬಂದ ಎಸಿಬಿ ಅಧಿಕಾರಿಗಳನ್ನು ನೋಡಿ ಮನೆ ಕೆಲಸದಾಕೆ ಬೀಗರೆಂದು ಭಾವಿಸಿ ಸ್ವಾಗತಿಸಿದ್ದಾರೆ.
Advertisement
ಎಸಿಬಿ 18 ಮಂದಿ ಸರ್ಕಾರಿ ಭ್ರಷ್ಟ ಕುಬೇರರ ಜನ್ಮ ಜಾಲಾಡಿದೆ. ಬೆಂಗಳೂರು, ಮೈಸೂರು, ಮಂಗಳೂರು, ಹಾಸನ, ಚಾಮರಾಜನಗರ, ತುಮಕೂರು, ಚಿಕ್ಕಮಗಳೂರು ಹೀಗೆ ಹಲವೆಡೆ ಏಕಕಾಲಕ್ಕೆ ರೇಡ್ ಆಗಿದೆ. ಈ ವೇಳೆ ಅಪಾರ ಪ್ರಮಾಣದ ನಗದು, ಚಿನ್ನಾಭರಣಗಳು, ದಾಖಲೆ ಪತ್ರಗಳು ಸೇರಿದಂತೆ ನೋಟು ಎಣಿಸುವ ಮಿಷನ್ ಕೂಡ ಸಿಕ್ಕಿದೆ. ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ಕಂಡಕಂಡಲೆಲ್ಲ ಕಾಂಚಾಣ ಹರಿದಾಡುತ್ತಿದೆ. ಡಸ್ಟ್‍ಬಿನ್, ಖಾಲಿ ಸೈಟ್, ಟ್ಯಾಂಕ್, ಡ್ರಮ್‍ಗಳಲ್ಲೆಲ್ಲ ಹಣ ಮುಚ್ಚಿಟ್ಟಿದ್ದಾರೆ. ಮನೆಗಳು, ಫ್ಲ್ಯಾಟ್‍ಗಳು, ವಾಹನಗಳು, ಜಮೀನುಗಳಂತೂ ಲೆಕ್ಕಕ್ಕೇ ಇಲ್ಲದಂತಾಗಿದೆ. ರಾಯಚೂರಿನ ಅಶೋಕ್ ರೆಡ್ಡಿ ಮನೆಗೆ ರೇಡ್ ಮಾಡಲು ಬಂದ ಎಸಿಬಿ ಅಧಿಕಾರಿಗಳನ್ನು ನೋಡಿ ಮನೆ ಕೆಲಸದಾಕೆ ಬೀಗರೆಂದು ಭಾವಿಸಿ ಸ್ವಾಗತಿಸಿದ್ರು. ನಾವು ಎಸಿಬಿಯವರು ಅಂದ್ರೂ ಆಕೆಗೆ ಅರ್ಥ ಆಗಿರಲಿಲ್ಲ. ಇದನ್ನೂ ಓದಿ: ಗುರುವಾರ ಕರ್ನಾಟಕ ಬಂದ್‌ಗೆ ಕರೆ ಕೊಟ್ಟ ಮುಸ್ಲಿಂ ಮುಖಂಡರು
Advertisement
Advertisement
ಮಂಗಳೂರಿನ ಮೆಸ್ಕಾಂ ಅಧಿಕಾರಿ ದಯಾಳ್ ಸುಂದರ್, ಬೆಂಗಳೂರಿನ ಸಾರಿಗೆ ಇಲಾಖೆಯ ಜ್ಞಾನೇಂದ್ರ ಕುಮಾರ್, ಕೈಗಾರಿಕೆ & ವಾಣಿಜ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕ ಬಿ.ಕೆ.ಶಿವಕುಮಾರ್, ಬಿಡಿಎ ಅಧಿಕಾರಿ ವಿ.ರಾಕೇಶ್ ಕುಮಾರ್, ಬದಾಮಿ ಅರಣ್ಯಾಧಿಕಾರಿ ಪಿಎಸ್ ಖೇಡಗಿ, ದಾವಣಗೆರೆಯ ಪರಿಸರ ಅಧಿಕಾರಿ ಮಹೇಶಪ್ಪ ಸೇರಿ ಹಲವರ ಬಳಿ ಅಪಾರ ಸಂಪತ್ತು ಪತ್ತೆಯಾಗಿದೆ. ನಾಳೆಯೂ ಎಸಿಬಿ ಶೋಧ ಮುಂದುವರಿಯಲಿದೆ ಎಂದು ವರದಿಯಾಗಿದೆ.
Advertisement
ಡಸ್ಟ್‌ಬಿನ್, ಖಾಲಿ ಸೈಟ್‍ನಲ್ಲಿ ಕಾಂಚಾಣ
ರಾಯಚೂರಿನ ಕೆಬಿಜೆಎನ್‍ಎಲ್‍ನ ಎಇಇ ಅಶೋಕ್ ರೆಡ್ಡಿ ಮನೆಯ ಡಸ್ಟ್‍ಬಿನ್‍ನಲ್ಲಿ ಖಜಾನೆಯೇ ಪತ್ತೆಯಾಗಿದೆ. ಮನೆ ಹಿಂಭಾಗದಲ್ಲಿದ್ದ ಡಸ್ಟ್‍ಬಿನ್‍ನಲ್ಲಿ 7 ಲಕ್ಷ ನಗದು, 400 ಗ್ರಾಂ ಚಿನ್ನ, 600 ಗ್ರಾಂ ಬೆಳ್ಳಿ ಆಭರಣ ಪತ್ತೆಯಾಗಿದೆ. ಮನೆಯ ಡ್ರಮ್‍ನಲ್ಲಷ್ಟೇ ಅಲ್ಲ ಅಶೋಕ್ ರೆಡ್ಡಿ ಮನೆ ಪಕ್ಕದ ಖಾಲಿ ಸೈಟ್‍ನಲ್ಲೂ ಹಣ ಬಿಸಾಡಿದ್ದ 100 ರೂ, 500 ರೂ. ನೋಟುಗಳು ಪತ್ತೆಯಾಗಿದೆ. ಇದನ್ನೂ ಓದಿ: ಆಟ ಇನ್ನೂ ಮುಗಿದಿಲ್ಲ: ರಾಷ್ಟ್ರಪತಿ ಚುನಾವಣೆ ಬಗ್ಗೆ ಬಿಜೆಪಿಗೆ ಮಮತಾ ಬ್ಯಾನರ್ಜಿ ಟಾಂಗ್
ಸಿಂಟೆಕ್ಸ್‌ನಲ್ಲೂ ಹಣದ ಹೊಳೆ
ಅಸಿಸ್ಟೆಂಟ್ ಎಂಜಿನಿಯರ್ ಗಿರೀಶ್ ಮನೆ ಮೇಲಿರುವ ನೀರಿನ ಟ್ಯಾಂಕ್ ಒಳಗೋ ಅಧಿಕಾರಿಗಳು ಚೆಕ್ ಮಾಡಿದ್ರು. ಈ ವೇಳೆ ಹಣ ಪತ್ತೆಯಾಗಿದೆ. ಮನೆಯಲ್ಲಿ ಚಿಲ್ಲರೆಗಳ ರಾಶಿ, ನೋಟಿನ ರಾಶಿ, ಸೀರೆಗಳ ರಾಶಿ ಪತ್ತೆ ಆಯ್ತು. ಮನೆ ಮುಂದಿನ ಕಾರ್ ನನ್ನದಲ್ಲಾ ಎಂದು ಗಿರೀಶ್ ಡ್ರಾಮಾ ಮಾಡಿದರು. ಇದನ್ನೂ ಓದಿ: ಬಾಲಕಿ ಮೇಲೆ ಗ್ಯಾಂಗ್ ರೇಪ್- 24 ಗಂಟೆಯಲ್ಲಿ ಇಬ್ಬರು ಆರೋಪಿಗಳು ಎನ್‌ಕೌಂಟರ್‌ಗೆ ಬಲಿ
ಐಷಾರಾಮಿ ಬಾತ್ ರೂಂ
ವಿಜಯಪುರದಲ್ಲಿ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಮ್ಯಾನೇಜರ್ ಗೋಪಿನಾಥ್ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಸ್ಟೀಮ್ ಬಾತ್‍ರೂಂ ನಿರ್ಮಾಣ ಆಗಿರುವು ಕಂಡುಬಂತು. ಅಲ್ಲದೆ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ.