ಶೀಘ್ರದಲ್ಲೇ ಮಂಗ್ಳೂರು-ಬೆಂಗ್ಳೂರು ನಡುವೆ ಮತ್ತೊಂದು ರೈಲು ಓಡಾಟ

Public TV
1 Min Read
hsn new train

ಹಾಸನ: ಬಹುದಿನಗಳ ಬೇಡಿಕೆಯಾದ ಮಂಗಳೂರು-ಬೆಂಗಳೂರು ನಡುವೆ ಮತ್ತೊಂದು ರೈಲು ಓಡಾಟ ಶೀಘ್ರವಾಗಿ ಆರಂಭವಾಗಲಿದೆ. ಇದು ಬೆಂಗಳೂರು-ಮಂಗಳೂರು ನಡುವೆ ಹೊಸ ಎಕ್ಸ್ ಪ್ರೆಸ್ ರೈಲಾಗಿದ್ದು, ಕೇಂದ್ರ ಇದಕ್ಕೆ ಹಸಿರು ನಿಶಾನೆ ನೀಡಿದೆ.

ನೈಋತ್ಯ ರೈಲ್ವೆ ವಲಯ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಇಲಾಖೆ ಒಪ್ಪಿಗೆ ನೀಡಿದ್ದು, ಇದೀಗ ಓಡಾಟ ಆರಂಭಿಸಲು ಕ್ಷಣಗಣನೆ ಆರಂಭವಾಗಿದೆ. ಬೆಂಗಳೂರು-ಶ್ರವಣಬೆಳಗೊಳ-ಹಾಸನ-ಮಂಗಳೂರು ಸೆಂಟ್ರಲ್ ನಡುವೆ ಈ ಹೊಸ ಎಕ್ಸ್ ಪ್ರೆಸ್ ರೈಲು ಸಂಚಾರ ನಡೆಸಲಿದೆ. ವಾರದಲ್ಲಿ ಮೂರು ದಿನಗಳ ರೈಲು ಸಂಚರಿಸಲಿದ್ದು. ಈ ರೈಲು 22 ಬೋಗಿಗಳನ್ನು ಹೊಂದಿರಲಿದೆ. ಇದನ್ನು ಓದಿ: 21 ವರ್ಷಗಳ ಕನಸು ಇಂದು ನನಸು – ಹಾಸನ-ಬೆಂಗಳೂರು ರೈಲು ಮಾರ್ಗ ಉದ್ಘಾಟನೆ

train

ವೇಳಾಪಟ್ಟಿ ಇಂತಿದೆ:
ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಈ ರೈಲು ಹೊರಡುತ್ತದೆ. ನೂತನ ರೈಲಿನ ವೇಳಾಪಟ್ಟಿ ಪ್ರಕಾರ ಮಂಗಳವಾರ, ಶುಕ್ರವಾರ, ಭಾನುವಾರ ಮಧ್ಯಾಹ್ನ 4.30ಕ್ಕೆ ಬೆಂಗಳೂರಿನಿಂದ ಹೊರಡುವ ರೈಲು 8 ಗಂಟೆಗೆ ಹಾಸನಕ್ಕೆ ತಲುಪಲಿದೆ. ಮುಂಜಾನೆ 4.30ಕ್ಕೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ತಲುಪುತ್ತದೆ.

ಮಂಗಳೂರಿನಿಂದ ಸೋಮವಾರ, ಬುಧವಾರ, ಶನಿವಾರ ಸಂಜೆ 7 ಗಂಟೆಗೆ ಹೊರಡಲಿರುವ ರೈಲು ತಡರಾತ್ರಿ 1.30ಕ್ಕೆ ಹಾಸನಕ್ಕೆ ತಲುಪಲಿದೆ. ಮುಂಜಾನೆ 4.30ಕ್ಕೆ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದು ಸೇರಲಿದೆ. ಮಾರ್ಗದಲ್ಲಿರುವ ನಿಲ್ದಾಣಗಳಾದ ನೆಲಮಂಗಲ, ಕುಣಿಗಲ್, ಯಡಿಯೂರು, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ, ಪುತ್ತೂರು ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *