ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ‘ರಾ ರಾ ರಕ್ಕಮ್ಮ’ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲೂ ಲಕ್ಷಾಂತರ ಕೇಳುಗರು ಮೆಚ್ಚಿಕೊಂಡಿದ್ದಾರೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲ, ಸಿಲಿಬ್ರಿಟಿಗಳು ಕೂಡ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರೀಲ್ಸ್ ನಲ್ಲೂ ರಾ ರಾ ರಕ್ಕಮ್ಮ ಧೂಳ್ ಎಬ್ಬಿಸಿದೆ. ಇನ್ನೂ ಈ ಹಾಡು ಕಿವಿಯಲ್ಲಿ ಗುನುಗುತ್ತಿರುವಾಗಲೇ ಮತ್ತೊಂದು ಸಾಂಗ್ ರಿಲೀಸ್ ಮಾಡಿದೆ ಚಿತ್ರತಂಡ.
Advertisement
ಇಂದು ಸಂಜೆ 5. 02ಕ್ಕೆ ರಿಲೀಸ್ ಆಗಿರುವ ‘ತಣ್ಣನೆ ಬೀಸೋ ಗಾಳಿ’ ಗೀತೆಯು ಲಾಲಿ ಹಾಡಾಗಿದ್ದು, ವಿಜಯ್ ಪ್ರಕಾಶ್ ಸೊಗಸಾಗಿ ಹಾಡಿದ್ದಾರೆ. ಹಾಡು ಕೇಳುತ್ತಾ ರಾಜಕುಮಾರಿ ಎಷ್ಟೊಂದು ಗಾಢನಿದ್ರೆಗೆ ಜಾರಿರಬಹುದು ಎನ್ನುವಷ್ಟರ ಮಟ್ಟಿಗೆ ಗೀತೆ ಇಂಪಾಗಿದೆ. ಸ್ವತಃ ಅನೂಪ್ ಭಂಡಾರಿಯವರೇ ಈ ಗೀತೆಯನ್ನು ಬರೆದಿದ್ದು ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆಯಲ್ಲಿ ಹಾಡು ಮೂಡಿ ಬಂದಿದೆ. ಸಂಗೀತ ಮತ್ತು ಸಾಹಿತ್ಯಕ್ಕೆ ವಿಜಯ್ ಪ್ರಕಾಶ್ ಕಂಠ ಮತ್ತಷ್ಟು ಜೀವ ತುಂಬಿದೆ. ಇದನ್ನೂ ಓದಿ : ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಿಗೆ ಲೆಕ್ಕ ಕೇಳಿದೆ ಆಡಳಿತಾಧಿಕಾರಿ
Advertisement
Advertisement
‘ತಣ್ಣನೆ ಬೀಸೋ ಗಾಳಿ, ಹಾಡಿದೆ ಜೋಜೋ ಲಾಲಿ. ಈ ನನ್ನ ಮಡಿಲೆ ನಿನ್ನಾ ತೂಗೋ ಉಯ್ಯಾಲೆ, ತೂಗೋ ಉಯ್ಯಾಲೆ’ ಎಂದು ಶುರುವಾಗುವ ಗೀತೆಯು, ‘ಕಣ್ಣಿನ ರೆಪ್ಪೆ ಮುಚ್ಚಿ, ನಿದ್ದೆಗೆ ಬೇಗ ಜಾರಿ, ಮಲಗೆ ಮಲಗೆ ನನ್ನ ಮುದ್ದು ಬಂಗಾರಿ, ಮುದ್ದು ಬಂಗಾರಿ’ ಎನ್ನುವಲ್ಲಿಗೆ ಕೊನೆಗೊಳ್ಳುತ್ತದೆ.