ನವದೆಹಲಿ: ಆಪ್ ಜೊತೆಗಿನ ಮೈತ್ರಿ ಖಂಡಿಸಿ ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ಅರವಿಂದರ್ ಸಿಂಗ್ ಲವ್ಲಿ ರಾಜೀನಾಮೆ ನೀಡಿದ ಬೆನ್ನಲೆ ಮಾಜಿ ಶಾಸಕರಾದ ನೀರಜ್ ಬಸೋಯಾ (Neeraj Basoya) ಮತ್ತು ನಸ್ಸೆಬ್ ಸಿಂಗ್ (Naseeb Singh) ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು ಲೋಕಸಭೆ ಚುನಾವಣೆ ಹೊತ್ತಲ್ಲೆ ರಾಷ್ಟ್ರ ರಾಜಧಾನಿಯಲ್ಲಿ ಕೈ ನಾಯಕರಿಗೆ ಆಘಾತವಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ಪತ್ರದಲ್ಲಿ ನೀರಜ್ ಬಸೋಯ ಅವರು ಎಎಪಿ ಜೊತೆಗಿನ ಮೈತ್ರಿಯು ದೆಹಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ದಿನನಿತ್ಯದ “ದೊಡ್ಡ ಅಪಖ್ಯಾತಿ” ಮತ್ತು “ಮುಜುಗರ” ತರುತ್ತಿದೆ ಎಂದು ಹೇಳಿದ್ದಾರೆ, ಕಳೆದ 7 ವರ್ಷಗಳಲ್ಲಿ ಎಎಪಿ ಹಲವಾರು ಹಗರಣಗಳೊಂದಿಗೆ ಸಂಬಂಧ ಹೊಂದಿರುವುದರಿಂದ ಎಎಪಿ ಜೊತೆಗಿನ ನಮ್ಮ ಮೈತ್ರಿ ಅತ್ಯಂತ ಅವಮಾನಕರವಾಗಿದೆ. ಸ್ವಾಭಿಮಾನಿ ಪಕ್ಷದ ನಾಯಕನಾಗಿ ನಾನು ಇನ್ನು ಮುಂದೆ ಪಕ್ಷದೊಂದಿಗೆ ಸಂಬಂಧ ಹೊಂದಲು ಸಾಧ್ಯವಿಲ್ಲ ಎಂದು ನಾನು ನಂಬುತ್ತೇನೆ ಎಂದು ಬಸೋಯಾ ಪತ್ರದಲ್ಲಿ ತಿಳಿಸಿದ್ದಾರೆ.
Advertisement
Former Congress MLAs Neeraj Basoya and Nasseb Singh resign from the primary membership of the party pic.twitter.com/FaBoBXmAjm
— ANI (@ANI) May 1, 2024
Advertisement
ನಸ್ಸೆಬ್ ಸಿಂಗ್ ಅವರು ಖರ್ಗೆ ಅವರಿಗೆ ಬರೆದ ಪತ್ರದಲ್ಲಿ ಪಂಜಾಬ್ ಮತ್ತು ದೆಹಲಿಯಲ್ಲಿ ಕಾಂಗ್ರೆಸ್ ನ ಇಬ್ಭಾಗವನ್ನು ಉಲ್ಲೇಖಿಸಿದ್ದಾರೆ. ನೀವು ದೇವೆಂದರ್ ಯಾದವ್ ಅವರನ್ನು ಡಿಪಿಸಿಸಿ ಮುಖ್ಯಸ್ಥರನ್ನಾಗಿ ನೇಮಿಸಿದ್ದೀರಿ. ಅವರು ಎಐಸಿಸಿ (ಪಂಜಾಬ್ ಉಸ್ತುವಾರಿ) ಆಗಿರುವ ಅವರು ಅರವಿಂದ್ ಕೇಜ್ರಿವಾಲ್ ಅವರ ಸುಳ್ಳು ಅಜೆಂಡಾದ ವಿರುದ್ಧ ದಾಳಿ ಮಾಡುವ ಮೂಲಕ ಪಂಜಾಬ್‌ನಲ್ಲಿ ಪ್ರಚಾರವನ್ನು ನಡೆಸುತ್ತಿದ್ದಾರೆ. ಇಂದು ದೆಹಲಿಯಲ್ಲಿ ಅವರು ಎಎಪಿಯನ್ನು ಹೊಗಳಲು ಮತ್ತು ಬೆಂಬಲಿಸಲು ಆದೇಶ ನೀಡಿದ್ದೀರಿ. ಇತ್ತೀಚಿನ ಬೆಳವಣಿಗೆಗಳಿಂದ ತೀವ್ರ ನೋವು ಮತ್ತು ಅವಮಾನಕ್ಕೊಳಗಾಗಿದ್ದು, ನಾನು ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ತಕ್ಷಣವೇ ವಿಚಾರಣೆಗೆ ಹಾಜರಾಗಿ- ಪ್ರಜ್ವಲ್, ಹೆಚ್.ಡಿ ರೇವಣ್ಣಗೆ ಎಸ್‍ಐಟಿ ನೋಟಿಸ್
Advertisement
Advertisement
ಕಾಂಗ್ರೆಸ್ ದೆಹಲಿಯಲ್ಲಿ ಎಎಪಿಯೊಂದಿಗೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದರೆ, ಎರಡೂ ಪಕ್ಷಗಳು ಪಂಜಾಬ್‌ನಲ್ಲಿ ಪ್ರತಿಸ್ಪರ್ಧಿಗಳಾಗಿದ್ದು, ಪ್ರತ್ಯೇಕ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಆರನೇ ಹಂತದಲ್ಲಿ ದೆಹಲಿಯಲ್ಲಿ ಚುನಾವಣೆ ನಡೆಯಲಿದೆ.
ಇತ್ತ ಮಧ್ಯಪ್ರದೇಶದಲ್ಲಿ (Madhyapradesh) ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ರಾಮ್ನಿವಾಸ್ ರಾವತ್ ಮಂಗಳವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಕಾಂಗ್ರೆಸ್‍ಗೆ ದೊಡ್ಡ ಆಘಾತವಾಗಿದೆ. ರಾವತ್ ಅವರು ದಿಗ್ವಿಜಯ್ ಸಿಂಗ್ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಈ ಹಿಂದೆ ಸಂಸದ ಕಾಂಗ್ರೆಸ್‍ನ ಕಾರ್ಯಕಾರಿ ಅಧ್ಯಕ್ಷರಾಗಿದ್ದರು. ಸಂಸದ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡುತ್ತಿರುವಾಗಲೇ ರಾವತ್ ಪಕ್ಷಾಂತರ ನಡೆದಿರುವುದು ಅಚ್ಚರಿ ಮೂಡಿಸಿದೆ.