ಬೆಂಗಳೂರು: ವಿಧಾನಸೌಧದಲ್ಲಿ (Vidhan Soudha) ಮತ್ತೊಂದು ಮನಿ ಬ್ಯಾಗ್ ಕೇಸ್ ಬೆಳಕಿಗೆ ಬಂದಿದೆ. ವ್ಯಕ್ತಿಯೋರ್ವ 6 ಲಕ್ಷ ರೂ. ಹಣದೊಂದಿಗೆ ವಿಧಾನಸೌಧಕ್ಕೆ ಬಂದಿದ್ದ ಘಟನೆ ನಡೆದಿದೆ.
ಪೋಲೀಸರು ಬ್ಯಾಗ್ (Money Bag) ತಪಾಸಣೆ ಮಾಡಿದಾಗ 6 ಲಕ್ಷ ಹಣ ಪತ್ತೆಯಾಗಿದೆ. ಇಷ್ಟು ಹಣ ತಗೆದುಕೊಂಡು ವಿಧಾನಸೌಧ ಒಳಗೆ ಹೋಗುವಂತಿಲ್ಲ ವಾಪಾಸ್ ಹೋಗಿ ಎಂದು ಪೊಲೀಸರ ತಿಳಿಸಿದ್ದಾರೆ. ಇದನ್ನೂ ಓದಿ: ಸಾಲ ತೀರಿಸಲು ಸಾಲ ಮಾಡುವ ಪರಿಸ್ಥಿತಿ, ನಿಗಮ-ಇಲಾಖೆಗಳಿಗೆ ಹಣ ಕಡಿತ: ವಿಪಕ್ಷ ನಾಯಕ ಆರ್.ಅಶೋಕ್

ನಾನು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ಲೆಟರ್ ಹೆಡ್ ಪಡೆಯಲು ಬಂದಿದ್ದೆ. ದೊಡ್ಡಪ್ಪನಿಗೆ ಹುಷಾರಿಲ್ಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಹಣ ತಂದಿರುವೆ ಎಂದು ಯುವಕ ಹೇಳಿದ್ದಾನೆ. ಈ ಸಂಬಂಧ ಹಣ ತಂದ ಯುವಕನನ್ನ ಪೊಲೀಸರು ವಶಕ್ಕೆ ಪಡೆದು ಎಸಿಪಿ ಕೃಷ್ಣಯ್ಯ ಕಚೇರಿಯಲ್ಲಿ ಕೆಲಕಾಲ ವಿಚಾರಣೆ ನಡೆಸಿ ಹಣ ಕೊಟ್ಟು ಕಳುಹಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಬಜೆಟ್ ಖಾಲಿ ಚೊಂಬಲ್ಲ, ತುಂಬಿದ ಕೊಡ – ಸಾಲ ಆರ್ಥಿಕ ಶಿಸ್ತು ಮೀರಿಲ್ಲ ಎಂದ ಸಿಎಂ

