CinemaCrimeDistrictsKarnatakaLatestMain PostSouth cinema

ಮತ್ತೊಬ್ಬ ರೂಪದರ್ಶಿ ಆತ್ಮಹತ್ಯೆ : ಬೆಚ್ಚಿ ಬೀಳಿಸುತ್ತಿವೆ ಸರಣಿ ಸಾವುಗಳು

ಬಂಗಾಳಿ ಮಾಡೆಲಿಂಗ್ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿದೆ ರೂಪದರ್ಶಿ ಬಿದಿಶಾ ಡಿ ಮಜುಂದಾರ್ ಆತ್ಮಹತ್ಯೆ ಕೇಸ್. ನಟಿ ಮತ್ತು ರೂಪದರ್ಶಿಯಾಗಿ  ಈ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಬಿದಿಶಾ, ಕೋಲ್ಕತ್ತಾದ ದಮ್ ಡಮ್‍ ನಲ್ಲಿರುವ ತಮ್ಮ ಅಪಾರ್ಟಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಮಾಡೆಲ್ ಪಲ್ಲವಿ ಡೇ ಕೂಡ ಆತ್ಮಹತ್ಯೆಗೆ ಶರಣಾಗಿ ದಿಗ್ಭ್ರಮೆ ಮೂಡಿಸಿದ್ದರು. ಇದನ್ನೂ ಓದಿ : ತೆರೆಯ ಮೇಲೂ ನಿರ್ದೇಶಕನಾಗಿ ನಟಿಸಿದ ಯೋಗರಾಜ್ ಭಟ್

ಕೇವಲ 21 ವರ್ಷದ ಈ ನಟಿ ಕಮ್ ಮಾಡೆಲ್, ನಾಲ್ಕು ತಿಂಗಳ ಹಿಂದೆಯಷ್ಟೇ ಬಾಡಿಗೆ ಪಡೆದು, ಈ ಅಪಾರ್ಟ್ಮೆಂಟ್‌ನಲ್ಲಿ ವಾಸವಿದ್ದರೆ, ಇದೀಗ ಮೇ 25 ರಂದು ಬುಧವಾರ ಸಂಜೆ ನಾಗರ್ ಬಜಾರ್ ಪ್ರದೇಶದಲ್ಲಿರುವ ಆಕೆ ಫ್ಲಾಟ್‌ನಿಂದ ಪೊಲೀಸರು ಶವವನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ : ಪೊಲೀಸ್ ಪೇದೆ ನನ್ನನ್ನು ಸೆಕ್ಸ್ ವರ್ಕರ್ ರೀತಿ ನೋಡಿದ : ಮಲಯಾಳಿ ನಟಿ ಅರ್ಚನಾ ಆರೋಪ

ಮೂಲಗಳ ಪ್ರಕಾರ ಆಕೆ ಡೇಟ್ ನಲ್ಲಿದ್ದರು ಎನ್ನಲಾಗುತ್ತಿದೆ. ಇತ್ತೀಷೆಗಷ್ಟೇ ಅವರು ಗೆಳೆಯನಿಂದ ದೂರವಾಗಿ, ಆ ಖಿನ್ನತೆಯಲ್ಲಿ ಬಳಲುತ್ತಿದ್ದರು ಎನ್ನುವ ಸುದ್ದಿಯಿದೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಕೂಡ ಸಿಕ್ಕಿದ್ದು, ಪೊಲೀಸ್ ಅಧಿಕಾರಿಗಳು ಅದನ್ನು ವಶಪಡಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದೇಹವನ್ನು ಕಳುಹಿಸಲಾಗಿದೆ. ಇದನ್ನೂ ಓದಿ : ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು

ಮಾಡೆಲಿಂಗ್ ಜತೆ ಹಲವು ವೆಬ್ ಸಿರೀಸ್ ಮತ್ತು ಕಿರುಚಿತ್ರಗಳಲ್ಲೂ ಬಿದಿಶಾ ನಟಿಸಿದ್ದಾರೆ. ಆನಿರ್ಬೇಡ್ ಚಟ್ಟೋಪಾಧ್ಯಾಯ ನಿರ್ದೇಶನದ ‘ಭಾರ್ ದಿ ಕ್ಲೌನ್’ ಕಿರುಚಿತ್ರದಲ್ಲಿ ಇವರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಕಿರುಚಿತ್ರ ಬಿದಿಶಾಗೆ ಹೆಸರು ತಂದುಕೊಟ್ಟಿತ್ತು. ಸಾವಿಗೆ ನಿಖರವಾದ ಕಾರಣ ಸಿಗದೇ ಇದ್ದರೂ, ತನಿಖೆಯನ್ನು ಚುರುಕುಗೊಳಿಸಲಾಗಿದೆ ಎನ್ನಲಾಗುತ್ತಿದೆ.

Leave a Reply

Your email address will not be published.

Back to top button