ಕತಾರ್: ‘ಎಲ್‌ಜಿಬಿಟಿಕ್ಯು’ (ಸಲಿಂಗಕಾಮಿ ಅಥವಾ ತೃತೀಯಲಿಂಗಿ) ಸಮುದಾಯವನ್ನು ಬೆಂಬಲಿಸಲು ಕಾಮನಬಿಲ್ಲಿನ ಟೀ ಶರ್ಟ್ (Rainbow Shirt) ಧರಿಸಿದ್ದ ಅಮೆರಿಕದ ವರದಿಗಾರ (Journalist) ಕತಾರ್‌ನಲ್ಲಿ (Qatar) ಫಿಫಾ ವಿಶ್ವಕಪ್ (FIFA World Cup) ವರದಿಮಾಡುತ್ತಿದ್ದಾಗ ಸಾವನ್ನಪ್ಪಿದ್ದ. ಈ ಘಟನೆ ನಡೆದ ಕೇವಲ 2 ದಿನದ ಬಳಿಕ ಮತ್ತೊಬ್ಬ ವರದಿಗಾರ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಕತಾರ್‌ನ ಫೋಟೋ ಜರ್ನಲಿಸ್ಟ್ (Photojournalist), ಅಲ್ ಕಾಸ್ ಟಿವಿಯಲ್ಲಿ ಕೆಲಸ ಮಾಡುತ್ತಿದ್ದ ಖಾಲಿದ್ ಅಲ್-ಮಿಸ್ಲಾಮ್ ಭಾನುವಾರ ವಿಶ್ವಕಪ್ ವರದಿ ಮಾಡುತ್ತಿದ್ದ ಸಂದರ್ಭ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆದರೆ ಅವರ ಸಾವಿಗೆ ಅಧಿಕೃತ ಕಾರಣ ಏನೆಂಬುದನ್ನು ಇನ್ನೂ ಅಧಿಕಾರಿಗಳು ದೃಢಪಡಿಸಿಲ್ಲ.
Advertisement
Advertisement
ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ವರದಿ ಮಾಡುತ್ತಿದ್ದ ಸಂದರ್ಭ ಫೋಟೋ ಜರ್ನಲಿಸ್ಟ್ ಅಲ್-ಮಿಸ್ಲಾಮ್ ಸಾವನ್ನಪ್ಪಿದ್ದಾರೆ ಎಂದು ಗಲ್ಫ್ ಟೈಮ್ಸ್ ಟ್ವಿಟ್ಟರ್‌ನಲ್ಲಿ ತಿಳಿಸಿದೆ. ಅಲ್ ಕಾಸ್ ಟಿವಿ ಕೂಡಾ ನೇರ ಪ್ರಸಾರದಲ್ಲಿ ಈ ಘಟನೆಯನ್ನು ದೃಢಪಡಿಸಿದೆ. ಹೆಚ್ಚಿನ ವಿವರಗಳಿಗೆ ಕಾಯುತ್ತಿರುವುದಾಗಿ ಹೇಳಿದೆ. ಇದನ್ನೂ ಓದಿ: ಶರದ್ ಪವಾರ್‌ಗೆ ಜೀವ ಬೆದರಿಕೆ – ಕೇಸ್ ದಾಖಲು
Advertisement
ಈ ಘಟನೆಗೂ 2 ದಿನ ಮೊದಲು ಶುಕ್ರವಾರ ವಿಶ್ವಕಪ್ ವೇಳೆ ವರದಿ ಮಾಡುತ್ತಿದ್ದ ಅಮೆರಿಕದ ಪತ್ರಕರ್ತ ಗ್ರಾಂಟ್ ವಾಲ್ ಅವರು ಏಕಾಏಕಿ ಕುಸಿದುಬಿದ್ದು ಸಾವನ್ನಪ್ಪಿದ್ದರು. ಗ್ರಾಂಟ್ ಅವರು ಕತಾರ್‌ನಲ್ಲಿ ವಿಶ್ವಕಪ್ ಪ್ರಾರಂಭವಾದ ದಿನ ಎಲ್‌ಜಿಬಿಟಿಕ್ಯು ಸಮುದಾಯವನ್ನು ಬೆಂಬಲಿಸಿ ಮಳೆಬಿಲ್ಲಿನ ಟೀಶರ್ಟ್ ಧರಿಸಿ ವರದಿ ಮಾಡಲು ಬಂದಿದ್ದರು. ಈ ಹಿನ್ನೆಲೆ ಕತಾರ್‌ನಲ್ಲಿ ಅಧಿಕಾರಿಗಳು ಗ್ರಾಂಟ್ ಅವರನ್ನು ವಶಕ್ಕೆ ಪಡೆದಿದ್ದರು. ಘಟನೆಯನ್ನು ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲು ಮುಂದಾಗಿದ್ದಾಗ ಅವರ ಫೋನ್ ಅನ್ನು ಕಸಿದುಕೊಳ್ಳಲಾಗಿತ್ತು ಎಂದು ಗ್ರಾಂಟ್ ಬಳಿಕ ತಿಳಿಸಿದ್ದರು.
Advertisement
ಈ ಎಲ್ಲಾ ಘಟನೆಯ ಬಳಿಕ ಭದ್ರತಾ ಅಧಿಕಾರಿಯೊಬ್ಬರು ಗ್ರಾಂಟ್ ಅವರನ್ನು ಸಂಪರ್ಕಿಸಿ, ಕ್ಷಮೆಯಾಚಿಸಿದ್ದರು. ಅವರಿಗೆ ಕ್ರೀಡಾಂಗಣದ ಒಳಗೆ ಪ್ರವೇಶಿಸಲು ಅನುಮತಿಯನ್ನೂ ನೀಡಲಾಗಿತ್ತು. ಆದರೆ ಶುಕ್ರವಾರ ಅವರ ಹಠಾತ್ ನಿಧನವಾಗಿದೆ. ಅವರ ಸಾವಿನ ಹಿಂದೆ ಕತಾರ್ ಸರ್ಕಾರದ ಕೈವಾಡವಿದೆ ಎಂದು ಗ್ರಾಂಟ್ ಸಹೋದರ ಎರಿಕ್ ಆರೋಪಿಸಿದ್ದಾರೆ. ಇದನ್ನೂ ಓದಿ: ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಚೀನಾ ರಾಯಭಾರ ಕಚೇರಿಯಿಂದ ದೇಣಿಗೆ: ಅಮಿತ್ ಶಾ